Advertisement

ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರ ಭಡ್ತಿಗೆ ಕ್ರಮ: ಸಚಿವ ಬಿ.ಸಿ. ನಾಗೇಶ್‌

11:47 PM Feb 13, 2023 | Team Udayavani |

ಬೆಂಗಳೂರು: ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಿಗೆ ಉಪನ್ಯಾಸಕರ ಹುದ್ದೆಗೆ 75:25ರ ಅನುಪಾತದಲ್ಲಿ ಭಡ್ತಿ ನೀಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಹಣಮಂತ ನಿರಾಣಿ ಮತ್ತು ಎಸ್‌.ವಿ. ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2006ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಉಪನಾಸ್ಯಕ ಹುದ್ದೆಗೆ ಭಡ್ತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಲವು ವರ್ಷಗಳಿಂದ ಭಡ್ತಿ ನೀಡಲಾಗಿಲ್ಲ. 2011-12ನೇ ಸಾಲಿನಲ್ಲಿ 50:50 ಅನುಪಾತದಲ್ಲಿ ಒಟ್ಟು 1,184 ಹುದ್ದೆಗಳಿಗೆ ಭಡ್ತಿ ನೀಡಲಾಗಿತ್ತು. ಅನಂತರ 2014ರಲ್ಲಿ ವಿವಿಧ ಕಾರಣಗಳಿಂದ ಭಡ್ತಿ ವಿಳಂಬವಾಗಿದೆ. ಈಗ ಜೇಷ್ಠತಾ ಪಟ್ಟಿ ಸಿದ್ಧಗೊಂಡಿದ್ದು, ಸದ್ಯದಲ್ಲೇ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next