Advertisement
ಈ ಸಭೆಯಲ್ಲಿ ಹಲವು ಮಹತ್ವದ ಸಂಗತಿಗಳ ಚರ್ಚೆಯಾಗಲಿದೆ. ಮುಖ್ಯವಾಗಿ ಬಿಸಿಸಿಐ ಅಳವಡಿಸಿಕೊಂಡಿರುವ ನೂತನ ಸಂವಿಧಾನದಲ್ಲಿ ಪ್ರಮುಖ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಕಡ್ಡಾಯ ವಿಶ್ರಾಂತಿ, ಸ್ವಹಿತಾಸಕ್ತಿ, ಐಸಿಸಿ ಪ್ರತಿನಿಧಿ ಆಯ್ಕೆ ನಿಯಮಗಳ ಮಾರ್ಪಾಡು, ಉನ್ನತ ಸಲಹಾ ಸಮಿತಿ ಆಯ್ಕೆ ಗಳೆಲ್ಲ ಈ ಸಭೆಯ ಮುಖ್ಯ ಕಾರ್ಯಕಲಾಪಗಳಲ್ಲಿ ಸೇರಿವೆ.
Related Articles
ನಿಯಮಗಳ ಬದಲಾವಣೆಯಿಂದ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ, ಜಯ್ ಶಾ ಕಾರ್ಯದರ್ಶಿಯಾಗಿ ಮುಂದುವರಿಯಲು ಅನುಕೂಲವಾಗಲಿದೆ. ಇಲ್ಲವಾದರೆ ಮುಂದಿನ 7-8 ತಿಂಗಳಲ್ಲಿ ಕಡ್ಡಾಯ ವಿಶ್ರಾಂತಿ ನಿಯಮದಡಿ ಅವರು ಅಧಿಕಾರ ತ್ಯಜಿಸುವುದು ಖಚಿತ. ಇವರು ಬಿಸಿಸಿಐ ಅಧಿಕಾರ ಸ್ವೀಕರಿಸುವಾಗ, ತಮ್ಮ ರಾಜ್ಯ ಸಂಸ್ಥೆಗಳಲ್ಲಿ 5 ವರ್ಷ, 3 ತಿಂಗಳು ಅಧಿಕಾರ ನಡೆಸಿದ್ದರು. ಆದ್ದರಿಂದ ಬಾಕಿ 9 ತಿಂಗಳು ಮಾತ್ರ ಅವರಿಗೆ ಬಿಸಿಸಿಐನಲ್ಲಿ ಅವಕಾಶ. ಅದರಲ್ಲಿ ಈಗಾಗಲೇ 2 ತಿಂಗಳು ಮುಗಿದು ಹೋಗಿದೆ.
Advertisement
ಕಡ್ಡಾಯ ವಿಶ್ರಾಂತಿ ನಿಯಮ ಬದಲುಇತ್ತೀಚೆಗಷ್ಟೇ ಅಳವಡಿಸಿಕೊಂಡಿರುವ ಬಿಸಿಸಿಐ ನೂತನ ಸಂವಿಧಾನದಲ್ಲಿ 3 ವರ್ಷಗಳ 2 ಅವಧಿ ಅಧಿಕಾರ ನಡೆಸಿದ್ದರೆ (ರಾಜ್ಯಸಂಸ್ಥೆ, ಬಿಸಿಸಿಐ ಸೇರಿ ಆಗಬಹುದು, ಯಾವುದೋ ಒಂದು ಸಂಸ್ಥೆಯಲ್ಲಾದರೂ ಆಗಬಹುದು), ಇನ್ನು 3 ವರ್ಷ ಪದಾಧಿಕಾರಿಯೊಬ್ಬರು ಕಡ್ಡಾಯ ವಿಶ್ರಾಂತಿ ಪಡೆಯುವುದು ಅನಿವಾರ್ಯ.