Advertisement

ಎಐಎಫ್ಎಫ್ ನಲ್ಲೂ ಬಿಸಿಸಿಐ ಮಾದರಿ ಆಡಳಿತ?

12:30 AM Jan 04, 2019 | Team Udayavani |

ಪಣಜಿ: ಭಾರತೀಯ ಫ‌ುಟ್‌ಬಾಲ್‌ ಫೆಡರೇಶನ್‌ (ಎಐಎಫ್ಎಫ್)ಕೂಡ ಬಿಸಿಸಿಐ ಮಾದರಿಯ ಆಡಳಿತವನ್ನು ಅನುಸರಿಸುವ ಸೂಚನೆಯೊಂದು ಲಭಿಸಿದೆ.

Advertisement

ಸುಪ್ರೀಂ ಕೋರ್ಟ್‌ ನೇಮಕ ಮಾಡಿದ ತನಿಖಾಧಿಕಾರಿ ಎಸ್‌.ವೈ. ಖುರೇಶಿ “ಭಾರತೀಯ ಆರ್ಚರಿ ಅಸೋಸಿಯೇಶನ್‌’ ಚುನವಾಣೆಯಲ್ಲಿ ಮುಗಿಸಿದ್ದು, ಸದ್ಯ ಎಐಎಫ್ಎಫ್ನತ್ತ ಗಮನ ಹರಿಸಿದ್ದಾರೆ. ಕಳೆದ ವರ್ಷ ಸುಪ್ರೀಂ ಕೋರ್ಟ್‌ ಮಾಜಿ ಪ್ರಮುಖ ಚುನಾವಣಾ ಆಯುಕ್ತ ಹಾಗೂ ಭಾರತದ ಫ‌ುಟ್‌ಬಾಲ್‌ ತಂಡದ ಮಾಜಿ ನಾಯಕ ಬಾಸ್ಕರ್‌ ಗಂಗೂಲಿ ಅವರನ್ನು ನೇಮಕ ಮಾಡಿತ್ತು.

“ಫೆಡರೇಶನ್‌ನ ಹಾಗೂ ಕೆಲವು ಪ್ರಮುಖರಿಂದ ಈ ಕುರಿತು ಪ್ರತಿಕ್ರಿಯೆ ನೀಡಲು ತಿಳಿಸಿದ್ದೆವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವುಗಳನ್ನು ಪರಿಶೀಲಿಸಲಾಗುತ್ತಿದೆ. ಸದ್ಯದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ’ ಎಂದು ಖುರೇಶಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next