ಹೊಸದಿಲ್ಲಿ: ಹತ್ತು ತಂಡಗಳ ನಡುವಿನ 2022ರ ಐಪಿಎಲ್ ಪಂದ್ಯಾವಳಿ ಭಾರತದಲ್ಲೇ ನಡೆಯುವುದು ಬಹುತೇಕ ಖಾತ್ರಿಗೊಂಡಿದೆ.
ಆದರೆ ಕೋವಿಡ್ ಮುನ್ನೆಚ್ಚರಿಕೆಯ ಕಾರಣ 3 ಸೀಮಿತ ತಾಣಗಳಲ್ಲಿ ಪಂದ್ಯಗಳನ್ನು ಆಯೋಜನೆ ಗೊಳ್ಳುವ ಸಾಧ್ಯತೆ ಇದೆ.
ಮುಂಬಯಿ, ಪುಣೆ ಮತ್ತು ಅಹ್ಮದಾಬಾದ್‌ನ ಒಟ್ಟು 6 ಕೇಂದ್ರಗಳಲ್ಲಿ ಪಂದ್ಯಗಳನ್ನು ನಡೆಸುವುದು ಬಿಸಿಸಿಐ ಯೋಜನೆ ಯಾಗಿದೆ ಎಂದು ತಿಳಿದು ಬಂದಿದೆ.
ಲೀಗ್ ಹಂತದಲ್ಲಿ 70 ಪಂದ್ಯಗಳಿವೆ. ಇವೆಲ್ಲವನ್ನೂ ಮಹಾರಾಷ್ಟ್ರದಲ್ಲಿ ಹಾಗೂ ಪ್ಲೇ ಆಫ್ ಪಂದ್ಯಗಳನ್ನು ಅಹ್ಮದಾಬಾದ್‌ನಲ್ಲಿ ಆಡಿಸುವುದು ಬಿಸಿಸಿಐ ಯೋಜನೆ.
ಮುಂಬಯಿಯ 4 ಕೇಂದ್ರಗಳೆಂದರೆ ವಾಂಖೇಡೆ ಸ್ಟೇಡಿಯಂ, ಬ್ರೆಬೋರ್ನ್ ಸ್ಟೇಡಿಯಂ, ಡಾ| ಡಿ.ವೈ. ಪಾಟೀಲ್ ನ್ಪೋರ್ಟ್ಸ್ ಸ್ಟೇಡಿಯಂ ಮತ್ತು ಜಿಯೋ ಸ್ಟೇಡಿಯಂ. ಐಪಿಎಲ್ ವೇಳಾಪಟ್ಟಿಯ ವಿವರಗಳನ್ನು ಬಿಸಿಸಿಐ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಮಾ. 27-ಮೇ 28 ಐಪಿಎಲ್‌ನ ಸಂಭಾವ್ಯ ದಿನಾಂಕವಾಗಿದೆ.