Advertisement

ಪಾಲಿಕೆ ಆಸ್ತಿ ಸಂರಕ್ಷಣೆಗೆ ಆಸ್ತಿಗಳ ತಾಳೆ ಪರಿಶೀಲನೆ

12:08 PM Sep 25, 2020 | Suhan S |

ಬೆಂಗಳೂರು: ಪಾಲಿಕೆಯ ಆಸ್ತಿಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಪಾಲಿಕೆ ವಿವಿಧ ವಿಭಾಗಗಳ ಆಸ್ತಿ ತಾಳೆ ಪ್ರಕ್ರಿಯೆಗೆ ಬಿಬಿಎಂಪಿ ಮುಂದಾಗಿದೆ.

Advertisement

ಪಾಲಿಕೆಯ ಸಾವಿರಾರು ಕೋಟಿ ರೂ. ಆಸ್ತಿ ಭೂಗಳ್ಳರ ಪಾಲಾಗುತ್ತಿದೆ. ಇದನ್ನು ಸಂರಕ್ಷಣೆ ಮಾಡುವ ಕೆಲಸವಾಗಬೇಕು ಹಾಗೂ ಪಾಲಿಕೆ ಆಸ್ತಿಗಳ ಇ- ದಾಖಲೆ ಸಂಗ್ರಹ ಮಾಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿತ್ತು. ಇದೀಗ ಪಾಲಿಕೆಯ ಆಸ್ತಿ ವಿಭಾಗದ ಅಧಿಕಾರಿಗಳು ಮೊದಲ ಹಂತದಲ್ಲಿ ಪಾಲಿಕೆಯ ವಿವಿಧ ಇಲಾಖೆಗಳ ಆಸ್ತಿ ಪರಿಶೀಲನೆ ಮಾಡಿ, ಇದರಲ್ಲಿ ದಾಖಲೆಗಳಲ್ಲಿ ಬಿಟ್ಟು ಹೋಗಿರುವ ಆಸ್ತಿಗಳನ್ನು ನೋಟಿಫಿಕೇಷನ್‌ ಮಾಡಿಮತ್ತೆಪಾಲಿಕೆಯಖಾತೆಗೆ ಸೇರಿಸಿಕೊಳ್ಳುವ ಪ್ರಯತ್ನಕ್ಕೆಕೈ ಹಾಕಿದೆ.

ಈ ಕುರಿತು ಉದಯವಾಣಿ ಜತೆ ಮಾತನಾಡಿದ ವಿಶೇಷ ಅಯುಕ್ತ (ಆಸ್ತಿ)ಮಂಜುನಾಥ್‌ ಅವರು, ಪಾಲಿಕೆಯ ಶಿಕ್ಷಣ ವಿಭಾಗ, ತೋಟಗಾರಿಕೆ, ಅರಣ್ಯ, ಆಟದ ಮೈದಾನ ಸೇರಿದಂತೆ ವಿವಿಧ ವಿಭಾಗಗಳ ಆಸ್ತಿ ಪಟ್ಟಿ ಹಾಗೂ ಪಾಲಿಕೆಯ ಆಸ್ತಿ ವಿಭಾಗದ ದಾಖಲೆಗಳನ್ನುಎರಡಕ್ಕೂ ತಾಳೆಹಾಕಿಪರಿಶೀಲನೆ ಮಾಡಿ ವರದಿ ನೀಡುವಂತೆ ಪಾಲಿಕೆಯ ಎಲ್ವಿಭಾಗಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೊದಲ ಹಂತದಲ್ಲಿ ಎಲ್ಲ ವಿಭಾಗಗಳೂ ಅವರ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ಪಟ್ಟಿ ಮಾಡಿಕೊಳ್ಳುವುದುಹಾಗೂಎರಡನೇಹಂತದಲ್ಲಿ ಆಸ್ತಿ ವಿಭಾಗ ಹಾಗೂ ವಿವಿಧ ಇಲಾಖೆಗಳ ಆಸ್ತಿ ದಾಖಲೆ ಪಟ್ಟಿ ಎರಡನ್ನೂ ಪರಿಶೀಲನೆ ಮಾಡುವುದು ಎಂದು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು.

ಪಾಲಿಕೆಯ ಎಲ್ಲ ಆಸ್ತಿಗಳ ದಾಖಲೆಯೂ ಆಸ್ತಿ ವಿಭಾಗದ ದಾಖಲೆಗಳೊಂದಿಗೆ ತಾಳೆಯಾಗ ಬೇಕು. ಒಂದೊಮ್ಮೆ ಆಸ್ತಿ ವಿಭಾಗದ ದಾಖಲೆಯಲ್ಲಿರುವ ಯಾವುದಾದರೂ, ಆಸ್ತಿ ವಿಭಾಗದ ಆಸ್ತಿ ಪಟ್ಟಿಯಿಂದ ಬಿಟ್ಟು ಹೋಗಿದ್ದರೆ ಆ ನಿರ್ದಿಷ್ಟ ಆಸ್ತಿಯನ್ನು ಮತ್ತೆ ನೋಟಿಫಿಕೇಷನ್‌ ಮಾಡಿಸಿ, ಗೆಜೆಟ್‌ ಹೊರಡಿಸುವ ಮೂಲಕ ಸಂರಕ್ಷಣೆ ಮಾಡಲಾಗುವುದು. ಒಮ್ಮೆ ಈ ರೀತಿ ಪಾಲಿಕೆಗೆ ಒಳಪಟ್ಟ ಎಲ್ಲ ಆಸ್ತಿಗಳನ್ನು ಪರಿಶೀಲನೆ ಮಾಡಿದರೆ ಪಾಲಿಕೆಯ ಎಲ್ಲ ಆಸ್ತಿಗಳನ್ನೂ ಸಂರಕ್ಷಣೆ ಮಾಡಬಹುದು ಎಂದರು.

……………………………………………………………………………………………………………………………………………………………………..

Advertisement

ಆಸ್ತಿ ತೆರಿಗೆ ಹೆಚ್ಚಳ ಸದ್ಯಕ್ಕೆ ಬೇಡ : ಬೆಂಗಳೂರು: ನಗರದಲ್ಲಿನ ಕಟ್ಟಡಗಳ ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಅವರು ಪಾಲಿಕೆಯ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಸತಿ ಕಟ್ಟಡಗಳ ಆಸ್ತಿ ತೆರಿಗೆಯನ್ನು ಶೇ.20ರಷ್ಟು ಹಾಗೂ ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆಯನ್ನು ಶೇ.25ರಷ್ಟು ಹೆಚ್ಚಳ ಮಾಡಲು ಮುಂದಾಗಿರುವುದು ಸರ್ಮಪ ಕವಲ್ಲ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಆಸ್ತಿ ತೆರಿಗೆ ಹೆಚ್ಚಳ ಮಾಡುವುದು ಸೂಕ ¤ವಲ್ಲ. ಇದರ ಬದಲಿಗೆ ಆಸ್ತಿ ವ್ಯಾಪ್ತಿಗೆ ಸೇರದ ಕಟ್ಟಡಗಳನ್ನು ಆಸ್ತಿ ವ್ಯಾಪ್ತಿಗೆ ತರಬೇಕು ಎಂದರು.

ನಗರದಲ್ಲಿ 16 ಲಕ್ಷಕ್ಕೂ ಹೆಚ್ಚು ವಸತಿ ಕಟ್ಟಡಗಳು, 6 ಲಕ್ಷಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳು, 1.10 ಲಕ್ಷ ಕೈಗಾರಿಕಾ ಘಟಕ ಗಳು, 3800ಕ್ಕೂ ಹೆಚ್ಚು ಖಾಸಗಿ ಶಾಲಾ- ಕಾಲೇಜು ಕಟ್ಟಡಗಳು, 50ಕ್ಕಿಂತ ಹೆಚ್ಚು ಯುನಿಟ್‌ ಹೊಂದಿರುವ 22,000ಕ್ಕೂ ಹೆಚ್ಚು ವಸತಿ ಸಮುಚ್ಛಯಗಳು, 12,860 ಪಿಜಿ ಹಾಗೂ ವಸತಿ ನಿಲಯಗಳು, 3,758 ಐಟಿ ಕಂಪನಿಗಳು, 94 ಬಿಟಿ ಕಂಪನಿಗಳು, 79 ಟೆಕ್‌ ಪಾರ್ಕ್‌ಗಳು, 157 ಮಾಲ್‌ಗ‌ಳು , 2446 ಸೂಪರ್‌ ಸೆ ³ಷಾಲಿಟಿ ಆಸ್ಪತ್ರೆಗಳು, 3350 ಲಾಡ್ಜ್ಗಳು,684 ಸ್ಟಾರ್‌ ಹೋಟೆಲ್‌ ಗಳು, 1300 ಕಲ್ಯಾಣಮಂಟಪಗಳು,1600 ಪಾರ್ಟಿ ಹಾಲ್‌ಗ‌ಳು ಹಾಗೂ 13,860 ಟೆಲಿಕಾಂ ಟವರ್‌ಗಳಿವೆ ಎಂದರು.

ಇವುಗಳನ್ನುಆಸ್ತಿ ತೆರಿಗೆವ್ಯಾಪ್ತಿಗೆ ತಂದರೆ,ಪ್ರತಿ ವರ್ಷ ಕನಿಷ u 7000 ಕೋಟಿ ರೂ.ಗೂ ಹೆಚ್ಚು ಆಸ್ತಿ ಸಂಗ್ರಹವಾಗಲಿದೆ. ಹೀಗಾಗಿ, ಅನ್ಯ ಮಾರ್ಗದ ಮೂಲಕ ಆಸ್ತಿ ತೆರಿಗೆ ಸಂಗ್ರಹಿಸಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next