Advertisement
ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರಿ ಇಲಾಖೆಗಳೂ ಸೇರಿದಂತೆ ಹಲವರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ಪಾವತಿಸುವಂತೆ ಹಲವು ಬಾರಿ ನೋಟಿಸ್ ನೀಡಿದರೂ ಕೆಲವರು ಆಸ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಪ್ತಿ ಅಸ್ತ್ರ ಬಳಸಲು ಪಾಲಿಕೆ ಇತ್ತೀಚೆಗೆ ನಿರ್ಧರಿಸಿತ್ತು. ಆದರೆ, ಯಾವ ವಲಯದಲ್ಲಿ ಎಷ್ಟು ಸ್ವತ್ತುಗಳಿಗೆ ನೋಟಿಸ್ ನೀಡಲಾಗಿದೆ. ಎಷ್ಟು ಬಾರಿ ನೋಟಿಸ್ ನೀಡಲಾಗಿದೆ ಎಂಬ ವಿವರವನ್ನೇ ಅಧಿಕಾರಿಗಳು ಕಂದಾಯ ವಿಭಾಗದ ಅಧಿಕಾರಿಗಳಿಗೆ ಸಲ್ಲಿಕೆ ಮಾಡದೆ ಇರುವುದರಿಂದ ವಾಸ್ತವ ಸ್ಥಿತಿ ಏನಿದೆ ಎನ್ನುವುದು ತಿಳಿಯುತ್ತಿಲ್ಲ.
Related Articles
Advertisement
ಆಸ್ತಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ತೆಗೆದುಕೊಳ್ಳುತ್ತಿರುವ ಪ್ರತಿ ಸುಧಾರಣಾ ಹಂತದಲ್ಲೂ ಪಾಲಿಕೆಯ ಕೆಲವು ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳದೆ ಇರುವುದರಿಂದ, ಪೂರ್ಣ ಪ್ರಮಾಣದ ಯಶಸ್ಸು ಗಳಿಸಲು ಪಾಲಿಕೆಯಿಂದ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಸರ್ಕಾರಿ ಇಲಾಖೆಗಳಿಂದಲೂ ಪಾಲಿಕೆಗೆ ಅಂದಾಜು 121.41 ಕೋಟಿ ರೂ. ಬಾಕಿ ಇದ್ದು, ಇದರ ವಸೂಲಾತಿಗೂ ಕಠಿಣ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಚಿಂತನೆ ನಡೆಸಿದೆ.
ನಿಯಮ ಪರಿಶೀಲಿಸದ ಅಧಿಕಾರಿಗಳು: ನಕ್ಷೆ ಹಾಗೂ ನಿಯಮಾವಳಿ ಉಲ್ಲಂಘನೆ ಮಾಡಿದ ಮಾಲೀಕರ ಮೇಲೆ ಈಗ ಪಾಲಿಕೆ ಏಕಾಏಕಿ ದುಪ್ಪಟ್ಟು ತೆರಿಗೆ ವಿಧಿಸುವ ಮುನ್ನ ಮಾಲೀಕರು ನಿಯಮ ಉಲ್ಲಂಘನೆ ಮಾಡಲು ಅವಕಾಶ ಮಾಡಿಕೊಟ್ಟ ಪಾಲಿಕೆಯ ಅಧಿಕಾರಿಗಳಿಗೂ ದಂಡ ವಿಧಿಸಬೇಕು ಎಂದು ನಗರಾಭಿವೃದ್ಧಿ ತಜ್ಞ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿ. ರವೀಂದ್ರ ಅಭಿಪ್ರಾಯಪಡುತ್ತಾರೆ.
ಆಸ್ತಿ ತೆರಿಗೆ ಸಂಗ್ರಹವರ್ಷ ನಿಗದಿತ ಗುರಿ ವಸೂಲಾದ ತೆರಿಗೆ ಪ್ರಗತಿ ಸಾಧಿಸಿರುವುದು (ಕೋಟಿ ರೂ.ಗಳಲ್ಲಿ)
2016-17 2300 1997.28 94.85
2017-18 2600 2132.44 83.76
2018-19 3100 2529.42 81.90
2019-20 3500 2425.30 69.29 (ಜ.15ರವರೆಗೆ) ಸರ್ಕಾರಿ ಇಲಾಖೆಗಳ ಆಸ್ತಿ ತೆರಿಗೆ ಮತ್ತು ಸೇವಾ ತೆರಿಗೆ ಬಾಕಿ ವಿವರ
ವಲಯ ಆಸ್ತಿ ಸಂಖ್ಯೆ ಬಾಕಿಮೊತ್ತ (ಕೋಟಿಗಳಲ್ಲಿ)
ಪೂರ್ವ 161 53.85
ಪಶ್ಚಿಮ 70 2.36
ದಕ್ಷಿಣ 54 13.83
ಮಹದೇವಪುರ 19 31.03
ಬೊಮ್ಮನಹಳ್ಳಿ 15 0.51
ದಾಸರಹಳ್ಳಿ 12 1.45
ರಾಜರಾಜೇಶ್ವರಿ ನಗರ 44 9.81
ಯಲಹಂಕ 32 8.58
ಒಟ್ಟು 407 121.41 ಆಸ್ತಿ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿ ಕೊಂಡಿರುವ ಮಾಲೀಕರ ಚರ ಆಸ್ತಿಗಳನ್ನು ಜಪ್ತಿ ಮಾಡಬಹುದು. ಒಟ್ಟಾರೆ ಆಸ್ತಿಯನ್ನೇ ಜಪ್ತಿ ಮಾಡಿ ಪಾಲಿಕೆ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುವುದಕ್ಕೆ ಕಾನೂನಿ ನಲ್ಲಿ ಅವಕಾಶವಿಲ್ಲ. ಸ್ವತ್ತುಗಳ ಮಾಲೀಕರು ಪಾಲಿಕೆಗೆ ನಿಯಮಾನುಸಾರ ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಬೇಕಾ ಗುತ್ತದೆ. ಆಗಲೂ ಆಸ್ತಿ ಪಾವತಿ ಮಾಡದೆ ಇದ್ದಲ್ಲಿ ಅವರ ಚರ ಆಸ್ತಿಗಳನ್ನು ಪಾಲಿಕೆ ವಶಕ್ಕೆ ಪಡೆದುಕೊಳ್ಳಬಹುದು.
-ಎಂ.ಶಿವರಾಜು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆಸ್ತಿ ತೆರಿಗೆ ಹಾಗೂ ಸೇವಾ ತೆರಿಗೆ ಪಾವತಿ ಮಾಡದ ಮಾಲೀಕರ ಮೇಲೆ ನಿಯಮಾನು ಸಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇನ್ನು ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳ ವಿರುದ್ಧವೂ ನಿಯಮಾನುಸರ ಕ್ರಮ ತೆಗೆದುಕೊಳ್ಳಲಾಗುವುದು.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ