Advertisement

“ಇರಾನಿ ಕಪ್‌’ಪಂದ್ಯ ಇಂದೋರ್‌ನಿಂದ ಸ್ಥಳಾಂತರ

11:44 PM Feb 14, 2023 | Team Udayavani |

ಹೊಸದಿಲ್ಲಿ: ಕಳೆದ ಸಲದ ರಣಜಿ ಚಾಂಪಿಯನ್‌ ಮಧ್ಯಪ್ರದೇಶ ಮತ್ತು ಶೇಷ ಭಾರತ (ರೆಸ್ಟ್‌ ಆಫ್ ಇಂಡಿಯಾ) ತಂಡಗಳ ನಡುವೆ ಏರ್ಪಡುವ “ಇರಾನಿ ಕಪ್‌’ ಪಂದ್ಯ ಇಂದೋರ್‌ನಿಂದ ಸ್ಥಳಾಂತರಗೊಳ್ಳಲಿದೆ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಇದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

Advertisement

ಭಾರತ-ಆಸ್ಟ್ರೇಲಿಯ ನಡುವೆ ಧರ್ಮಶಾಲಾದಲ್ಲಿ ನಡೆಯಬೇಕಿದ್ದ 3ನೇ ಟೆಸ್ಟ್‌ ಪಂದ್ಯ ಇಂದೋರ್‌ಗೆ ಸ್ಥಳಾಂತರಗೊಂಡಿರುವುದೇ ಇದಕ್ಕೆ ಕಾರಣ. 3ನೇ ಟೆಸ್ಟ್‌ ಮಾ. 1ರಿಂದ 5ರ ತನಕ ಇಂದೋರ್‌ನಲ್ಲಿ ನಡೆಯಲಿದೆ. ಇದೇ ದಿನಾಂಕದಲ್ಲಿ 2021-22ನೇ ಸಾಲಿನ ಇರಾನಿ ಕಪ್‌ ಪಂದ್ಯವೂ ಏರ್ಪಡಲಿದೆ.

ಈ ಪಂದ್ಯವನ್ನು ಗ್ವಾಲಿಯರ್‌ಗೆ ಸ್ಥಳಾಂತರಿಸುವಂತೆ ಮಧ್ಯಪ್ರದೇಶ ಕ್ರಿಕೆಟ್‌ ಮಂಡಳಿ ಬಿಸಿಸಿಐಗೆ ಮನವಿ ಮಾಡಿದೆ.
ಇದು ಪ್ರಸಕ್ತ ಋತುವಿನ 2ನೇ “ಇರಾನಿ ಕಪ್‌’ ಪಂದ್ಯ ಎಂಬುದು ವಿಶೇಷ. ರಣಜಿ ಚಾಂಪಿಯನ್‌ ಸೌರಾಷ್ಟ್ರ ಮತ್ತು ಶೇಷ ಭಾರತ ತಂಡಗಳು 2022ರ ಅಕ್ಟೋಬರ್‌ ನಲ್ಲಿ ರಾಜ್‌ಕೋಟ್‌ನಲ್ಲಿ ಎದುರಾಗಿದ್ದವು. ಶೇಷ ಭಾರತ
ಹಾಲಿ ಚಾಂಪಿಯನ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next