Advertisement
ಕೋವಿಡ್ ತಂದಿಟ್ಟಿರುವ ಆರ್ಥಿಕ ಸಂಕಷ್ಟ ಸೇರಿದಂತೆ ಮತ್ತಿತರರ ಕಾರಣಗಳಿಂದಾಗಿ ಟ್ರೇಡಿಂಗ್ ಲೆಸೆನ್ಸ್ ನವೀಕರಣದ ಸಂಖ್ಯೆಯ ಕೂಡ ಇಳಿಕೆ ಹಾದಿ ಹಿಡಿದೆ. ಒಂದು ಅಂಕಿ- ಅಂಶದ ಪ್ರಕಾರ 2021-22ರ ಅವಧಿಯಲ್ಲಿ ಶೇ.62ರಷ್ಟು ಮಾತ್ರ ನಗರವ್ಯಾಪಾರಿಗಳು ತಮ್ಮ ವ್ಯಾಪಾರ ಪರ ವಾನಿಗೆಯನ್ನು ನವೀಕರಿಸಲಿದ್ದಾರೆ.
Related Articles
Advertisement
46.65 ಕೋಟಿ ರೂ.ಆದಾಯ ಸಂಗ್ರಹ: 2019- 20ರಲ್ಲಿ ಹೊಸದಾಗಿ 13,171 ಮಂದಿ ವ್ಯಾಪಾರಿಗಳಿಗೆ ಪರವಾನಿಗೆ ನೀಡಲಾಗಿತ್ತು. ಇದರಿಂದಾಗಿ ಪಾಲಿಕೆಗೆ 9.3ಕೋಟಿ ರೂ.ಆದಾಯ ರೂಪದಲ್ಲಿ ಹರಿದು ಬಂದಿತ್ತು. ಜತೆಗೆ 38,398 ಪರವಾನಿಗೆ ನವೀಕರಿಸಲಾಗಿತ್ತು ಇದರಿಂದಾಗಿ ಬಿಬಿಎಂಪಿಗೆ ಸುಮಾರು 37.35 ಕೋಟಿ ರೂ. ಸಂಗ್ರಹವಾಗಿತ್ತು. ಒಟ್ಟಾರೆ ಲೆಸನ್ಸ್ ಪರವಾನಿಗೆಯಿಂದಲೇ ಆ ವರ್ಷ ಪಾಲಿಕೆಗೆ ಸುಮಾರು 37.35 ಕೋಟಿ ರೂ.ಆದಾಯ ಸಂಪನ್ಮೂಲ ಸಂಗ್ರಹವಾಗಿತ್ತು.
2020-21ರಲ್ಲಿ ಹೊಸದಾಗಿ ಪರವಾನಿಗೆ ಪಡೆಯುವ ಸಂಖ್ಯೆಯಲ್ಲಿ 8,678 ಆಗಿದ್ದು 6.2 ಕೋಟಿ ರೂ.ತೆರಿಗೆ ಸಂಗ್ರಹವಾಗಿತ್ತು. ಹಾಗೆಯೇ 36,710 ಟ್ರೇಡಿಂಗ್ ಲೆಸನ್ಸ್‌ಗಳನ್ನು ನವೀಕರಣ ಮಾಡಲಾಗಿತ್ತು. ಆದರೆ ತೆರಿಗೆ ಪ್ರಮಾಣ 54 ಕೋಟಿ ರೂ. ಸಂಗ್ರಹವಾಗಿ ಅಲ್ಪಮಟ್ಟಿನ ಹೆಚ್ಚಳವಾಗಿತ್ತು.
ಆದಾಯ ತೆರಿಗೆಯಲ್ಲಿ ಮತ್ತೆ ಇಳಿಕೆ: ಹಲವು ಕ್ಷೇತ್ರಗಳ ವ್ಯಾಪಾರಿಗಳು ತಮ್ಮ ಪರವಾನಿಗೆಯನ್ನು ನವೀಕರಸದೇ ಇರುವುದರ ಜತೆಗೆಹೇಳಿಕೊಳ್ಳುವಷ್ಟು ಮಟ್ಟದಲ್ಲಿ ಹೊಸ ಪರವಾನಿಗೆ ಅರ್ಜಿಗಳಲು ಬಾರದೇ ಇರುವುದರಿಂದ ಪಾಲಿಕೆಯ ಸಂಪನ್ಮೂಲ ಕ್ರೋಢೀಕರಣದಲ್ಲೂ ಕೂಡ ಇಳಿಕೆಯಾಗಿರುವುದನ್ನು ಅಂಕಿ ಅಂಶಗಳೇ ಬಿಚ್ಚಿಡುತ್ತವೆ. 2021-22ನೇ ಆರ್ಥಿಕ ವರ್ಷದಲ್ಲಿ ಹೊಸದಾಗಿ 8,572 ಟ್ರೇಡ್ ಲೆಸನ್ಸ್ ನೀಡಲಾಗಿದ್ದು ಇದರಿಂದ 7.5ಕೋಟಿ ರೂ.ಆದಾಯ ಸಂಗ್ರಹವಾಗಹಿದೆ. ಜತೆಗೆ 28,939 ಪರವಾನಿಗೆ ನವೀಕರಿಸಲಾಗಿದ್ದು ಇದರಿಂದ 32.6 ಕೋಟಿ ರೂ.ಸಂಗ್ರಹವಾಗಿದೆ. ಒಟ್ಟಾರೆ ಪಾಲಿಕೆಗೆ 2021-22ನೇ ಸಾಲಿನಲ್ಲಿ 40.1ಕೋಟಿ ರೂ. ಸಂಪನ್ಮೂಲ ಕ್ರೋಢೀಕರಣವಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ನಗರದ ಕೆಲವು ಕಡೆಗಳಲ್ಲಿ ಪರವಾನಿಗೆ ನವೀಕರಿಸದೇ ತಮ್ಮ ವ್ಯಾಪಾರವನ್ನು ಮುಂದುವರೆಸಿರುವವರ ಬಗ್ಗೆ ಮಾಹಿತಿಯನ್ನು ಕೂಡ ಕಲೆಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಜತೆಗೆ 2022ಕ್ಕೆ ದಂಡವಿಲ್ಲದೆ ತಮ್ಮಪರವಾನಗಿಗಳನ್ನು ನವೀಕರಿಸಲು ವ್ಯಾಪಾರಿಗಳಿಗೆ ಫೆಬ್ರವರಿ ಅಂತ್ಯದವರೆಗೆ ಸಮಯವಿದೆ ಆ ಹಿನ್ನೆಲೆಯಲ್ಲಿ ಈ ಸಂಖ್ಯೆಯಲ್ಲಿ ದ್ವಿಗುಣವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಶೇ.30 ರಿಂದ 40ರಷ್ಟು ಸಣ್ಣ ವ್ಯಾಪಾರದ ಮೇಲೆ ಕೋವಿಡ್ ಆರ್ಥಿಕ ಪೆಟ್ಟುನೀಡಿದೆ. ಹೀಗಾಗಿ ಬೆಂಗಳೂರಿನ ಹಲವುಪ್ರತಿಷ್ಠಿತ ಬಡಾವಣೆಗಳಲ್ಲಿ ಬಾಡಿಗೆ ಕಟ್ಟಲಾಗದೆ ವ್ಯಾಪಾರಿಗಳು ಅಂಗಡಿಗಳಿಗೆ ಬೀಗಹಾಕಿದ್ದಾರೆ. ಜತೆಗೆ ಹೊಸದಾಗಿ ಬಂಡವಾಳಹಾಕುವ ಸ್ಥಿತಿಯಲ್ಲಿ ಹಲವರಿಲ್ಲ. ಈ ಎಲ್ಲಾಕಾರಣಗಳಿಂದಾಗಿಯೇ ಪಾಲಿಕೆಯಿಂದ ಹೊಸ ಲೆಸನ್ಸ್ ಪಡೆಯುವಿಕೆಯ ಹಾಗೂನವೀಕರಿಸುವಿಕೆಯಲ್ಲಿ ಸಂಖ್ಯೆಯಲ್ಲಿ ಕುಸಿತವಾಗಿದೆ.-ರಾಜು, ಕಾಸಿಯಾದ ಮಾಜಿ ಅಧ್ಯಕ್ಷ
-ದೇವೇಶ ಸೂರಗುಪ್ಪ