Advertisement

ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಿಗೆ ಭರ್ಜರಿ ವೇತನ

06:10 AM Aug 10, 2018 | Team Udayavani |

ಮುಂಬಯಿ: ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ವೇತನದಲ್ಲಿ ಭರ್ಜರಿ ಏರಿಕಾಯಾಗಿದೆ. ಬಿಸಿಸಿಐ ಆಡಳಿತಾಧಿಕಾರಿಗಳ ಅನುಮೋದನೆಯಂತೆ ಆಯ್ಕೆ ಸಮಿತಿ ಸದಸ್ಯರಿಗೆ 30 ಲಕ್ಷ ರೂ. ವೇತನ ಏರಿಕೆಯಾಗಿದ್ದರೆ, ಮುಖ್ಯಸ್ಥರಿಗೆ 20 ಲಕ್ಷ ರೂ. ಏರಿಕೆಯಾಗಿದೆ.

Advertisement

ಸದ್ಯ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಖ್ಯೆ 3 ಮಾತ್ರ. ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್‌ ವೇತನ ಈಗ ವರ್ಷಕ್ಕೆ ಒಂದು ಕೋಟಿ ರೂ.ಗೆ ಮುಟ್ಟಿದೆ. ದೇವಾಂಗ್‌ ಗಾಂಧಿ ಹಾಗೂ ಸರಣ್‌ದೀಪ್‌ ಸಿಂಗ್‌ ವೇತನ 90 ಲಕ್ಷ ರೂ.ಗೇರಿದೆ. ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಐವರು ಸದಸ್ಯರಿದ್ದರು. ಲೋಧಾ ಶಿಫಾರಸಿನ ಅನಂತರ ಮೂರಕ್ಕಿಳಿದಿದೆ.

ಇದೇ ವೇಳೆ ಕಿರಿಯರ ತಂಡದ ಆಯ್ಕೆ ಸಮಿತಿ ಹಾಗೂ ಮಹಿಳಾ ತಂಡದ ಆಯ್ಕೆ ಸಮಿತಿಯ ಸಂಭಾವನೆಯಲ್ಲೂ ಏರಿಕೆ ಮಾಡಲಾಗಿದೆ. ಕಿರಿಯರ ಆಯ್ಕೆ ಸಮಿತಿ ಸದಸ್ಯರ ವೇತನ 60 ಲಕ್ಷ ರೂ.ಗೇರಿದ್ದರೆ, ಅದರ ಮುಖ್ಯಸ್ಥರ ವೇತನ 65 ಲಕ್ಷ ರೂ. ಗೇರಿದೆ. ಮಹಿಳಾ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರ ವೇತನ 30 ಲಕ್ಷ ರೂ.ಗೆ ಮುಟ್ಟಿದೆ. ಸದಸ್ಯರ ವೇತನ 25 ಲಕ್ಷ ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next