Advertisement

ಬಿಬಿಎಂಪಿ ಚುನಾವಣೆ ಸವಾಲಾಗಿ ಸ್ವೀಕರಿಸಿ

06:49 PM Jul 19, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಗೆದ್ದೇಗೆಲ್ಲಬೇಕಿದೆ.ಇದಕ್ಕಾಗಿಯುವಮೋರ್ಚಾಒಂದು ತಂಡವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಕಂದಾಯಸಚಿವ ಆರ್‌.ಅಶೋಕ್‌ ಹೇಳಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿಭಾನುವಾರ ನಡೆದ ಯುವ ಮೋರ್ಚಾರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿಮಾತನಾಡಿ, ಮುಂಬರುವ ಚುನಾವಣೆಯ ಪರೀಕ್ಷೆಯಲ್ಲಿ ಗೆದ್ದು ನಿಮ್ಮ ನಾಯಕñವನ್ವ ‌ು° ದೃಢಪಡಿಸಿಕೊಳ್ಳಿ ಎಂದರು.

ಬಿಜೆಪಿಯನ್ನು ಈಗ ಪ್ರಪಂಚವೇದೊಡ್ಡ ಪಕ್ಷವಾಗಿ ಗುರುತಿಸುತ್ತಿದೆ.ಅದನ್ನು ನಾವು ಉಳಿಸಿಕೊಳ್ಳಬೇಕು.ಪ್ರಧಾನಿಯವರು 18ರಿಂದ 20 ಗಂಟೆಕೆಲಸ ಮಾಡುತ್ತಾರೆ. ಕೋವಿಡ್‌ನಿಂದಹೊರಬರಲು ನರೇಂದ್ರ ಮೋದಿ ಅವರಶ್ರಮವೂ ಕಾರಣವಾಗುತ್ತಿದೆ. ಅಯೋಧ್ಯೆ,ಕಾಶ್ಮೀರದ ವಿಚಾರ, ಭಯೋತ್ಪಾದನೆಮೊದಲಾದ ವಿಚಾರಗಳಲ್ಲಿ ದಿಟ್ಟನಿರ್ಧಾರವನ್ನು ಪ್ರಧಾನಿಯವರುಕೈಗೊಂಡಿದ್ದಾರೆ.

ಅಂಥ ಚಮತ್ಕಾರವನ್ನುಬಿಜೆಪಿ ಮಾಡಿದೆ ಎಂದು ತಿಳಿಸಿದರು.ಯುವ ಮೋರ್ಚಾ ರಾಷ್ಟ್ರೀಯಅಧ್ಯಕ್ಷರು ಮತ್ತು ಸಂಸದರೂ ಆದ ತೇಜಸ್ವಿಸೂರ್ಯ ಮಾತನಾಡಿ, ಯುವಮೋರ್ಚಾವು ನಿರಂತರವಾಗಿ ಅನೇಕನಾಯಕರನ್ನು ಪಕ್ಷಕ್ಕೆ ನೀಡಿದೆ. ಅದನ್ನುಸ್ಫೂರ್ತಿಯ ವಿಷಯವನ್ನಾಗಿ ತೆಗೆದುಕೊಂಡು ಯುವ ಮೋರ್ಚಾದಪದಾಧಿಕಾರಿಗಳು ಬೆಳೆಯಬೇಕು ಎಂದುಆಶಿಸಿದರು.

ರಾಜ್ಯಯುವಮೋರ್ಚಾಅಧ್ಯಕ್ಷರಾದಡಾ. ಸಂದೀಪ್‌ ಕುಮಾರ್‌, ಪಕ್ಷದ ರಾಜ್ಯಪ್ರಧಾನಕಾರ್ಯದರ್ಶಿಗಳಾದ ಮಹೇಶ್‌ಟೆಂಗಿನಕಾಯಿ ಮತ್ತು ಆಹ್ವಾನಿತಪದಾಧಿಕಾರಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next