Advertisement
ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದ ಬಳಿಯಲ್ಲಿ ಟ್ರಾಫಿಕ್ ಜಾಮ್ ಪ್ರಾರಂಭಗೊಂಡು ಧರ್ಮಸ್ಥಳ ಹೆದ್ದಾರಿ, ಬಂಟ್ವಾಳ ಪೇಟೆಯ ರಸ್ತೆ ಯೂ ಸೇರಿದಂತೆ ಹೆದ್ದಾರಿ ಎರಡೂ ಭಾಗಗಳಲ್ಲೂ ವಾಹನಗಳು ಸಾಲು ನಿಂತಿದ್ದವು.ಮಧ್ಯಾಹ್ನ 12ರ ವೇಳೆಗೆ ಪ್ರಾರಂಭ ಗೊಂಡ ಟ್ರಾಫಿಕ್ ಜಾಮ್ ಸಂಜೆ 3.30ರ ವರೆಗೂ ಮುಂದುವರಿದಿತ್ತು.
Related Articles
Advertisement
ಇತ್ತ ಉಪ್ಪಿನಂಗಡಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರ ವರೆಗೆ ರಾಷ್ಟ್ರೀಯ ಹೆದ್ದಾರಿ 75ರ ಚರ್ತುಷ್ಪಥ ರಸ್ತೆಯಿಂದ ರಾಜ್ಯ ಹೆದ್ದಾರಿ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನೇಜಿಕಾರು ತನಕದ 2 ಕಿ.ಮೀ. ಹಾಗೂ ಪಟ್ಟಣದ ಹಳೇ ಬಸ್ ನಿಲ್ದಾಣ, ಪೊಲೀಸ್ ಠಾಣೆ ಮುಂಭಾಗ, ರಥ ಬೀದಿ ಉದ್ದಕ್ಕೂ ವಾಹನಗಳು ಸಾಲು ನಿಂತಿದ್ದವು.
ಉದಯವಾಣಿ ಎಚ್ಚರಿಸಿತ್ತುಬಿ.ಸಿ.ರೋಡಿನ ಸರ್ಕಲ್ ಬಳಿ ಹೆದ್ದಾರಿ ಕಾಮಗಾರಿ ಕೂಡ ನಡೆಯುತ್ತಿದ್ದು, ಪ್ರಸ್ತುತ ಅಲ್ಲಿ ಎತ್ತ ಸಾಗಬೇಕು ಎಂಬ ಗೊಂದಲ ಉಂಟಾಗುತ್ತಿರುವುದಿಂದ ಕೂಡ ಟ್ರಾಫಿಕ್ ಜಾಮ್ ಸಮಸ್ಯೆಯ ಜತೆಗೆ ಅಪಘಾತ ಭೀತಿ ಇದೆ ಎನ್ನುವುದರ ಕುರಿತು ಎ. 22ರಂದು ಉದಯವಾಣಿ “ಬಿ.ಸಿ.ರೋಡು ಸರ್ಕಲ್: ಕೊಂಚ ಎಚ್ಚರ ತಪ್ಪಿದರೂ ನೇರ ಹೊಂಡಕ್ಕೆ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಸಂಬಂಧಪಟ್ಟವರನ್ನು ಎಚ್ಚರಿಸಿತ್ತು.