ಬೆಂಗಳೂರು: ಕೋವಿಡ್ ಸೋಂಕು ಆರ್ಥಿಕ ಸಂಕಷ್ಟ ಹಾಗೂ ಲಾಕ್ ಡೌನ್ ನಿಂದ ಸೃಷ್ಟಿಯಾದ ಆರ್ಥಿಕ ಕುಸಿ ತದ ಹೊರ ತಾ ಗಿಯೂ ಪಾಲಿಕೆ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ 2,606.18 ಕೋಟಿ ರೂ. ಆಸ್ತಿ ತೆರಿಗೆಸಂಗ್ರ ಹಿ ಸುವ ಮೂಲಕ ಈ ಬಾರಿ ಉತ್ತಮಸಾಧನೆ ಮಾಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 18 ಲಕ್ಷಕ್ಕೂ ಹೆಚ್ಚು ಆಸ್ತಿಗಳು ತೆರಿಗೆ ವ್ಯಾಪ್ತಿಯಡಿ ಬರುತ್ತವೆ.ಇದ ರಿಂದ 2020-21ನೇ ಸಾಲಿನಲ್ಲಿ 3,500ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಮಾಡುವ ಗುರಿ ಯನ್ನು ಪಾಲಿಕೆ ರೂಪಿ ಸಿ ಕೊಂಡಿತ್ತು. ಇದ ರಲ್ಲಿ ಶೇ75 ಗುರಿ ಸಾಧಿಸುವಲ್ಲಿಪಾಲಿಕೆ ಯಶಸ್ವಿಯಾಗಿದೆ. ಆರ್ಥಿಕ ವರ್ಷ ಮುಕ್ತಾಯಕ್ಕೆ 20 ದಿನ ಬಾಕಿ ಉಳಿದಿದ್ದು, ಈ ಅವಧಿಯಲ್ಲಿ ಮತ್ತಷ್ಟು ಆಸ್ತಿ ತೆರಿಗೆ
ಸಂಗ್ರಹ ವಾಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಆಸ್ತಿ ತೆರಿಗೆ ಸಂಗ್ರಹ ಗುರಿಯಲ್ಲಿ ಶೇ.75 ಗುರಿ ಸಾಧಿಸಿದೆ. ಉಳಿ ದಂತೆ ಈ ವರ್ಷ ಒಟ್ಟಾರೆ ಆಸ್ತಿ ಸಂಗ್ರಹ ಗುರಿ ಮುಟ್ಟಲು ಸಾಧ್ಯ ವಾಗದೆ ಇದ್ದರೂ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಅಂದಾಜು 50 ಕೋಟಿ ರೂ. ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗಿದೆ.
ಆನ್‌ಲೈನ್ ಮೂಲಕ 1,282.34 ಕೋಟಿ ರೂ. ಹಾಗೂ ಬ್ಯಾಂಕ್‌ನಲ್ಲಿ ಚಲನ್‌ಮೂಲಕ 1,323.84 ಕೋಟಿ ರೂ. ಆಸ್ತಿ ತೆರಿಗೆ ಪಾವತಿ ಆಗಿದೆ ಎಂದು ಪಾಲಿ ಕೆಯಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. 2019-20ನೇ ಆರ್ಥಿಕ ಸಾಲಿನಲ್ಲಿ ಪಾಲಿಕೆ 3,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹಾಕಿ ಕೊಂಡಿತ್ತು. ಈ ಉದ್ದೇ ಶಿತ ಗುರಿ ಯಲ್ಲಿ 2,656 ಕೋಟಿ ರೂ. ತೆರಿಗೆ ಸಂಗ್ರವಾಗುವ ಮೂಲಕ ಶೇ.76 ಗುರಿ ಸಾಧಿಸಿತ್ತು. 2019-20ನೇ ಸಾಲಿನ ಆರ್ಥಿಕ ವರ್ಷದ ಕೊನೆಯ ಹಂತದಲ್ಲಿ ನಗರದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಉಲ್ಬಣ ವಾ ಗಲು ಪ್ರಾರಂಭವಾಯಿತು.
ಹೀಗಾಗಿ, ಆರ್ಥಿಕ ಹಿನ್ನಡೆ ಸೃಷ್ಟಿ ಆಗಿತ್ತು. ಇದೇ ಕಾರಣಕ್ಕೆ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿಯೂ ಹಳೆಯ ಗುರಿಯನ್ನೇ ನಿಗದಿಪಡಿ ಸ ಲಾಗಿತ್ತು. ಇನ್ನು ಪಾಲಿಕೆ ಕಳೆದ ನ.8ರ ಅಂತ್ಯಕ್ಕೆ 2,148 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಶೇ.61.37 ಗುರಿ ಸಾಧಿಸಿತ್ತು. ನಾಲ್ಕು ತಿಂಗಳ ಅವಧಿಯಲ್ಲಿ (ನ.7 ರಿಂದ ಮಾ.7) 458 ಕೋಟಿ ರೂ. (ಶೇ.13) ಆಸ್ತಿ ತೆರಿಗೆ ಸಂಗ್ರಹವಾಗಿದೆ.