Advertisement

ಗಾಯಗೊಂಡ ಜಸ್ಪ್ರೀತ್ ಬುಮ್ರಾ ಬದಲಿಗೆ ವೇಗಿಯನ್ನು ನೇಮಿಸಿದ ಬಿಸಿಸಿಐ

10:03 AM Sep 30, 2022 | Team Udayavani |

ಮುಂಬೈ: ಟಿ20 ವಿಶ್ವಕಪ್ ಗೆ ಕೆಲವೇ ವಾರಗಳು ಬಾಕಿ ಇರುವಂತೆ ವೇಗಿ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದಾರೆ. ಬೆನ್ನುನೋವಿಗೆ ಒಳಗಾಗಿರುವ ಬುಮ್ರಾ ಬದಲಿಗೆ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗೆ ಬಿಸಿಸಿಐ ಬದಲಿ ಆಟಗಾರನನ್ನು ನೇಮಿಸಿದೆ.

Advertisement

ವೇಗಿ ಮೊಹಮ್ಮದ್ ಸಿರಾಜ್ ಅವರು ಬುಮ್ರಾ ಬದಲಿಗೆ ಟಿ20 ಸರಣಿ ಆಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಬುಮ್ರಾ ಬೆನ್ನುನೋವಿಗೆ ಒಳಗಾಗಿದ್ದು, ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಈಗಾಗಲೇ ತಿರುವನಂತಪುರದಲ್ಲಿ ನಡೆದಿದೆ. ಈ ಪಂದ್ಯವನ್ನು ಭಾರತ ತಂಡ ಗೆದ್ದುಕೊಂಡಿದೆ. ಎರಡನೇ ಪಂದ್ಯವು ರವಿವಾರ ಗುವಾಹಟಿಯಲ್ಲಿ ನಡೆಯಲಿದ್ದು, ಮೂರನೇ ಪಂದ್ಯ ಅ.4ರಂದು ಇಂದೋರ್ ನಲ್ಲಿ ನಡೆಯಲಿದೆ.

ಇದನ್ನೂ ಓದಿ:ಕಣ್ಣು ತೆರೆಸಿದ ‘ಕಾಂತಾರ’: ಕರಾವಳಿ ಸೊಗಡು ಸಪ್ತಮಿ ಬೆರಗು

ಜಸ್ಪ್ರೀತ್ ಬುಮ್ರಾ ಅವರಿಗೆ 5ರಿಂದ 6 ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ. ಹೀಗಾಗಿ ಅವರು ಟಿ20 ವಿಶ್ವಕಪ್ ಗೂ ಲಭ್ಯರಾಗುವುದು ಬಹುತೇಕ ಕಷ್ಟ ಎನ್ನಲಾಗಿದೆ.

Advertisement

ದ.ಆಫ್ರಿಕಾ ಸರಣಿಗೆ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್.

Advertisement

Udayavani is now on Telegram. Click here to join our channel and stay updated with the latest news.

Next