Advertisement

ಚುನಾವಣೆ ಆಯ್ತು, ಇನ್ನು ಯೋಗ ಇದ್ದವರು ಸಿಎಂ ಆಗುತ್ತಾರೆ: ಬಿ.ಸಿ.ಪಾಟೀಲ್ ಮಹತ್ವದ ಹೇಳಿಕೆ

02:32 PM Jun 11, 2022 | Team Udayavani |

ದಾವಣಗೆರೆ: ರಾಜ್ಯಸಭೆ ಚುನಾವಣೆ ಮುಗಿದಿದೆ. ಈಗ ಸಚಿವ ಸಂಪುಟ ಆಗಬಹುದು. ಯಾರಿಗೆ ಯೋಗ ಇದೆಯೋ ಅವರು ಸಿಎಂ ಆಗುತ್ತಾರೆ ಎಂದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗಲು ಯೋಗ ಇರಬೇಕು, ಯೋಗ್ಯತೆಯೂ ಇರಬೇಕು. ಸಿಎಂ ಆಗಲು ಜನರ ಹಾಗೂ ಹೈಕಮಾಂಡ್ ಆಶೀರ್ವಾದವೂ ಇರಬೇಕು ಎಂದು ಮಾರ್ಮಿಕವಾಗಿ ನುಡಿದರು.

ದೇಶಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೇಳಿಕೆ ಕೊಟ್ಟು 15 ದಿನವಾಗಿದೆ. ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಯಾರೋ ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ವ್ಯವಸ್ಥಿತ ಸಂಚು ನಡೆಸಿ ಈ ರೀತಿ ಮಾಡುತ್ತಿದ್ದಾರೆ. ಕಾನೂನು ಇದೆ. ಅಲ್ಲಿ ಪ್ರಶ್ನೆ ಮಾಡಬಹುದಿತ್ತು. ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವುದು ಸರಿಯಲ್ಲ ಎಂದರು.

ಪಠ್ಯಪುಸ್ತಕ ವಿವಾದ ಬಿಟ್ಟರೆ ಕಾಂಗ್ರೆಸ್ ನವರಿಗೆ ಬೇರೆ ಯಾವುದೇ ವಿಷಯಗಳಿಲ್ಲ.‌ಹಾಗಾಗಿ ಪ್ರತಿಭಟನೆ ಮಾಡುವುದು, ಹೇಳಿಕೆಗಳನ್ನು ಕೊಡುವುದನ್ನು ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:ರಾಜ್ಯಸಭೆ; ತಡರಾತ್ರಿ ಬೆಳವಣಿಗೆ-ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಜಯ, ಕೈಗೆ ಹಿನ್ನಡೆ

Advertisement

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂವರು ಗೆಲ್ಲಲು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ, ಬಸವರಾಜ ಬೊಮ್ಮಯಿ ಆಡಳಿತ, ಬಿಜೆಪಿ ಜನಪರ ಕಾಳಜಿಯೇ ಕಾರಣ. ಕಾಂಗ್ರೆಸ್, ಜೆಡಿಎಸ್ ನಿಂದ ಬಹಳ ಜನ ಬಿಜೆಪಿಗೆ ಬರುವವರಿದ್ದಾರೆ. ಈಗಲೇ ಹೇಳಿದರೆ ಅವರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಾರೆ. ಆದ್ದರಿಂದ ಅವರು ಬಂದಾಗ ನಿಮಗೆ ಗೊತ್ತಾಗಲಿದೆ. ಆ ಪಕ್ಷಗಳಲ್ಲಿ ಪ್ರೀತಿ ಕಡಿಮೆಯಾದವರೆಲ್ಲಾ ಬಿಜೆಪಿ ಬರುತ್ತಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next