Advertisement

ಹಸಿ-ಒಣ ಕಸ ವಿಂಗಡಿಸದೇ ಕೊಟ್ಟರೆ ದಂಡ ಖಚಿತ

10:43 AM Jan 25, 2020 | Team Udayavani |

ಬೆಂಗಳೂರು: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಂಗ್ರಹ ವಾಗುವ ಹಸಿ ಮತ್ತು ಒಣ ಕಸವನ್ನು ವಿಂಗಡಿಸದೇ ಪೌರ ಕಾರ್ಮಿಕರಿಗೆ ನೀಡಿದರೆ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.

Advertisement

ಕಸ ವಿಂಗಡಣೆ ಮಾಡದೆ ಉದಾಸೀನ ತೋರುವ ಸಾರ್ವಜನಿಕರಿಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಪಾಲಿಕೆ ಚುರುಕುಗೊಳಿಸಿದೆ. ಈ ಸಂಬಂಧ “ಉದಯವಾಣಿ’ ಜತೆ ಮಾತನಾಡಿದ ಬಿಬಿಎಂಪಿ ವಿಶೇಷ (ಘನತ್ಯಾಜ್ಯ)ಆಯುಕ್ತ ರಂದೀಪ್‌, “ಬಿಬಿಎಂಪಿ ಕಸ ನಿರ್ವಹಣೆ ಉಪನಿಯಮ-2019′ ಕರಡು ಪ್ರಕಾರ ದಂಡ ವಿಧಿಸಲಾಗುತ್ತಿದೆ ಎಂದರು.

ಎಲ್ಲೆಂದರಲ್ಲಿ ಕಸ ಎಸೆದರೆ, ಉಗುಳಿದರೆ, ಮಲ- ಮೂತ್ರ ವಿಸರ್ಜನೆ ಮಾಡಿದರೆ ಮೊದಲ ಬಾರಿಗೆ 500 ರೂ. ಹಾಗೂ ಎರಡನೇ ಬಾರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ. ಅದೇ ರೀತಿ ಹಸಿ ಮತ್ತು ಒಣ ಕಸ ವಿಂಗಡಣೆ ಮಾಡದಿದ್ದರೆ, ಮೊದಲ ಬಾರಿ 500 ರೂ, ಎರಡನೇ ಬಾರಿ ಪುನರಾವರ್ತನೆಯಾದರೆ, 1,000 ರೂ. ದಂಡ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಕಸದ ಪ್ರಮಾಣ ಹೆಚ್ಚಾಗಿದ್ದರೆ ಒಂದು ಸಾವಿರದಿಂದ ಐದು ಸಾವಿರ ರೂ.ವರೆಗೆ ದಂಡ ವಿಧಿಸಬಹುದಾಗಿದೆ ಎಂದು ವಿವರಿಸಿದರು. ಕಸ ವಿಂಗಡಣೆ ಮಾಡದ ಹಿನ್ನೆಲೆಯಲ್ಲಿ ಜ.1ರಿಂದ ಜ.17ರವರೆಗೆ ಪಾಲಿಕೆ ವ್ಯಾಪ್ತಿಯ ಆರು ವಲಯಗಳಲ್ಲಿ 470 ಜನರಿಂದ 1.37 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ರಂದೀಪ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next