Advertisement
ಈಗಾಗಲೇ ವಾರ್ಡ್‌ಗಳ ವ್ಯಾಪ್ತಿಯ ಗಡಿಗಳ ಚೆಕ್ಕುಬಂದಿ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸ ಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳು ಕೂಡ ಸ್ವೀಕಾರವಾಗುತ್ತಿವೆ. ಈ ಮಧ್ಯೆ ಬಿಜೆಪಿಯ ಭದ್ರಕೋಟೆ ಎನಿಸಿರುವ ಪದ್ಮನಾಭನಗರ, ಬೊಮ್ಮನಹಳ್ಳಿ, ರಾಜ ರಾಜೇಶ್ವರಿ ನಗರ, ಮಹದೇವಪುರ, ಯಲಹಂಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿತಗೊಳಿಸಿದ್ದು ಅಲ್ಲದೆ ಕೆಲವು ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಅಲ್ಪಸಂಖ್ಯಾತರು ಮತ್ತು ಕೊಳಗೇರಿ ನಿವಾಸಿಗಳು ಹೆಚ್ಚಿರುವ ಪ್ರದೇಶಗಳನ್ನು ಸೇರಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
Related Articles
Advertisement
ಈ ಹಿಂದೆ ಪದ್ಮನಾಭನಗರದಲ್ಲಿದ್ದ ಕರೀಸಂದ್ರ ವಾರ್ಡ್ ಇಲ್ಲವಾಗಿದೆ. ಗಣೇಶ ಮಂದಿರ ವಾರ್ಡ್, ದೇವಗಿರಿ ವಾರ್ಡ್ ಮಾಡಲಾಗಿದೆ. ಆದರೆ ಇಲ್ಲಿ ದೂರದ ಯಾರಾಬ್ ನಗರ, ಇಲಿಯಾಸ್ ನಗರ ಪ್ರದೇಶಗಳನ್ನು ಸೇರಿಸಲಾಗಿದೆ. ಜಯನಗರದಲ್ಲೂ ಕೂಡ ಇದೇ ಕೆಲಸ ಮಾಡಲಾಗಿದೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ಬಡೆಮಕಾನ್ ಪ್ರದೇಶ ಸೇರಿಸುವ ಕೆಲಸ ನಡೆದಿದೆ. ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿ ಮೈನಾರೀಟಿ ವೋಟ್ ಸೇರಿಸುವ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಮುಖಂಡರು ದೂರುತ್ತಾರೆ.
ಜನಸಂಖ್ಯೆ ಆಧರಿಸಿ ವಾರ್ಡ್ ವಿಂಗಡಣೆ :
ಈ ಹಿಂದೆ ಬಿಜೆಪಿ ಅಧಿಕಾರ ಅವಧಿಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣೆ “ಸಿಲೋನ್ ಮ್ಯಾಪ್’ ರೀತಿಯಲ್ಲಿತ್ತು. ಅದನ್ನು ಈಗ ಸರಿಪಡಿಸಲಾಗಿದೆ. ವಾರ್ಡ್‌ವಾರು ಪುನರ್ ವಿಂಗಡಣೆಯಲ್ಲಿ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಪಿ.ಆರ್.ರಮೇಶ್ ಹೇಳುತ್ತಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ಆ ತಾಂತ್ರಿಕವಾಗಿ ವಾರ್ಡ್‌ಗಳ ರಚಿಸಲಾಗಿತ್ತು. ಜನಸಂಖ್ಯೆ ಆಧರಿಸಿ ವಾರ್ಡ್ ವಿಂಗಡಿಸಲಾಗಿದೆ. ಬಿಜೆಪಿಯವರು ಮಾಡುತ್ತಿರುವ ಆರೋಪಗಳಲ್ಲಿ ಹುರಳಿಲ್ಲ. ತಮ್ಮ ಲೋಪ ಮುಚ್ಚಿಕೊಳ್ಳುವ ನಿಟ್ಟಿನಲ್ಲಿ ದೂರುತ್ತಿದ್ದಾರೆ. ಸರಿಯಾದ ನಿಟ್ಟಿನಲ್ಲೇ ವಾರ್ಡ್ ವಿಂಗಡಿಸಲಾಗಿದೆ ಎಂದು ಹೇಳುತ್ತಾರೆ.