Advertisement
ಪಾಲಿಕೆಯ ಕಾಳಜಿ: ಮಹಿಳೆಯರ ಸುರಕ್ಷತೆಗಾಗಿ ಬಿಬಿಎಂಪಿ “ರಕ್ಷಾ ಬ್ಯಾಂಡ್’ ಪರಿಚಯಿಸುತ್ತಿದೆ. ನಗರದ 10 ಲಕ್ಷ ವನಿತೆಯರ ಕೈಗೆ ಬ್ಯಾಂಡ್ ನೀಡುವ ಗುರಿಯನ್ನು ಪಾಲಿಕೆ ಹೊಂದಿದೆ. ಧರಿಸಲು ಸುಲಭವಾಗಿರುವ ರಕ್ಷಾ ಬ್ಯಾಂಡ್, ಸಂಕಷ್ಟದಲ್ಲಿ ಸಿಲುಕಿದ ಮಹಿಳೆಯರಿಗೆ ನಿಜ ಅರ್ಥದಲ್ಲಿ “ರಕ್ಷಣೆ’ ನೀಡುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಪಾಲಿಕೆ ನಿರೀಕ್ಷಿಸಿರುವ ತಾಂತ್ರಿಕ ಶ್ರೇಷ್ಠತೆಗಳೊಂದಿಗೆ ಬ್ಯಾಂಡ್ ರೂಪುಗೊಂಡರೆ ಕಿರುಕುಳ, ದೌರ್ಜನ್ಯ ಪ್ರಕರಣಗಳು ನಿಯಂತ್ರಣಕ್ಕೆ ಬರಲಿವೆ.
ಬ್ಯಾಂಡ್‌ನಲ್ಲಿ ಮೈಕ್ ಹಾಗೂ ಸ್ಪೈ ಕ್ಯಾಮೆರಾ ಇರಲಿವೆ. ಅಪಾಯದಲ್ಲಿರುವ ಮಹಿಳೆ ಬಟನ್ ಒತ್ತಿ ಅಥವಾ ಕೈ ಶೇಕ್ ಮಾಡಿದ ಕೂಡಲೇ ಬ್ಯಾಂಡ್ ಸಕ್ರಿಯವಾಗುತ್ತದೆ. ಕೂಡಲೇ ಮೈಕ್ ಮೂಲಕ ಸ್ಥಳದಲ್ಲಿನ ಧ್ವನಿ ರೆಕಾರ್ಡ್ ಆಗುತ್ತದೆ. ಇದರೊಂದಿಗೆ ಬ್ಯಾಂಡ್‌ನ ಎರಡು ಬದಿಯಲ್ಲಿರುವ ಕ್ಯಾಮೆರಾಗಳು ಸುತ್ತಮುತ್ತಲಿನ ಫೋಟೋಗಳನ್ನು ಸೆರೆಹಿಡಿಯುತ್ತದೆ. ಈ ಧ್ವನಿ ಹಾಗೂ ಚಿತ್ರಗಳನ್ನು
ಕ್ಷಣಾರ್ಧದಲ್ಲಿ ಸಂಬಂಧಿಸಿದವರಿಗೆ ರವಾನಿಸುವ ವ್ಯವಸ್ಥೆ ಬ್ಯಾಂಡ್‌ನಲ್ಲಿರಲಿದೆ. ನೆಟ್ ಸಂಪರ್ಕವಿಲ್ಲದಿದ್ದರೆ ಎಸ್‌ಎಂಎಸ್ ಹೋಗುತ್ತದೆ. ಹಾಗೇ ಮಹಿಳೆ ಇರುವ ಸ್ಥಳದ ಮಾಹಿತಿ ಕೂಡ ರವಾನೆಯಾಗುತ್ತದೆ. ಈ ಮೂಲಕ ಪೋಷಕರು, ಆಪ್ತರು ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಬಹುದಾಗಿದೆ. ಇಲ್ಲಿ ಮಹಿಳೆಯರು ತಮಗೆ ಆಪ್ತರೆನಿಸುವ 40ರಿಂದ 50 ಮಂದಿಯ ಮೊಬೈಲ್ ಸಂಖ್ಯೆ ನೋಂದಣಿ ಮಾಡಲು ಅವಕಾಶವಿದ್ದು, ಅವರೆಲ್ಲರಿಗೂ ಮಾಹಿತಿ ರವಾನೆಯಾಗುತ್ತದೆ.
Related Articles
ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ರಕ್ಷಾ ಬ್ಯಾಂಡ್, ನೋಡಲು ನಿತ್ಯ ಧರಿಸುವ ವಾಚ್ ಅಥವಾ ಫಿಟ್‌ನೆಸ್ ಬ್ಯಾಂಡ್ ಮಾದರಿಯಲ್ಲಿರುತ್ತದೆ. ಮಹಿಳೆಯರು ತೊಂದರೆಗೆ ಸಿಲುಕಿದಾಗ ಬ್ಯಾಂಡ್‌ನಲ್ಲಿರುವ ಬಟನ್ ಒತ್ತಿ ಅಥವಾ ಬ್ಯಾಂಡ್ ಧರಿಸಿದ ಕೈಯನ್ನು ಹಲವು ಬಾರಿ ಅಲ್ಲಾಡಿಸಿದರೆ (ಶೇಕ್ ಮಾಡಿದರೆ) ಸಾಕು. ಅವರು ತೊಂದರೆಗೆ ಸಿಲುಕಿರುವ ಬಗೆಗಿನ ಮಾಹಿತಿ ಪೋಷಕರು, ಸಂಬಂಧಿಕರು, ಸ್ನೇಹಿತರು ಹಾಗೂ ಸಮೀಪದ ಪೊಲೀಸರಿಗೆ ರವಾನೆಯಾಗುತ್ತದೆ. ರಕ್ಷಾ ಬ್ಯಾಂಡ್ ಸುರಕ್ಷಾ ಆ್ಯಪ್ ಜತೆ ಲಿಂಕ್ ಆಗಿರುತ್ತದೆ. ಒಂದೊಮ್ಮೆ ಬ್ಯಾಂಡ್‌ಧಾರಿ ಸ್ತ್ರೀ ಸಂಕಷ್ಟಕ್ಕೆ ಸಿಲುಕಿದಾಗ ಮೊಬೈಲ್‌ನಲ್ಲಿ ಇಂಟರ್‌ನೆಟ್ ಸಂಪರ್ಕ ದೊರೆಯದಿದ್ದರೆ, ಎಸ್‌ಎಂಎಸ್ ಮೂಲಕ ಎಲ್ಲರಿಗೂ ಸಂದೇಶ ರವಾನೆಯಾಗುತ್ತದೆ.
Advertisement
ರಿಯಾಯಿತಿ ದರದಲ್ಲಿ ಲಭ್ಯಸುರಕ್ಷತೆಗೆ ಸಂಬಂಧಿಸಿದಂತೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೇಫ್ಟಿ ಬ್ಯಾಂಡ್‌ಗಳ ದರ 2 ಸಾವಿರಕ್ಕಿಂತ ಹೆಚ್ಚಿದ್ದು, ಬಡವರು, ಮಧ್ಯಮ ವರ್ಗದವರ ಕೈಗೆಟುಕುವುದಿಲ್ಲ. ಆದರೆ ರಕ್ಷಾ ಬ್ಯಾಂಡನ್ನು ಕೇವಲ 480 ರೂ.ಗೆ ನೀಡುವ ಚಿಂತನೆ ಪಾಲಿಕೆಗಿದೆ. ಪಾಲಿಕೆ 10 ಲಕ್ಷ ಬ್ಯಾಂಡ್ ಖರೀದಿಸಿದರೆ, ಬ್ಯಾಂಡ್ ರೂಪಿಸುವ ಸಂಸ್ಥೆ ಒಂದು ಬ್ಯಾಂಡನ್ನು 780 ರೂ.ಗೆ ನೀಡುತ್ತದೆ. ಈ ಮೊತ್ತದಲ್ಲಿ ಸರ್ಕಾರ 300 ರೂ. ಭರಿಸಲಿದ್ದು, ಮಹಿಳೆಯರು ಪಾವತಿಸಬೇಕಿರುವುದು ಕೇವಲ 480 ರೂ. ಆದರೆ ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಶೀಘ್ರದಲ್ಲೇ ಬರಲಿದೆ. ಬ್ಯಾಂಡ್ ಖರೀದಿ ನಂತರ ನೋಂದಣಿಯಾಗಲು ನಾಲ್ಕೇ ಹಂತ
01. ಮೊದಲು ಪಾಲಿಕೆಯಿಂದ ರಕ್ಷಾ ಬ್ಯಾಂಡ್ ಖರೀದಿಸಿ
02. ನಂತರ ಪಾಲಿಕೆ “ಸುರಕ್ಷಾ’ ಆ್ಯಪ್ ಡೌನ್‌ಲೋಡ್ ಮಾಡಿ
03. ಹೆಸರು, ಮೊಬೈಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಿ
04. 40-50 ಆಪ್ತರ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ 10 ಲಕ್ಷ ವನಿತೆಯರಿಗೆ ಸುರಕ್ಷಾ ಬ್ಯಾಂಡ್ ನೀಡುವ ಗುರಿ
780 ರೂ. ಬ್ಯಾಂಡ್ ತಯಾರಿಕೆ ಸಂಸ್ಥೆ ಒಂದು ಬ್ಯಾಂಡ್‌ಗೆ ವಿಧಿಸುವ ಬೆಲೆ
300ರೂ. ಒಂದು ಬ್ಯಾಂಡ್‌ಗೆ ರಾಜ್ಯ ಸರ್ಕಾರ ಭರಿಸಲಿರುವ ಮೊತ್ತ
480ರೂ. ಮಹಿಳೆಯರು ಬ್ಯಾಂಡ್ ಒಂದಕ್ಕೆ ನೀಡಬೇಕಿರುವ ಹಣ ವೆಂ.ಸುನೀಲ್‌ಕುಮಾರ್