Advertisement

ಪದ್ಮ ಭೂಷಣ ಪ್ರಶಸ್ತಿಗೆ ಧೋನಿ ಹೆಸರು ಸೂಚಿಸಿದ ಬಿಸಿಸಿಐ

03:19 PM Sep 20, 2017 | udayavani editorial |

ಹೊಸದಿಲ್ಲಿ : ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ಹಾಗೂ ಹಾಲಿ ಆಟಗಾರನಾಗಿರುವ 36ರ ಹರೆಯದ ಮಹೇಂದ್ರ ಸಿಂಗ್‌ ಧೋನಿ ಅವರನ್ನು, ಕ್ರಿಕೆಟಿಗೆ ಅವರು ನೀಡಿರುವ ಮಹೋನ್ನತ ಕಾಣಿಕೆಯನ್ನು  ಗುರುತಿಸಿ, ದೇಶದ ಮೂರನೇ ಅತ್ಯುಚ್ಚ  “ಪದ್ಮ ಭೂಷಣ’ ಪೌರ ಪ್ರಶಸ್ತಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಾಮಾಂಕನ ಮಾಡಿದೆ.

Advertisement

ಹಿರಿಯ ಬಿಸಿಸಿಐ ಅಧಿಕಾರಿಯೋರ್ವರು ಈ ವಿಷಯವನ್ನು ದೃಢೀಕರಿಸಿ, ಧೋನಿ ಅವರನ್ನು  ಬಿಸಿಸಿಐ, ಏಕೈಕ ಆಟಗಾರನಾಗಿ ಪದ್ಮ ಪ್ರಶಸ್ತಿಗೆ ಸರ್ವಾನುಮತದಿಂದ ನಾಮಾಂಕನ ಮಾಡಿದೆ ಎಂದು ಹೇಳಿದ್ದಾರೆ. 

ಧೋನಿ ಅವರು ಎರಡು ವಿಶ್ವ ಪ್ರಶಸ್ತಿಯನ್ನು (2011ರಲ್ಲಿ 50 ಓವರ್‌ಗಳ ವಿಶ್ವ ಕಪ್‌ ಮತ್ತು 2007ರಲ್ಲಿ ವಿಶ್ವ ಟಿ-20) ದೇಶಕ್ಕೆ ಗೆದ್ದುಕೊಟ್ಟಿದ್ದಾರೆ; ಹತ್ತಿರ ಹತ್ತಿರ 10,000 ರನ್‌ ಬಾರಿಸಿದ್ದಾರೆ; 90 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಪದ್ಮ ಪ್ರಶಸ್ತಿಗೆ ಬಿಸಿಸಿಐ ನಾಮಾಂಕನಕ್ಕೆ ಇವರಿಗಿಂತ ಹೆಚ್ಚು ಯೋಗ್ಯರಿರುವ ಬೇರೊಬ್ಬ ಆಟಗಾರನಿಲ್ಲ ಎಂದು ತಮ್ಮ ಹೆಸರು ತಿಳಿಸಬಯಸದ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. 

ಬಿಸಿಸಿಐ ಈ ವರ್ಷ ಪದ್ಮ ಪ್ರಶಸ್ತಿಗೆ ಬೇರೆ ಯಾವುದೇ ನಾಮಂಕನವನ್ನು ಕಳಿಸಿಲ್ಲ. ಧೋನಿ ಅವರು 302 ಏಕದಿನ ಪಂದ್ಯಗಳನ್ನಾಡಿ 9,737 ರನ್‌ ಬಾರಿಸಿದ್ದಾರೆ; 90 ಟೆಸ್ಟ್‌ ಪಂದ್ಯಗಳನ್ನು ಆಡಿ 4,876 ರನ್‌ ಬಾರಿಸಿದ್ದಾರೆ; 78 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 1,212 ರನ್‌ ಬಾರಿಸಿದ್ದಾರೆ. 16 ಏಕದಿನ ಶತಕಗಳನ್ನು ಬಾರಿಸಿದ್ದಾರೆ (ಟೆಸ್ಟ್‌ನಲ್ಲಿ 6, ಏಕದಿನದಲ್ಲಿ 10). 100 ಅಂತಾರಾಷ್ಟ್ರೀಯ ಅರೆ ಶತಕಗಳನ್ನು ಬಾರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next