Advertisement

ಬಿಸಿಸಿಐ ಆಡಳಿತ: ನ್ಯಾ|ಲೋಧಾ ಬೇಸರ

12:04 AM Jul 20, 2019 | Sriram |

ಮುಂಬಯಿ: ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಬಿಸಿಸಿಐ ಆಡಳಿ ತಾಧಿಕಾರಿಗಳ ಕಾರ್ಯ ನಿರ್ವಹಣೆ ಬಗ್ಗೆ ಲೋಧಾ ಸಮಿತಿ ಮುಖ್ಯಸ್ಥ, ಮಾಜಿ ಮುಖ್ಯ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

“ಆಡಳಿತಾಧಿಕಾರಿಗಳನ್ನು ನೇಮಿಸಿ 2 ವರ್ಷವಾದರೂ ಬಿಸಿಸಿಐನಲ್ಲಿ ಏನೂ ಬದಲಾವಣೆಯಾಗಿಲ್ಲ, ಸರ್ವೋಚ್ಚ ನ್ಯಾಯಾಲಯ ಅನುಮೋದಿಸಿರುವ ವರದಿ ಅನುಷ್ಠಾನವಾಗಬೇಕೆಂದು ನಾವು ಬಯ ಸಿದ್ದೆವು. ಆದರೆ ಹಾಗೆ ಆಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ’ ಎಂದು ಲೋಧಾ ಕಳವಳ ವ್ಯಕ್ತಪಡಿಸಿದ್ದಾರೆ.

ಆಡಳಿತಾಧಿಕಾರಿಗಳೇ ಪಾಲಿಸುತ್ತಿಲ್ಲ!
ಇತ್ತೀಚೆಗೆ ಇಂಗ್ಲೆಂಡ್‌ನ‌ಲ್ಲಿ ನಡೆದ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ಭಾರತೀಯ ಕ್ರಿಕೆಟಿಗರು ತಮ್ಮ ಪತ್ನಿಯರನ್ನು ಕರೆದೊಯ್ದ ಬಗ್ಗೆಯೂ ಲೋಧಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ವತಃ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳೇ ಅನುಮತಿ ನೀಡಿರುವುದು ಅವರಿಗೆ ಇನ್ನೂ ಅಚ್ಚರಿ ಮೂಡಿಸಿದೆ.

ಲೋಧಾ ನೇತೃತ್ವದ ಸಮಿತಿ ಕೆಲವು ವರ್ಷಗಳ ಹಿಂದೆ ಬಿಸಿಸಿಐಗೆ ಮಹತ್ವದ ಆಡಳಿತಾತ್ಮಕ ಸುಧಾರಣೆ ಮಾಡಿತ್ತು. ಅದರಲ್ಲಿ ಕ್ರಿಕೆಟಿಗರು ಪತ್ನಿಯರನ್ನು ಕರೆದೊಯ್ಯಲು ನಿಬಂಧನೆ ವಿಧಿಸಲಾಗಿತ್ತು. ಈಗ ಅದನ್ನೆಲ್ಲ ಸ್ವತಃ ನಿಯೋಜಿತ ಆಡಳಿತಾಧಿಕಾರಿಗಳೇ ಪಾಲಿಸುತ್ತಿಲ್ಲ ಎನ್ನುವುದು ಲೋಧಾಗೆ ಬೇಸರ ಮೂಡಿಸಿದೆ.

ವಿಶೇಷ ವಿಚಾರಣಾಧಿಕಾರಿ
ಪ್ರಸ್ತುತ ಬಿಸಿಸಿಐಗೆ ವಿಶೇಷ ವಿಚಾರಣಾಧಿಕಾರಿಯಾಗಿ ಡಿ.ಕೆ. ಜೈನ್‌ ಅವರನ್ನು ನೇಮಕ ಮಾಡಲಾಗಿದೆ. ಅವರು ಶಿಫಾರಸಿಗೆ ವಿರುದ್ಧವಾಗಿರುವ ಯಾವುದನ್ನೇ ಆದರೂ ತಡೆಯಬೇಕು ಎಂದು ಲೋಧಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next