Advertisement

ಐಪಿಎಲ್‌ಗೆ 2 ತಂಡಗಳ ಆಯ್ಕೆ: ಬಿಡ್‌ ಕರೆದ ಬಿಸಿಸಿಐ

09:45 PM Aug 31, 2021 | Team Udayavani |

ಮುಂಬೈ: ಐಪಿಎಲ್‌ 14ನೇ ಆವೃತ್ತಿಯ ಉಳಿದ ಪಂದ್ಯಗಳ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಬಿಸಿಸಿಐ 2022ರ ಐಪಿಎಲ್‌ಗೆ ಎರಡು ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದೆ. ತಂಡಗಳನ್ನು ಪಡೆಯಲು ಬಿಡ್‌ ಮಾಡಲು ಬಿಸಿಸಿಐ ಸೂಚಿಸಿದೆ.

Advertisement

ಒಂದು ತಂಡಕ್ಕೆ 2,000 ಕೋಟಿ ರೂಪಾಯಿ ಮೂಲಬೆಲೆಯನ್ನು ನಿಗದಿಪಡಿಸಿದೆ. ಅಲ್ಲಿಗೆ ಎರಡು ತಂಡಗಳ ಮಾರಾಟದಿಂದ ಕನಿಷ್ಠ 5,000 ಕೋಟಿ ರೂಪಾಯಿ ಲಾಭ ಗಳಿಸುವ ನಿರೀಕ್ಷೆ ಬಿಸಿಸಿಐನದ್ದು! ಆರಂಭದಲ್ಲಿ ಈ ಮೂಲಬೆಲೆಯನ್ನು 1,700 ಕೋಟಿ ರೂಪಾಯಿಗೆ ನಿಗದಿಗೊಳಿಸಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಇದರಲ್ಲಿ ಏರಿಕೆ ಮಾಡಲಾಯಿತು.

ದಾಖಲಾತಿಗೆ 75 ಕೋಟಿ ರೂ.: ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಬಯಸುವ ಕಂಪನಿಗಳು ಆರಂಭದಲ್ಲಿ 75 ಕೋಟಿ ರೂ. ನೀಡಿ ಬಿಡ್ಡಿಂಗ್‌ ದಾಖಲಾತಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಬಿಡ್ಡಿಂಗ್‌ ದಾಖಲೆಯನ್ನು ಪಡೆಯಲು ಹಾಗೂ ಲೀಗ್‌ನ ಫ್ರಾಂಚೈಸಿಯನ್ನು ಪಡೆದುಕೊಳ್ಳಲು ಕನಿಷ್ಠ 3,000 ಕೋಟಿ ರೂಪಾಯಿಯ ವಾರ್ಷಿಕ ವಹಿವಾಟು ಹೊಂದಿರಬೇಕು. ಆಗ ಮಾತ್ರವೇ ಈ ಬಿಡ್ಡಿಂಗ್‌ನಲ್ಲಿ ಭಾಗಿಯಾಗಲು ಅವಕಾಶವಿದೆ ಎಂದು ಬಿಸಿಸಿಐ ತಿಳಿಸಿದೆ.

ಜಂಟಿ ಬಿಡ್ಡಿಂಗ್ಗೆ ಅವಕಾಶ: ಮೂರು ಪ್ರತ್ಯೇಕ ಉದ್ಯಮ ಸಂಸ್ಥೆಗಳು ಜತೆಯಾಗಿ ಪಾಲ್ಗೊಳ್ಳಲು ಬಯಸಿದರೆ ಅದಕ್ಕೂ ಅವಕಾಶವಿದೆ. ಆದರೆ ಮೂರಕ್ಕಿಂತ ಹೆಚ್ಚಿನ ಸಂಸ್ಥೆಗಳಿಗೆ ಜಂಟಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಹೊಸ ಐಪಿಎಲ್‌ ಪ್ರಾಂಚೈಸಿಯನ್ನು ಕೊಂಡುಕೊಳ್ಳಲು ಹಲವಾರು ಉದ್ಯಮ ಸಂಸ್ಥೆಗಳು ಈಗಾಗಲೇ ತುದಿಗಾಲಲ್ಲಿ ನಿಂತಿದ್ದು, ಅದಾನಿ, ಟೊರೆಂಟ್‌ ಮತ್ತಿತರ ಕಂಪೆನಿಗಳು ರೇಸ್‌ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next