Advertisement

ವೃತ್ತಗಳ ಅಂದ ಹೆಚ್ಚಿಸಲು ಯೋಜನೆ

01:37 PM May 28, 2022 | Team Udayavani |

ಬೆಂಗಳೂರು: ಸದಾ ದೂಳು, ಸಂಚಾರ ದಟ್ಟಣೆಯಿಂದ ತುಂಬಿರುವ ಬೆಂಗಳೂರಿನ ಪ್ರಮುಖ ವೃತ್ತಗಳನ್ನು ಮೇಲ್ದರ್ಜೆಗೇರಿಸಲು ಬಿಬಿಎಂಪಿ ಮುಂದಾಗಿದೆ. ಅದರ ಜತೆಗೆ ವೃತ್ತಗಳ ಸೌಂದರ್ಯ ಹೆಚ್ಚಿಸಲೂ ಯೋಜನೆ ರೂಪಿಸಲಾಗಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಕೇಂದ್ರಭಾಗದಲ್ಲಿ ಹಲವು ಯೋಜನೆ ಜಾರಿಗೊಳಿಸಲಾಗು ತ್ತಿದೆ. ಟೆಂಡರ್‌ಶ್ಯೂರ್‌ ರಸ್ತೆಗಳು, ಪಾದಚಾರಿಮಾರ್ಗದಲ್ಲಿ ಸೈಕಲ್‌ ಪಥ ನಿರ್ಮಾಣ ಸೇರಿ ಹಲವುಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅದರ ಜತೆಗೆ ಇದೀಗ ನಗರದ ಪ್ರಮುಖ 25 ವೃತ್ತಗಳನ್ನುಮೇಲ್ದರ್ಜೆಗೇರಿಸುವುದು ಹಾಗೂ ಸುಂದರೀಕರಣ ಮಾಡಲಾಗುತ್ತಿದೆ. ಅದಕ್ಕಾಗಿ ಈಗಾಗಲೆ ಟೆಂಡರ್‌ ಪ್ರಕ್ರಿಯೆ ನಡೆಸಿರುವ ಬಿಬಿಎಂಪಿ ಶೀಘ್ರದಲ್ಲಿ ಗುತ್ತಿಗೆ  ದಾರರನ್ನು ನೇಮಿಸಿ, ಕಾರ್ಯಾದೇಶ ನೀಡಲಿದೆ.

ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ಸದ್ಯ ಕೆ.ಆರ್‌.ವೃತ್ತದಲ್ಲಿ ಮಾಡಲಾಗಿರುವ ಅಭಿವೃದ್ಧಿ ಕಾಮಗಾರಿಯನ್ನು ಮಾದರಿಯಾಗಿಟ್ಟುಕೊಂಡುಉಳಿದ ವೃತ್ತಗಳನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಲಾ ಗಿದೆ. ಪ್ರಮುಖವಾಗಿ ವೃತ್ತದಲ್ಲಿ ಉತ್ತಮ ರಸ್ತೆ ನಿರ್ಮಾಣ, ವಾಹನ ಸಂಚಾರಕ್ಕೆ ಯಾವುದೇ ತಡೆಯಾಗದಂತಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

25 ವೃತ್ತಗಳ ಚಿತ್ರಣ ಬದಲು: ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ನಗರದ ಪ್ರಮುಖ25 ವೃತ್ತಗಳ ಚಿತ್ರಣ ಬದಲಿಸಲಾಗುತ್ತಿದೆ. ಮಲ್ಲೇಶ್ವರದ ಮಾರಮ್ಮ ದೇವಸ್ಥಾನ ವೃತ್ತ, ಲಾಲ್‌ಬಾಗ್‌ಪಶ್ಚಿಮ ದ್ವಾರದ ವೃತ್ತ, ಕಾರ್ಪೊರೇಷನ್‌ ವೃತ್ತ ಸೇರಿಹೆಚ್ಚು ವಾಹನ ಸಂಚಾರವಿರುವ 25 ವೃತ್ತಗಳನ್ನುಆಯ್ಕೆ ಮಾಡಿಕೊಳ್ಳಲಾಗಿದೆ. ಈ ವೃತ್ತಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಇಲ್ಲಿನ ವಾಯು ಗುಣಮಟ್ಟ ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ.

ವೃತ್ತಗಳ ಅಭಿವೃದ್ಧಿ ವೇಳೆ ಅವುಗಳ ಸೌಂದರ್ಯ ಹೆಚ್ಚಿಸುವುದಕ್ಕೆ ಒತ್ತು ನೀಡಲಾಗುತ್ತದೆ. ವೃತ್ತದಮಧ್ಯದಲ್ಲಿ ಕಾರಂಜಿ ನಿರ್ಮಿಸಲಾಗುತ್ತದೆ. ಜತೆಗೆವಿವಿಧ ಬಣ್ಣದ ಕಲ್ಲುಗಳನ್ನು ಅಳವಡಿಸಲಾಗುತ್ತದೆ. ಅದರ ಜತೆಗೆ ಸ್ಥಳಾವಕಾಶವಿರುವಲ್ಲಿ ಕಾರಂಜಿ ಸುತ್ತ ಕಿರು ಉದ್ಯಾನ ನಿರ್ಮಿಸಲಾಗುತ್ತದೆ. ಹೀಗೆಅಭಿವೃದ್ಧಿಗೊಂಡ ನಂತರ ಅವುಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಚಿಂತನೆಯನ್ನೂ ಬಿಬಿಎಂಪಿ ಅಧಿಕಾರಿಗಳು ಮಾಡುತ್ತಿದ್ದಾರೆ.

Advertisement

27 ಕೋಟಿ ರೂ. ವೆಚ್ಚ :

ಬಿಬಿಎಂಪಿ ಅಧಿಕಾರಿಗಳು ರೂಪಿಸಿರುವಯೋಜನೆಯಂತೆ ವೃತ್ತಗಳ ಅಭಿವೃದ್ಧಿಗೆ 27 ಕೋಟಿ ರೂ. ವ್ಯಯಿಸಲಾಗುತ್ತಿದೆ. 15ನೇಹಣಕಾಸು ಆಯೋಗದ ಅನುದಾನದಲ್ಲಿ ಮೊತ್ತವನ್ನು ನಿಗದಿ ಮಾಡಿಕೊಳ್ಳಲಾಗಿದೆ.ಈಗಾಗಲೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದ್ದುಸದ್ಯ ತಾಂತ್ರಿಕ ಬಿಡ್‌ ಪರಿಶೀಲಿಸಲಾಗುತ್ತದೆ.ಬಿಬಿಎಂಪಿ ನಿಗದಿ ಮಾಡಿರುವ ಮೊತ್ತಕ್ಕೆ ಬಿಡ್‌ಸಲ್ಲಿಸಿದ, ತಾಂತ್ರಿಕವಾಗಿ ವಿಧಿಸಲಾಗಿರುವಷರತ್ತುಗಳನ್ನು ಪೂರೈಸುವ ಗುತ್ತಿಗೆದಾರರಿಗೆಕಾರ್ಯಾದೇಶ ನೀಡಲಾಗುತ್ತಿದೆ. ಒಮ್ಮೆಕಾರ್ಯಾದೇಶ ನೀಡಿದ ನಂತರದ 9ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿಬಿಬಿಎಂಪಿಗೆ ವೃತ್ತಗಳನ್ನು ಹಸ್ತಾಂತರಿಸುವಂತೆ ಷರತ್ತು ವಿಧಿಸಲಾಗುತ್ತದೆ.

ಬಿಬಿಎಂಪಿ ವೃತ್ತಗಳ ಸೌಂದರ್ಯ ಹೆಚ್ಚಿಸಲು ಹಾಗೂ ಸುಗಮ ಸಂಚಾರ, ವಾಯು ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರದ 25 ವೃತ್ತಗಳನ್ನು 27 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಲು ನಿರ್ಧರಿಸಿ ಯೋಜನೆರೂಪಿಸಲಾಗಿದೆ. ಶೀಘ್ರದಲ್ಲಿಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿ ಕಾರ್ಯಗತಗೊಳಿಸಲಾಗುವುದು. -ರವೀಂದ್ರ, ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next