Advertisement

ಭಾರತದಲ್ಲೇ ಮುಂದಿನ ಐಪಿಎಲ್‌: ಗಂಗೂಲಿ

11:54 PM Oct 16, 2021 | Team Udayavani |

ದುಬಾೖ: ಮುಂದಿನ ವರ್ಷದ ಐಪಿಎಲ್‌ ಪಂದ್ಯಾವಳಿ ಭಾರತದಲ್ಲೇ ನಡೆಯಲಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“2022ರ ಐಪಿಎಲ್‌ ಪಂದ್ಯಾವಳಿ ಭಾರತದಲ್ಲೇ ನಡೆಯಬೇಕೆಂಬುದು ಬಿಸಿಸಿಐ ಆಶಯ. ಈ ವಿಶ್ವಾಸವೂ ನಮ್ಮಲ್ಲಿದೆ.

ಭಾರತದಲ್ಲಿ ಸ್ಟಾಂಡ್‌ಗಳು ತುಂಬಿದರೆ ಅದರ ಜೋಶ್‌, ಮಜವೇ ಬೇರೆ. ಐಪಿಎಲ್‌ ಭಾರತಕ್ಕೆ ಮರಳುವುದನ್ನೇ ನಾವೆಲ್ಲ ಕಾಯುತ್ತಿದ್ದೇವೆ’ ಎಂಬುದಾಗಿ ಗಂಗೂಲಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next