Advertisement

ಪಾಲಿಕೆ ಹೊಸ ಕಾಯ್ದೆಯಲ್ಲಿ ಜನಹಿತವಿದೆಯೇ?

12:07 PM Dec 21, 2020 | Suhan S |

ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲೇ ಸರ್ಕಾರ ಹೊಸ ಕಾಯ್ದೆ ರೂಪಿಸಿದೆ. ಅದರಲ್ಲಿ “ವಿಕೇಂದ್ರೀಕರಣದ ಮಂತ್ರ’ಪಠಿಸುತ್ತಿದೆ.ಆದರೆ,ಅತ್ತ  ಚುನಾವಣೆ ಮುಂದೂಡಿಕೆಗೆ ಮೇಲ್ಮನವಿಯನ್ನೂ ಸಲ್ಲಿಸುತ್ತಿದೆ.ಈ ಮಧ್ಯೆ  ಕಾಯ್ದೆಯಲ್ಲಿ ಶಾಸಕರಿಗೆ ಹೆಚ್ಚಿನ ಅಧಿಕಾರ ನೀಡುತ್ತಿದೆ. ಹಾಗಿದ್ದರೆ,ಚುನಾವಣೆ ಮುಂದೂಡಿಕೆಗೆ ಕಾಯ್ದೆ ಕೇವಲ ಅಸ್ತ್ರವೇ? ನಿಜವಾಗಿಯೂ ಇದರ ಹಿಂದೆ ಜನಹಿತ ಅಡಗಿದೆಯೇ?ಇದರ ಒಳನೋಟ ಈ ಬಾರಿಯ ಸುದ್ದಿ ಸುತ್ತಾಟ.

Advertisement

ಸರ್ಕಾರದ ಲೆಕ್ಕಾಚಾರವೇ ಅರ್ಥವಾಗುತ್ತಿಲ್ಲ. ಒಂದೆಡೆ ಪಾಲಿಕೆಗೆ ಹೊಸ ಕಾಯ್ದೆ ಮೂಲಕ ವಿಕೇಂದ್ರೀಕರಣಕ್ಕೆ ಬಲ ತುಂಬುತ್ತಿರುವುದಾಗಿ ಹೇಳುತ್ತಿದೆ. ಅದೇ ರೀತಿ, ಹಲವಾರು ಸಮಿತಿಗಳ ಮೂಲಕ ಇದಕ್ಕೆ ಒತ್ತುಕೂಡಕೊಟ್ಟಿದೆ. ಮತ್ತೂಂದೆಡೆ ಅದೇ ವಿಕೇಂದ್ರೀಕರಣ ವ್ಯವಸ್ಥೆಗೆ ನಡೆಯಬೇಕಾದ ಚುನಾವಣೆಗೆ ತಡೆ ನೀಡುವಂತೆ ಕೋರ್ಟ್‌ ಮೊರೆ ಹೋಗುತ್ತಿದೆ. ಪ್ರತಿಸಲ ಸರಳವಾಗಿ ಪಾಲಿಕೆ ಚುನಾವಣೆ ನಡೆದ ಉದಾಹರಣೆಗಳು ತುಂಬಾ ಕಡಿಮೆ. ಹೈಕೋರ್ಟ್‌ ಮಧ್ಯ ಪ್ರವೇಶಿಸಿ, ಚಾಟಿ ಬೀಸಿದ ನಂತರವೇ ಚುನಾವಣೆ ಪ್ರಕ್ರಿಯೆಗೆ ಸಿದ್ಧತೆಗಳು ಆರಂಭವಾಗುತ್ತವೆ. ಗ್ರಾಮ ಪಂಚಾಯ್ತಿ ಚಿತ್ರಣವೂ ಇದಕ್ಕಿಂತ ಭಿನ್ನವಾಗಿಲ್ಲ. ಪಂಚಾಯ್ತಿ ಚುನಾವಣೆಗೂ ನ್ಯಾಯಾಲಯದಿಂದಲೇ ನಿರ್ದೇಶನ ಬಂದಿತು. ವಾಸ್ತವಹೀಗಿರುವಾಗ,ಹೊಸಕಾಯ್ದೆಯಲ್ಲಿ ಸರ್ಕಾರದ “ವಿಕೇಂದ್ರೀಕ ರಣದ ಮಂತ್ರ’ವನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ವಾರ್ಡ್‌ಗಳ ಮರುವಿಂಗಡಣೆ, ವಲಯ ಸಮಿತಿಗಳ ಮೂಲಕ ಯೋಜನೆಗಳ ಅನುಷ್ಠಾನ, ರೊಟೇಷನ್‌ ಪದ್ಧತಿಯಲ್ಲಿ ಮೀಸಲಾತಿಯಂತಹ ಅಂಶಗಳ ತುರ್ತು ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಕಾಯ್ದೆ ಮೂಲಕ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಅನ್ನು ಜಾರಿಗೆ ತಂದ ಸಂದರ್ಭವು ತುಸು ಅನುಮಾನದಿಂದ ನೋಡುವಂತೆ ಮಾಡಿದೆ.

ಇದನ್ನೂ ಓದಿ : ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಶ್ರೀಧರ್ ಡಿ.ಎಸ್ ಗೆ ಪಾರ್ತಿಸುಬ್ಬ ಪ್ರಶಸ್ತಿ

ಯಾಕೆಂದರೆ, ಚುನಾವಣೆಗೆ ಹೈಕೋರ್ಟ್‌ ಆದೇಶ ಹಾಗೂ ಸುಪ್ರೀಂ ಕೋರ್ಟ್‌ಗೆ ಸರ್ಕಾರದ ಮೇಲ್ಮನವಿ ಸಲ್ಲಿಕೆ ನಡುವಿನ ಅವಧಿಯಲ್ಲೇ ಬಂದಿದೆ ಎನ್ನುತ್ತಾರೆ ತಜ್ಞರು. “ಕಾಯ್ದೆಗೆ ನಮ್ಮ ತಕರಾರು ಇಲ್ಲ. ಆದರೆ, ಅದು ಬಂದ ಸಂದರ್ಭ ಹಾಗೂ ಸಭೆಗಳು ಇನ್ನೂ ಪೂರ್ಣಗೊಂಡಿರಲಿಲ್ಲ. ತರಾತುರಿಯಲ್ಲಿ ವರದಿ ಮಂಡಿಸಿ, ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡ ರೀತಿ ಬಗ್ಗೆ ಆಕ್ಷೇಪ ಇದೆ. ವಿಕೇಂದ್ರೀಕರಣಕ್ಕಿಂತ ಚುನಾವಣೆಗೆ ತಡೆಯೊಡ್ಡುವ ಉದ್ದೇಶ ಇದರ ಹಿಂದಿದೆ’ ಎಂದು ಬಿಬಿಎಂಪಿ ವಿಧೇಯಕ ಪರಿಶೀಲನೆಗೆ ರಚಿಸಲಾಗಿದ್ದ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ ಸದಸ್ಯ ಪಿ.ಆರ್‌. ರಮೇಶ್‌ ತಿಳಿಸುತ್ತಾರೆ.

ಹೊಸ ಕಾಯ್ದೆ ತರುವ ಮುನ್ನ ಸರ್ಕಾರೇತರ ಸಂಘ-ಸಂಸ್ಥೆಗಳು, ತಜ್ಞರು, ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಿತ್ತು. ಬಿಡಿಎ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳನ್ನೂ ಇದರ ವ್ಯಾಪ್ತಿಗೆ ತರಲು ಅವಕಾಶ ಇತ್ತು. ಆದರೆ, ಇದಾವುದೂ ಆಗಿಲ್ಲ. ಈ ನಿಟ್ಟಿನಲ್ಲಿ ಅಪೂರ್ಣ ಎಂದೇ ಹೇಳಬೇಕಾಗುತ್ತದೆ. ಆದರೆ, ಪುನರ್‌ವಿಂಗಡಣೆ, ವಾರ್ಡ್‌, ವಲಯ,ಏರಿಯಾ ಸಮಿತಿಗಳ ರಚನೆ ಹಾಗೂ ಆ ಮೂಲಕ ಸ್ಥಳೀಯ ಮಟ್ಟದ ಸಮಸ್ಯೆಗಳಿಗೆಆಯಾಸಮಿತಿಮಟ್ಟದಲ್ಲಿಪರಿಹಾರದಂತಹಕ್ರಮಗಳು ಸ್ವಾಗತಾರ್ಹ ಎಂದು ಬಿ.ಪ್ಯಾಕ್‌ ಸದಸ್ಯ ಹರೀಶ್‌ ಹೇಳುತ್ತಾರೆ.

Advertisement

ಅದೇನೇ ಇರಲಿ, ವಿಧೇಯಕವು ವಿಧಾನ ಮಂಡಲದಲ್ಲಿ ಅಂಗೀಕಾರಗೊಂಡು ಕಾಯ್ದೆಯಾಗಿರುವುದರಿಂದ ಸರ್ಕಾರಕ್ಕೆ ತುಸು ಬಲ ಬಂದಂತಾಗಿದೆ. ಒಂದು ವೇಳೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಿದರೆ, ಕಾಯ್ದೆಯು ಮುಂದಿನ ಐದು ವರ್ಷಗಳ ಕಾಲ ಅಪ್ರಯೋಜಕ ಆಗಲಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆಮಾಡುವ ಕೆಲಸ ಸರ್ಕಾರ ಮಾಡಬಹುದು ಎಂದು ಹಿರಿಯ ವಕೀಲರೂ ಆದ ಹರೀಶ್‌ ಅಭಿಪ್ರಾಯಪಡುತ್ತಾರೆ.

ಚುನಾವಣಾ ಆಯೋಗಕ್ಕೆ ಪತ್ರ :

ಮುಂದಿನ ಫೆಬ್ರವರಿವರೆಗೆ ವರದಿ ಮಂಡನೆಗೆ ಅವಕಾಶ ಕೋರಲಾಗಿತ್ತು. ಇದೀಗ ಏಕಾಏಕಿ ಯಾವುದೇ ಚರ್ಚೆ ಮಾಡದೆ ವರದಿ ಮಂಡನೆ ಮಾಡಲಾಗಿದೆ. ಇದರಿಂದ ಆಡಳಿತ ವಿಕೇಂದ್ರೀಕರಣಕ್ಕಿಂತ ಸಮಸ್ಯೆಯೇ ಹೆಚ್ಚಾಗಲಿದೆ. ಅಲ್ಲದೆ, ಹೈಕೋರ್ಟ್‌ ನಿರ್ದೇಶನ ನೀಡಿ ವಾರಕಳೆದರೂ ಮೀಸಲಾತಿ ಪಟ್ಟಿ ಪ್ರಕಟಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಯಾವುದೇಕ್ರಮಕೈಗೊಂಡಿಲ್ಲ. ಈ ಸಂಬಂಧ ಆಯೋಗಕ್ಕೆ ಪತ್ರ ಬರೆಯಲಾಗುವುದು ಎಂದು ಮಾಜಿ ಕಾರ್ಪೊರೇಟರ್‌ ಶಿವರಾಜು ಅವರು ತಿಳಿಸಿದರು.

ರಾಜಕೀಯ ನಾಯಕರಿಗೆ ಅನುಕೂಲ :

ನೂತನ ಕಾಯ್ದೆ ರಚಿಸುವ ಮೂಲಕ ಸ್ಥಳೀಯ ಆಡಳಿತ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳುವ ಉತ್ತಮ ಅವಕಾಶವನ್ನು ಸರ್ಕಾರಕೈಚೆಲ್ಲಿದೆ. ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡುವ ಬದಲು, ಶಾಸಕರಿಗೆ ಅಧಿಕಾರ ನೀಡಲಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್‌. ಸ್ಥಳೀಯ ಸಂಸ್ಥೆಯಲ್ಲಿ ಶಾಸಕರಿಗೆ ಅಧಿಕಾರ ನೀಡುವಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ. ಅದೇ ರೀತಿ, ವಾರ್ಡ್‌ ಮಟ್ಟದ ಅಧಿಕಾರವನ್ನು ಕೇವಲ ಸಲಹೆಗೆ ಸೀಮಿತಗೊಳಿಸಲಾಗಿದೆ. ಆರ್ಥಿಕ ಮತ್ತು ಆಡಳಿತಾತ್ಮಕ ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಿಎಜಿ ನೀಡಿದ್ದ ಹಲವು ಸಲಹೆಗಳನ್ನು ಸೇರಿಲ್ಲ ಎಂದು ದೂರಿದ ಅವರು, ಮಂಗಳೂರು ಮತ್ತು ಮೈಸೂರು ನಗರಗಳಲ್ಲೂ ಜನಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿಯೂ ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮೇಯರ್‌ ಅಧಿಕಾರ ಅವಧಿ ಹೆಚ್ಚಳ ಪ್ಲಸ್‌ ಪಾಯಿಂಟ್‌ :

ಮೇಯರ್‌ ಮತ್ತು ಉಪ ಮೇಯರ್‌ ಅಧಿಕಾರ ಅವಧಿ ಹೆಚ್ಚಳ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಅನುಕೂಲವಾಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಮೇಯರ್‌ ಮತ್ತು ಉಪ ಮೇಯರ್‌ ಅವರ ಅಧಿಕಾರ ಅವಧಿ ಕೇವಲಒಂದು ವರ್ಷ ಮಾತ್ರ ಇತ್ತು. ಇದೀಗ ಇವರ ಅಧಿಕಾರ ಅವಧಿ 30 ತಿಂಗಳಿಗೆ ಹೆಚ್ಚಳ ಮಾಡಲಾಗಿದೆ. ಒಂದು ವರ್ಷದ ಅವಧಿಯಲ್ಲಿ ವ್ಯವಸ್ಥೆ ಅರ್ಥ ಮಾಡಿಕೊಂಡು ಯೋಜನೆ ಅನುಷ್ಠಾನ ಮಾಡುವುದರಲ್ಲೇ ಕಳೆದು ಹೋಗುತ್ತಿತ್ತು. ಹೀಗಾಗಿ, ಮೇಯರ್‌ ಒಂದು ನಿರ್ದಿಷ್ಟ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾಗುತ್ತಿರಲಿಲ್ಲ. ಎರಡುವರೆ ವರ್ಷವಾಗಿರುವುದರಿಂದ ವ್ಯವಸ್ಥೆ ಸುಧಾರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : ನೂತನ ಕೋವಿಡ್ ಎಫೆಕ್ಟ್: ಅಂತಾರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಿದ ಸೌದಿಅರೇಬಿಯಾ

ಬಿಬಿಎಂಪಿ ವಿಧೇಯಕದಲ್ಲಿ ಆಡಳಿತ, ಪ್ರಾದೇಶಿಕ ಯೋಜನೆ, ಹಣಕಾಸು ಮತ್ತು ಮಾನವಸಂಪನ್ಮೂಲಬಳಕೆಗೆ ಒತ್ತು ನೀಡಬೇಕಿದೆ. ವಾರ್ಡ್‌ ಮತ್ತು ಪ್ರಾಂತ ಸಮಿತಿಗಳ ರಚನೆಯಿಂದ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದಾಗಿದೆ. ಆದರೆ,ಈ ಬಗ್ಗೆ ಮತ್ತಷ್ಟು ಚರ್ಚೆ ಮಾಡಬೇಕಿತ್ತು. ಶ್ರೀಕಾಂತ್‌ ವಿಶ್ವನಾಥನ್‌, ಜನಾಗ್ರಹ ಸಂಸ್ಥೆಯ ಸಿಇಒ

ಕೆಎಂಸಿ ಕಾಯ್ದೆಯನ್ನು ಕತ್ತರಿಸಿ, ಹೊಸ ಕಾಯ್ದೆಯಲ್ಲಿ ಅಂಟಿಸಲಾಗಿದೆ. ಹೊಸದಾಗಿಬಿಬಿಎಂಪಿಗೆನಗರದ ಸುತ್ತಮುತ್ತಲಿನ ಪ್ರದೇಶಗಳ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಇದರ ಹಿಂದೆ ರಿಯಲ್‌ ಎಸ್ಟೇಟ್‌ ಮಾಫೀಯಾಅಡಗಿದೆ. ಅಬ್ದುಲ್‌ ವಾಜಿದ್‌, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ.

ನಗರದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಕಾಯ್ದೆ ರೂಪಿಸಲಾಗಿದೆ. ವಿಕೇಂದ್ರೀಕರಣಕ್ಕೆ ಒತ್ತುನೀಡಲಾಗಿದ್ದು,ವಾರ್ಡ್‌ಗಳ ಸಂಖ್ಯೆ ಹೆಚ್ಚಾಗುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಉತ್ತಮ ಆಡಳಿತ ನೀಡಲು ಅನುಕೂಲವಾಗಲಿದೆ. ಪದ್ಮನಾಭ ರೆಡ್ಡಿ, ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ

ನೂತನ ಕಾಯ್ದೆಯಲ್ಲಿ ಉತ್ತಮ ಅಂಶಗಳು ಅಡಕವಾಗಿದ್ದು, ಭವಿಷ್ಯದ ದೃಷ್ಟಿಯಿಂದ ಇದೊಂದು ಸಮಗ್ರ ಕಾಯ್ದೆಯಾಗಿದೆ. ಮುನೀಂದ್ರ ಕುಮಾರ್‌, ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ

ಸಿಎಜಿಅಂಶಗಳ ಕಡೆಗಣನೆ :

  • ಬಿಬಿಎಂಪಿ ಚುನಾವಣೆ ನಡೆಸುವ ಮುನ್ನ ಪ್ರಕಟಿಸುವ ಮೀಸಲಾತಿ ಪಟ್ಟಿಯ ಆಯ್ಕೆ ಅಧಿಕಾರ ಚುನಾವಣಾ ಆಯೋಗಕ್ಕೆ ನೀಡಬೇಕು.
  • ಕೇಂದ್ರ ಹಣಕಾಸು ಆಯೋಗದಿಂದ ಮಂಜೂರಾಗುವ ಅನುದಾವನ್ನು ಪಾಲಿಕೆ ಸರ್ಮಪಕವಾಗಿ ಬಳಿಸಿಕೊಳ್ಳುವಂತೆ ಮಾಡಬೇಕು. ಇದು ಪಾಲನೆ ಆಗುತ್ತಿಲ್ಲ. ಇದಕ್ಕೆ ಸ್ಪಷ್ಟನೆ ನೀಡಬೇಕು.
  • ವಾರ್ಡ್‌ ಕಮಿಟಿ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಸಲಹೆಗಳನ್ನು ಕಡೆಗಣಿಸಲಾಗಿದೆ.

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next