ಬೆಂಗಳೂರು: ಸಿಲಿಕಾಟ್ ಸಿಟಿ ಬೆಂಗಳೂರಿನಲ್ಲಿ ಗುಜರಾತ್ ಮಾದರಿಯಲ್ಲಿ ಹುಕ್ಕಾ ಬಾರ್‌ಗಳನ್ನು ಬಂದ್ ಮಾಡಲು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಮುಂದಾಗಿದೆ. ಗುಜರಾತ್ ಸರ್ಕಾರ ಈಗಾಗಲೇ ಅಲ್ಲಿನ ಹುಕ್ಕಾ-ಬಾರ್‌ಗಳನ್ನು ಬಂದ್ ಮಾಡಿದ್ದು ಅದೇ ಮಾದರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೂಡ ರಾಜಧಾನಿಯಲ್ಲಿರುವ ಹುಕ್ಕಾ- ಬಾರ್‌ಗಳನ್ನು ಬಂದ್ ಮಾಡುವ ಬಗ್ಗೆ ಚಿಂತನೆ ನಡೆಸಿದೆ.
ಆ ಹಿನ್ನೆಲೆಯಲ್ಲಿ ಹೊಸ ಕಾನೂನು ರೂಪಿ ಸಲು ತಜ್ಞರ ಮೊರೆ ಹೋಗಿದೆ. ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವ ಸಿಲಿಕಾನ್ ಸಿಟಿ ಬೆಂಗಳೂರನ್ನು ಆರೋಗ್ಯಕರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿಯೇ ಬಿಬಿಎಂಪಿಯ ಆರೋಗ್ಯ ಘಟಕ ಹೆಜ್ಜೆಯಿರಿಸಿದೆ. ಈಗಾಗಲೇ ಸಂಘ, ಸಂಸ್ಥೆ ಹಾಗೂ ವಕೀಲರು ಸೇರಿದಂತೆ ಮತ್ತಿತರರ ಜತೆಗೆ ಆರೋಗ್ಯಕರ ನಗರ ನಿರ್ಮಾಣದ ಬಗ್ಗೆ ಚರ್ಚೆ ನಡೆಸಲಾಗಿದೆ. ಹೊಸ ಕಾನೂನಿಗಳ ಸಾಧಕ-ಬಾಧಕ ಗಳ ಬಗ್ಗೆ ಅದರ ಜಾರಿಯ ಬಗ್ಗೆ ಪಾಲಿಕೆಯ ಆರೋಗ್ಯ ಘಟಕದ ಹಿರಿಯ ಅಧಿಕಾರಿಗಳು ಕಾನೂನು ತಜ್ಞರ ಜತೆಗೆ ಸಮಾಲೋಚನೆ ನಡೆಸಿದ್ದಾರೆ.
ಪಾಲಿಕೆಯ ಆರೋಗ್ಯ ಘಟಕದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಹುಕ್ಕಾ ಬಾರ್ ನಿಷೇಧ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿ ಈಗಾಗಲೇ ಹುಕ್ಕಾಬಾರ್‌ಗಳ ಮೇಲೆ ನಿಷೇಧ ಹೇರಲಾಗಿದೆ. ಅದೇ ಮಾದರಿಯನ್ನು ಮುಂದಿನ ದಿನಗಳಲ್ಲಿ ಪಾಲಿಕೆ ಕೂಡ ಅಳವಡಿಸಿಕೊಂಡು ಜಾರಿಗೆ ತರುವ ಸಂಬಂಧ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ತಂಬಾಕು ಉತ್ಪನ್ನಗಳ ಬಳಕೆ ನಿಷೇಧಕ್ಕಿರುವ ಕಾಯ್ದೆ ಜತೆಗೆ ಈ ಬಗ್ಗೆ ನ್ಯಾಯಾಲಯಗಳು ನೀಡಿ ರುವ ತೀರ್ಪುಗಳನ್ನು ಮುಂದಿಟ್ಟುಕೊಂಡು ಹುಕ್ಕಾ ಬಳಕೆಗೆ ನಿಷೇಧ ನೀತಿ ಜಾರಿಯ ಬಗ್ಗೆ ಸಮಾ ಲೋಚಿಸಲಾಗಿದೆ ಎಂದರು.
ಬಜೆಟ್ ಅಧಿವೇಶನದ ವೇಳೆ ಪ್ರಸ್ತಾಪ : ಈ ಹಿಂದೆ ಬಜೆಟ್ ಅಧಿವೇಶನದಲ್ಲಿ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್, ರಾಜಧಾನಿಯ ಹುಕ್ಕಾಬಾರ್‌ಗಳ ಬಗ್ಗೆ ಸರ್ಕಾರದ ಗಮನ ಸಳೆದಿದ್ದರು. ಬೆಂಗಳೂರಿನಲ್ಲಿ ಹುಕ್ಕಾ ಮತ್ತು ಡಾನ್ಸ್ ಬಾರ್, ಕ್ಯಾಸಿನೋಗಳು ಅಕ್ರಮವಾಗಿ ನಡೆಯುತ್ತಿವೆ. ಗಲ್ಲಿ ಗಲ್ಲಿಯನ್ನು ಅವು ಅಕ್ರಮಿಸಿಕೊಂಡಿವೆ ಎಂದು ಆರೋಪಿಸಿದ್ದರು. ಹುಕ್ಕಾ ಬಾರ್‌ನಲ್ಲಿ ಡ್ರಗ್ಸ್ ಹೊಡೆಯುವವರೂ ಬರುತ್ತಾರೆ. ಕಾಲೇಜು ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಹುಕ್ಕಾ ಬಾರ್‌ನಲ್ಲಿ ಇರುತ್ತಾರೆ ಎಂದು ದೂರಿದ್ದರು. ಪೊಲೀಸ್ ಇಲಾಖೆ ರಾಜಧಾನಿಯಲ್ಲಿ ಕೇವಲ 64 ಹುಕ್ಕಾಬಾರ್ ಇವೆ ಅಂತ ಹೇಳಿದೆ. ಆದರೆ, ಇದು ತಪ್ಪು ಮಾಹಿತಿ. ರಾಜಧಾನಿಯ ಗಲ್ಲಿಗಲ್ಲಿಗಳಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತಿವೆ ಎಂದು ಸದನದ ಗಮಕ್ಕೆ ತಂದಿದ್ದರು. ಆದರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಹುಕ್ಕಾಬಾರ್‌ನಲ್ಲಿ ಮಾದಕ ವಸ್ತು ಸಿಗುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಹುಕ್ಕಾಬಾರ್ ಪರವಾನಗಿ ದುರುಪಯೋಗ : ಪಾಲಿಕೆ ಈವರೆಗೂ ಪ್ರತೇಕವಾಗಿ ಸ್ಮೋಕಿಂಗ್ ವಲಯ ಹೊಂದಿದ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಸಿಗರೇಟ್ ಮತ್ತು ಹುಕ್ಕಾಬಾರ್ ಆರಂಭಿಸಲು ಪರವನಗಿ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದರ ದುರುಪಯೋಗವಾಗುತ್ತಿದೆ. ಪಾಲಿಕೆ ಆರೋಗ್ಯ ಅಧಿಕಾರಿಗಳ ತಾಪಸಣೆ ವೇಳೆ ಮಾಲೀಕರು ಹೇಳುವುದು ಒಂದು, ಆದರೆ ಅಲ್ಲಿ ನಡೆಯುತ್ತಿರುವುದು ಇನ್ನೊಂದು ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಇದನ್ನು ಪಾಲಿಕೆಯ ಆರೋಗ್ಯ ಘಟಕ ಗಂಭೀರವಾಗಿ ಪರಿಗಣಿಸಿದ್ದು ಆ ಹಿನ್ನೆಲೆಯಲ್ಲಿ ಹುಕ್ಕಾ ಬಾರ್ ನಿಷೇಧಕ್ಕೆ ಗಂಭೀರ ಚಿಂತನೆ ಮಾಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹುಕ್ಕಾಬಾರ್‌ಗಳ ನಿಷೇಧ ನೀತಿಯ ಬಗ್ಗೆ ಕಾನೂನು ತಜ್ಞರ ಜತೆಗೆ ಸಮಾಲೋಚಿಸುತ್ತಿದೆ. ಗುಜರಾತ್‌ನಲ್ಲಿ ಈಗಾಗಲೇ ಹುಕ್ಕಾ ಬಾರ್ ಬಂದ್ ಮಾಡಲಾಗಿದೆ. ಅದೇ ರೀತ್ಲಿ ಬೆಂಗಳೂರಿ ನಲ್ಲೂ ಹುಕ್ಕಾಬಾರ್ ನಿಷೇಧಿಸಲು ಸಮಾಲೋಚನೆ ನಡೆಸಲಾಗಿದೆ.
– ಡಾ.ಬಾಲಸುಂದರ್, ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ