Advertisement

ಕನ್ನಡದ ಹಿರಿಮೆ ಪರಭಾಷಿಕರಿಗೆ ಕಲಿಸುವ ಗುಣ ಕನ್ನಡಿಗರದಾಗಲಿ

09:48 PM Nov 01, 2019 | Lakshmi GovindaRaju |

ನೆಲಮಂಗಲ: ಶ್ರೀಗಂಧದ ಸುವಾಸನೆ ಹೊಂದಿರುವ ಕರುನಾಡಿನ ಜನರು ಪರಭಾಷಿಕರಿಗೆ ಕನ್ನಡ ಭಾಷೆಯ ಮಹಿಮೆ, ಹಿರಿಮೆಯನ್ನು ಪರಿಚಯಿಸಲು ಮುಂದಾಗಬೇಕು ಎಂದು ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಸಲಹೆ ನೀಡಿದರು. ಪಟ್ಟಣದ ತಾಲೂಕು ಕಚೇರಿ ಅವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ದೇಶದ ಸರ್ವ ಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಭಾಷೆ 8 ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಅತ್ಯುತ್ತಮ ಸ್ಥಾನ ಪಡೆದುಕೊಂಡಿದೆ , ರಾಜ್ಯದಲ್ಲಿ ಪ್ರಮುಖ ನಗರಗಳಲ್ಲಿ ಶೇಕಡಾ 70ರಷ್ಟು ಜನರು ಬೇರೆ ರಾಜ್ಯ ಹಾಗೂ ದೇಶದ ಜನರಿದ್ದಾರೆ, ಅವರಿಗೆ ಕನ್ನಡದ ಹಿರಿಮೆಯನ್ನು ತಿಳಿಸಲು ನಾವೆಲ್ಲರು ಮುಂದಾಗಬೇಕು ಎಂದರು.

ತಹಸೀಲ್ದಾರ್‌ ಶ್ರೀನಿವಾಸಯ್ಯ ಮಾತನಾಡಿ ಎಲ್ಲರೂ ಕನ್ನಡ ಕಲಿಯುವ ಮೂಲಕ ನಮ್ಮ ಮಾತೃಭಾಷೆಯ ಉಳಿವಿಗೆ ನಾವೆಲ್ಲರೂ ಶ್ರಮಿಸಬೇಕು, ನಮ್ಮ ನಾಡು,ನುಡಿ ರಕ್ಷಣೆಗೆ ಪ್ರತಿಯೊಬ್ಬರು ನಿಸ್ವಾರ್ಥ ಸೇವೆ ಸಲ್ಲಿಸ‌ಬೇಕು, ಕರುನಾಡಿನ ಇತಿಹಾಸ ದೇಶದ ಅಭಿವೃದ್ಧಿಗೆ ಅನುಕೂಲವಾಗಿದೆ ಎಂದರು.

ಪ್ರಶಸ್ತಿ ಪುರಸ್ಕೃತರು: ತಾಲೂಕಿನ ರಾಜ್ಯೋತ್ಸವ ಸಮಾರಂಭದಲ್ಲಿ ಕಲಾರಂಗ ಸಮಾಜ ಸೇವೆಯಲ್ಲಿ ಪೂಜಗಯ್ಯ, ಸಮಾಜ ಸೇವೆಯಲ್ಲಿ ರವಿ, ಅಪ್ರೋಜ್‌ ಪಾಷ್‌, ರಮೇಶ್‌ ಹಾಗೂ ಶಿಕ್ಷಣ ಹಾಗೂ ಸಾಹಿತ್ಯದಲ್ಲಿ ಮಲ್ಲಿಕಾರ್ಜುನಯ್ಯಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಉದ್ಘಾಟನೆಗೆ ಸೀಮಿತ: ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿದ ಶಾಸಕರು ಕಾರ್ಯಕ್ರಮ ಉದ್ಘಾಟಿಸಿ ಸನ್ಮಾನಿಸಿ ಸಮಾರಂಭದಿಂದ ನಿರ್ಗಮಿಸಿದರು. ಅವರ ಜೊತೆ ಕನ್ನಡಪರ ಹೋರಾಟಗಾರರು, ಮುಖಂಡರು, ಕೆಲವು ಅಧಿಕಾರಿಗಳು, ಸಂಘಸಂಸ್ಥೆಯ ಕಾರ್ಯಕರ್ತರು ಶಾಸಕರ ಜೊತೆ ಹೆಜ್ಜೆ ಹಾಕಿದರು. ರಾಜ್ಯೋತ್ಸವದ ಬಗ್ಗೆ ಉಪನ್ಯಾಸ ಮಾಡುವಾಗ ವೇದಿಕೆಯಲ್ಲಿ ಇಬ್ಬರು ಅಧಿಕಾರಿಗಳ ಉಪಸ್ಥಿತಿಯಿತು,

Advertisement

ಇನ್ನೂ ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ, ಮುಖ್ಯಅತಿಥಿಗಳು, ಆಹ್ವಾನಿತರು ಮಾತನಾಡಲು ಅವಕಾಶವಿಲ್ಲ, ಉಪನ್ಯಾಸ ಅಧ್ಯಕ್ಷರ ಭಾಷಣದ ನಂತರ 5 ನಿಮಿಷಕ್ಕೆ ಅಂತ್ಯಗೊಳಿಸಿದರು. ಮಾಡಲೇ ಬೇಕಾದ ಕಾರಣಕ್ಕೆ ರಾಜ್ಯೋತ್ಸವ ಮಾಡಿದಂತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂತು.

ಜನ‌ಪ್ರತಿನಿಧಿಗಳ ಗೈರು: ತಾಲೂಕು ಆಡಳಿತದಿಂದ ನಡೆಸಿದ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಪ್ರಕಟವಾದ ಜನಪ್ರತಿನಿಧಿಗಳಲ್ಲಿ ಶಾಸಕರು ಬಿಟ್ಟರೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ,ಎನ್‌ಡಿಎ, ಸೇರಿದಂತೆ ಯಾವ ಜನಪ್ರತಿನಿಧಿಗಳು ಹಾಜರಾಗದೆ ಗೈರಾಗಿದ್ದರು.ಇನ್ನೂ ಸ್ಥಾಯಿ ಸಮಿತಿ ಅಧ್ಯಕ್ಷರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಹಾಕದ ವಿಚಾರದಲ್ಲಿ ಶಾಸಕರ ಎದುರು ರಂಗನಾಥ್‌ ಬೇಸರ ವ್ಯಕ್ತಪಡಿಸದರು.

ಸಂದರ್ಭದಲ್ಲಿ ಬಿಇಓ ರಮೇಶ್‌ ಕೆಸಿ, ಡಿವೈಎಸ್ಪಿ ಮೋಹನ್‌ಕುಮಾರ್‌, ಮುಖ್ಯಾಧಿಕಾರಿ ಶಿವಪ್ರಸಾದ್‌, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮೀನಾರಾಯಣಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ರಂಗನಾಥ್‌,ಸಹಪ್ರಾಧ್ಯಾಪಕ ಜಿ.ಗಂಗರಾಜು , ಕನ್ನಡ ಪರ ಸಂಘಟನೆಯ ನರಸಿಂಹಯ್ಯ, ಉಮೇಶ್‌ ಗೌಡ್ರು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next