Advertisement

ಬಿಬಿಎಂಪಿ ವ್ಯಾಪ್ತಿ:ಕೊರೊನಾ ಪರಿಹಾರ ಅರ್ಜಿ ಸಲ್ಲಿಕೆಗೆ ಡಿ.28 ಕಡೇ ದಿನ

11:50 AM Dec 21, 2021 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿ ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಸರ್ಕಾರ ನೀಡುವ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಡಿ.28 ಕೊನೆಯ ದಿನವ ಗಿದೆ.

Advertisement

ಪಾಲಿಕೆಯ ರಾಜರಾಜೇಶ್ವರಿ ನಗರ ವಲಯದ ಸಂತ್ರಸ್ತ ಕುಟುಂಬದ ಕಾನೂನುಬದ್ಧ ವಾರಸುದಾರರು ಜಾಲಹಳ್ಳಿ, ಮತ್ತಿಕೆರೆ, ಯಶವಂತಪುರ, ಲಕ್ಷ್ಮೀದೇವಿನಗರ, ಲಗ್ಗೆರೆ, ಮಲ್ಲತ್ತಹಳ್ಳಿ, ಬಂಗಾರಪ್ಪನಗರ, ಕೆಂಗೇರಿ, ಕೆಂಗೇರಿ ಉಪನಗರ, ಉಲ್ಲಾಳು ಉಪನಗರ, ಹೇರೋಹಳ್ಳಿ ಮತ್ತು ತಿಪ್ಪೇನಹಳ್ಳಿಯಲ್ಲಿ ರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮು ದಾಯ ಆರೋಗ್ಯ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವೇಳೆ ಮೂರು ನಮೂನೆಗಳು, ಮೃತ ವ್ಯಕ್ತಿಯ ಪಾಸಿಟಿವ್‌ ವರದಿ ಮತ್ತು ರೋಗಿ (ಬಿಯು) ಸಂಖ್ಯೆ, ಮರಣ ಪ್ರಮಾಣಪತ್ರ, ಮೃತ ವ್ಯಕ್ತಿಯ ಆಧಾರ್‌ ಪ್ರತಿ ಅಥವಾ ಇತರೆ ಗುರುತಿನ ಪತ್ರಗಳು, ಬಿಪಿಎಲ ಪಡಿತರಚೀಟಿ (ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ) ಪ್ರತಿಗಳನ್ನು ದಾಖಲೆಗಳಾಗಿ ಸಲ್ಲಿಸಬೇಕು. ಜತೆಗೆ ಅರ್ಜಿದಾರರ ಆಧಾರ್‌ ಪ್ರತಿ, ಪಡಿತರ ಚೀಟಿ, ಬ್ಯಾಂಕ್‌ ಅಥವಾ ಅಂಚೆ ಖಾತೆ ಪಾಸ್‌ಬುಕ್‌ ಪ್ರತಿಯನ್ನು ಲಗತ್ತಿಸಬೇಕು ಎಂದು ವಲಯ ಆಯುಕ್ತ ರೆಡ್ಡಿ ಶಂಕರಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next