ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 51ನೇ ಮೇಯರ್ ಆಗಿ ಕಾಂಗ್ರೆಸ್‌ನ ಸಂಪತ್ ರಾಜ್ ಹಾಗೂ 50ನೇ ಉಪಮೇಯರ್ ಆಗಿ ಜೆಡಿಎಸ್‌ನ ಪದ್ಮಾವತಿ ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ. ಇದರಿಂದ ಮೇಯರ್ ಆಯ್ಕೆ ವಿಚಾರದಲ್ಲಿ ಸಂಸದಡಿ.ಕೆ.ಸುರೇಶ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಹಿನ್ನಡೆಯಾದಂತಾಗಿದೆ. ಜೆಡಿಎಸ್ ಜತೆ ಮೈತ್ರಿ ಪಕ್ಕಾ ಆಗಿ ಮೇಯರ್ ಅಭ್ಯರ್ಥಿಆಯ್ಕೆ ವಿಚಾರ ಬಂದಾಗ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ಪ್ರತಿನಿಧಿಸುವವರಿಗೆ ಅವಕಾಶ ಕೊಡಬೇಕೆಂದು ಡಿಕೆಎಸ್ ಪಟ್ಟು ಹಿಡಿದಿದ್ದರು. ಅದೇ ರೀತಿ ದಿನೇಶ್ ಗುಂಡೂರಾವ್ ತಮ್ಮ ಕ್ಷೇತ್ರದ ಗೋವಿಂದರಾಜು ಅವರ ಪರ ಪಟ್ಟು ಹಿಡಿದಿದ್ದರು. ಡಿ.ಕೆ.ಸುರೇಶ್ ಅವರು ಈ ಸಂಬಂಧ ಬಹಿರಂಗವಾಗಿ ಹೇಳಿಕೆ ನೀಡಿದರೆ, ದಿನೇಶ್ ಗುಂಡೂರಾವ್ ಆಂತರಿಕವಾಗಿ ಪಕ್ಷದ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕರೆದಿದ್ದ ಸಭೆಯಲ್ಲೂ ಡಿ.ಕೆ.ಸುರೇಶ್,
ಬೇಗೂರು ವಾರ್ಡ್‌ನ ಆಂಜನಪ್ಪ ಅವರಿಗೆ ಮೇಯರ್ ಸ್ಥಾನ ಕೊಡಬೇಕೆಂದು ಪ್ರತಿಪಾದಿಸಿದ್ದರು. ಜತೆಗೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಸಹ ತಮ್ಮ
ವ್ಯಾಪ್ತಿಯ ಲಕ್ಷ್ಮಿದೇವಿನಗರ ವಾರ್ಡ್‌ನ ವೇಲುನಾಯಕರ್ ಅವರನ್ನು ಪರಿಗಣಿಸಬಹುದೆಂದು ಹೇಳಿದ್ದರು. ಇವರಿಗೆ
ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ, ಕೆ.ಆರ್.ಪುರಂ ಶಾಸಕ ಭೈರತಿ ಸುರೇಶ್, ಯಶವಂತಪುರ ಶಾಸಕ ಎಸ್
.ಟಿ.ಸೋಮಶೇಖರ್ ಅವರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಒಂದು ಹಂತದಲ್ಲಿ ನಗರದ ಹೊರಭಾಗದ ವಾರ್ಡ್‌ಗಳ ಸದಸ್ಯರಿಗೆ ಆದ್ಯತೆ ನೀಡದಿದ್ದರೆ ತಾವು ಮೇಯರ್ ಚುನಾವಣೆಯ ಮತದಾನದಲ್ಲೇ ಪಾಲ್ಗೊಳ್ಳುವುದಿಲ್ಲ ಎಂಬ ಬೆದರಿಕೆ ಸಹ ಹಾಕಿದ್ದರು.
ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಜತೆಗಿನ ಸಭೆಯ ನಂತರವೂ ಡಿ.ಕೆ.ಸುರೇಶ್, “ನಾನು ನನ್ನ ವಾದ ಮಂಡಿಸಿದ್ದೇನೆ. ನೋಡೋಣ’ ಎಂದಷ್ಟೇ ಹೇಳಿದರು. ಅಂತಿಮವಾಗಿ ಡಿ.ಕೆ.ಸುರೇಶ್ ಅವರು ಸೂಚಿಸಿದ ಅಭ್ಯರ್ಥಿಯನ್ನಾಗಲಿ, ದಿನೇಶ್ ಗುಂಡೂರಾವ್ ಸೂಚಿಸಿದ ಅಭ್ಯರ್ಥಿಯನ್ನಾಗಲಿ ಮೇಯರ್ ಸ್ಥಾನಕ್ಕೆ ಪರಿಗಣಿಸಲಿಲ್ಲ. ಬದಲಿಗೆ ಸಂಪತ್‌ರಾಜ್ ಅವರನ್ನು ಆಯ್ಕೆ ಮಾಡಲಾಯಿತು.
ಎಂಜಿನಿಯರ್: ಸಂಪತ್‌ರಾಜ್ ಎಂಜಿನಿಯರಿಂಗ್ ಪದವೀಧರರಾಗಿದ್ದು ಯುವಕರಾಗಿದ್ದಾರೆ. ಚುನಾವಣಾ
ವರ್ಷವಾದ್ದರಿಂದ ಅಭಿವೃದಿಟಛಿ ಯೋಜನೆಗಳ ಮೇಲೆ ನಿಗಾವಹಿಸಿ ಪಕ್ಷಕ್ಕೆ ಒಳ್ಳೆಯ ಹೆಸರು ತರಬೇಕು. ಜತೆಗೆ
ಪಾಲಿಕೆಯಲ್ಲೂ ಪ್ರತಿಪಕ್ಷದ ಸದಸ್ಯರು ಹೆಚ್ಚಾಗಿರುವುದರಿಂದ ಸಮರ್ಥವಾಗಿ ನಿಭಾಯಿಸಬೇಕೆಂಬ ದೃಷ್ಟಿಯಿಂದ ಸಂಪತ್
ರಾಜ್ ಅವರಿಗೆ ಅಂತಿಮವಾಗಿ ಮಣೆ ಹಾಕಲಾಯಿತು. ಮುಖ್ಯಮಂತ್ರಿಯವರ ತೀರ್ಮಾನಕ್ಕೆ ರಾಮಲಿಂಗಾರೆಡ್ಡಿ,
ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡರು ಸಮ್ಮತಿ ಸೂಚಿಸಬೇಕಾಯಿತು ಎಂದು ಹೇಳಲಾಗಿದೆ.