Advertisement
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ರೈತರು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಲಾಭದಾಯಕ ಗಳಿಸಲು ಸಾಧ್ಯ ಎಂದರು. ಕೇವಲ ಭತ್ತ, ಮೆಣಿಸಿನಕಾಯಿ ಬೆಳೆಗಳು ಬೆಳೆಯೋದು ಒಂದೇ ಅಲ್ಲ ಇದರ ಜೊತೆಗೆ ಮಿಶ್ರ ಬೇಸಾಯ ಪದ್ಧತಿಯನ್ನು ಬೆಳೆಯಲು ಮುಂದಾಗಬೇಕು ಎಂದು ತಿಳಿಸಿದರು. ಭತ್ತ ಬೆಳೆದರೆ ಕೇವಲ ಹೊಟ್ಟೆ ಬಟ್ಟೆಗೆ ಮಾತ್ರ ಸಹಕಾರಿ ಯಾಗುತ್ತದೆ ಆದ್ದರಿಂದ ಕೃಷಿ ಪದ್ಧತಿ ಯಲ್ಲಿ ಅನೇಕ ಬೆಳೆಗಳು ಇವೆ ಅವುಗಳನ್ನು ಬೆಳೆಯಲು ಮುಂದಾಗಬೇಕು. ರೈತರು ವರ್ಷದಲ್ಲಿ ಭತ್ತ ಎರಡು ಬೆಳೆ ಬೆಳೆಯುತ್ತಾರೆ ಇದಕ್ಕೆ ಕ್ರಿಮಿನಾಶಕ ಔಷದಿ ಸಿಂಪರಣೆ ಮಾಡುವುದರಿಂದ ಭೂಮಿ ಡ್ರೈ ಆಗುವುದಿಲ್ಲ ಇದರಿಂದ ಉತ್ತಮ ಬೆಳೆ ಪಡೆಯಲು ಅನುಕೂಲ ಆಗುವುದಿಲ್ಲ ಎಂದರು.
Related Articles
Advertisement
ಅಲ್ಲದೆ ತಾಲೂಕಲ್ಲಿ ಸುವ್ಯವಸ್ಥಿತವಾಗಿ ಕೃಷಿ ಇಲಾಖೆಯ ಕಟ್ಟಡ ಇಲ್ಲದಾಗಿದೆ ಇದರಿಂದ ಅಧಿಕಾರಿಗಳಿಗೆ ಹಾಗೂ ರೈತರಿಗೆ ಅನುಕೂಲ ಇಲ್ಲದಾಗಿರುವುದರಿಂದ ಶೀಘ್ರದಲ್ಲಿ ಕಟ್ಟಡಕ್ಕೆ 1 ಕೋಟಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಯೊಬ್ಬ ರೈತರು ಬೆಳೆ ನಷ್ಟವಾದರೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಸರಕಾರ ನಿಮ್ಮ ಜೊತೆಗೆ ಇದೆ ಆತ್ಮಹತ್ಯೆ ಯು ಪರಿಹಾರ ಅಲ್ಲ ಆದ್ದರಿಂದ ಸರಕಾರ ಅಂತಹ ರೈತರಿಗೆ ಪರಿಹಾರ ನೀಡಲಿದೆ ಎಂದರು.
ಇದನ್ನೂ ಓದಿ : ದಾಸನದೊಡ್ಡಿಯ ಕೆರೆಕಟ್ಟೆಗಳ ನಿರ್ಮಾತೃ ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡರು ಇನ್ನಿಲ್ಲ