ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ಆರ್. ಅಶ್ವಿನ್ ಮತ್ತು ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಿದೆ.
ಅರ್ಜುನ ಪ್ರಶಸ್ತಿಗೆ ಶಿಖರ್ ಧವನ್, ಕೆ.ಎಲ್. ರಾಹುಲ್ ಮತ್ತು ಬುಮ್ರಾ ಅವರ ಹೆಸರನ್ನು ಬಿಸಿಸಿಐ ಸೂಚಿಸಿದೆ. ಆದರೆ ಅರ್ಜುನ ಪ್ರಶಸ್ತಿಗೆ ಯಾವುದೇ ವನಿತಾ ಆಟಗಾರರ ಹೆಸರನ್ನು ಸೂಚಿಸಿಲ್ಲ.
“ನಾವು ಸುದೀರ್ಘ ಚರ್ಚೆ ನಡೆಸಿದ ಬಳಿಕ ಖೇಲ್‌ರತ್ನಕ್ಕಾಗಿ ಅಶ್ವಿ ನ್ ಮತ್ತು ಮಿಥಾಲಿ ರಾಜ್ ಅವರ ಹೆಸರನ್ನು ಅಂತಿಮಗೊಳಿಸಿದ್ದೇವೆ. ಅರ್ಜುನ ಪ್ರಶಸ್ತಿಗೆ ಧವನ್ ಅವರನ್ನು ಮತ್ತೆ ಶಿಫಾರಸು ಮಾಡುತ್ತಿದ್ದೇವೆ. ಜತೆಗೆ ರಾಹುಲ್ ಮತ್ತು ಬುಮ್ರಾ ಅವರ ಹೆಸರನ್ನೂ ಸೂಚಿಸಿದ್ದೇವೆ’ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿದೆ. ಕಳೆದ ವರ್ಷ ಧವನ್‌ಗೆ ಅರ್ಜುನ ಪ್ರಶಸ್ತಿ ಕೈತಪ್ಪಿತ್ತು.
ಮಿಥಾಲಿ ಸಾಧನೆ
ಮಿಥಾಲಿ ರಾಜ್ ಕಳೆದ ವಾರಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ವರ್ಷಗಳನ್ನು ಪೂರೈಸಿದ ಮೈಲುಗಲ್ಲು ನೆಟ್ಟಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ಮಿಥಾಲಿ ಹೊಂದಿದ್ದಾರೆ.
Related Articles
ಅಶ್ವಿನ್ 79 ಟೆಸ್ಟ್ ಪಂದ್ಯಗಳನ್ನಾಡಿ 413 ವಿಕೆಟ್. ಏಕದಿನ ಮತ್ತು ಟಿ20ಯಲ್ಲಿ ಕ್ರಮವಾಗಿ 150 ಹಾಗೂ 42 ವಿಕೆಟ್ ಕಿತ್ತ ಸಾಧನೆ ಇವರದು.
ಅರ್ಜುನಕ್ಕೆ ರವಿ ದಹಿಯಾ, ದೀಪಕ್
ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಸ್ಟಾರ್ ಕುಸ್ತಿಪಟುಗಳಾದ ರವಿ ದಹಿಯಾ ಮತ್ತು ದೀಪಕ್ ಕುಮಾರ್ ಅವರ ಹೆಸರನ್ನು ಭಾರತೀಯ ಕುಸ್ತಿ ಫೆಡರೇಶನ್ ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದೆ. ಜತೆಗೆ ಕೋಚ್‌ಗಳಾದ ಕುಲದೀಪ್ ಮಲಿಕ್ ಮತ್ತು ಸುಜೀತ್ ಮಾನ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಲಾಗಿದೆ.
ಖೇಲ್‌ರತ್ನ ರೇಸ್‌ನಲ್ಲಿ ಚೆಟ್ರಿ, ನೀರಜ್, ಶುಭಾಂಕರ್
ಇದೇ ವೇಳೆ ಭಾರತೀಯ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರ ಹೆಸರನ್ನು ಕೂಡ ಖೇಲ್‌ರತ್ನ, ಮಹಿಳಾ ಆಟಗಾರ್ತಿ ಬಾಲಾ ದೇವಿ ಅರ್ಜುನ, ಕೋಚ್ ಗ್ಯಾಬ್ರಿಯಲ್ ಜೋಸೆಪ್ ಅವರನ್ನು ದ್ರೋಣಚಾರ್ಯ ಪ್ರಶಸ್ತಿಗೆ ಅಖೀಲ ಭಾರತ ಫುಟ್‌ಬಾಲ್ ಫೆಡರೇಷನ್ ಶಿಫಾರಸು ಮಾಡಿದೆ.
ಭಾರತದ ಡಬ್ಬಲ್ ಟ್ರ್ಯಾಪ್ ಶೂಟರ್, ವಿಶ್ವ ಚಾಂಪಿಯನ್ ಅಂಕುರ್ ಮಿತ್ತಲ್ ಮತ್ತು ಒಲಿಂಪಿಕ್ಸ್ ಅರ್ಹತೆ ಪಡೆದ ಶೂಟರ್ ಅಂಜುಮ್ ಮೌದ್ಗಿಲ್ ಅವರನ್ನು ರಾಷ್ಟ್ರೀಯ ರೈಫಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಖೇಲ್‌ರತ್ನಕ್ಕೆ ಹೆಸರು ಸೂಚಿಸಿದೆ. ಅರ್ಜುನಕ್ಕೆ ಅಭಿಷೇಕ್ ವರ್ಮ ಮತ್ತು ಇಳವೆನಿಲ್ ವಲರಿಯನ್ ಅವರ ಹೆಸರನ್ನು ಸೂಚಿಸಲಾಗಿದೆ.
ಸ್ಟಾರ್ ಜಾವಲಿನ್ ಎಸೆತಗಾರ ನೀರಜ್ ಚೋಪ್ರ ಹಾಗೂ ದೇಶದ ಮತೋರ್ವ ಪ್ರಮುಖ ಗಾಲ#ರ್ ಶುಭಾಂಕರ್ ಶರ್ಮ, ಆರ್ಚರಿ ವಿಶ್ವಕಪ್‌ನಲ್ಲಿ ಮೂರು ಬಾರಿ ಬೆಳ್ಳಿ ಪದಕ ವಿಜೇತೆ ಜ್ಯೋತಿ ಸುರೇಖಾ ವೆನ್ನಂ ಅವರ ಹೆಸರನ್ನು ಖೇಲ್‌ರತ್ನಕ್ಕೆ ಶಿಫಾರಸು ಮಾಡಲಾಗಿದೆ. ಆರ್ಚರಿ ಕೋಚ್ ಲಿಂಬರಾಮ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಲಾಗಿದೆ.