Advertisement

ಒತ್ತುವರಿ ಬಗ್ಗೆ ಬಿಬಿಎಂಪಿ ಜಾಣ ಕುರುಡು

11:28 AM Sep 09, 2017 | |

ಬೆಂಗಳೂರು: ಭೂ ಕಬಳಿಕೆದಾರರು ನೂರಾರು ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದರೂ ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿ ಆಕೋಶವ್ಯಕ್ತಪಡಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆ ಒತ್ತುವರಿದಾರರು ಸರ್ಕಾರಿ ಜಾಗಗಳಲ್ಲಿ  ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆ ನೀಡುತ್ತಿದ್ದಾರೆ.

Advertisement

ಬಿಬಿಎಂಪಿಯಲ್ಲಿರುವ 198 ವಾರ್ಡ್‌ ಸದಸ್ಯರೂ ಭ್ರಷ್ಟರೇ ತುಂಬಿಕೊಂಡಿದ್ದಾರೆ. ಹೀಗಾಗಿ ಕೆರೆಒತ್ತುವರಿಯಾಗುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆಗೆ ಪ್ರತ್ಯೇಕ  ಸಮಿತಿ ರಚನೆಯಾಗಬೇಕಿದೆ. ಇದಲ್ಲದೆ ಬಿಡಿಎಗೆ ಸೇರಿದ ಕೋಟ್ಯಾಂತರ ರೂ ಮೌಲ್ಯದ ಭೂಮಿ ಕಳ್ಳರ ಪಾಲಾಗುತ್ತಿದೆ. ಬಿಡಿಎ ಕೂಡಲೇ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಬಳಕೆಗೆ ಮುಂದಾಗಬೇಕು ಇಲ್ಲವಾದರೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತೆರವು ಮಾಹಿತಿ ಬಹಿರಂಗ ಪಡಿಸಿ: ಭೂಕಬಳಿಕೆದಾರರಿಂದ ವಶಪಡಿಸಿಕೊಂಡಿರುವ ಒತ್ತುವರಿ ಆಸ್ತಿ ,ಒತ್ತುವರಿದಾರರ ಬಗ್ಗೆ ರಾಜ್ಯಸರ್ಕಾರ ಮಾಹಿತಿ ಬಹಿರಂಗ ಪಡಿಸಬೇಕು ಎಂದು ನಮ್ಮ ಬೆಂಗಳೂರು ಪ್ರತಿಷ್ಟಾನ ಒತ್ತಾಯಿಸಿದೆ.ರಾಜ್ಯಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 15,833 ಎಕರೆ ಭೂಮಿ ಒತ್ತುವರಿದಾರರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ. ಆದರೆ, ವಶಪಡಿಸಿಕೊಂಡ ಭೂಮಿಯ ಒಟ್ಟು ಮೌಲ್ಯ ಎಷ್ಟು?

ಸಾರ್ವಜನಿಕರಿಗೆ ಈ ಭೂಮಿಯನ್ನು ಯಾವ ರೀತಿ ಹಂಚಲಾಗುತ್ತೆ ಎಂಬುದರ ಬಗ್ಗೆ ಮಾಹಿತಿ ನೀಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ವಶಪಡಿಸಿಕೊಂಡಿರುವ ಭೂಮಿಯನ್ನು ಸರ್ಕಾರ ಹರಾಜು ಹಾಕುವುದಾಗಿ ಹೇಳಿದ್ದು, ಇದರಲ್ಲಿ ಮತ್ತೆ ಒತ್ತುವರಿದಾರರು ಹಾಗೂ ಬಿಲ್ಡರ್‌ಗಳು ಭಾಗವಿಸುವ ಸಾಧ್ಯತೆಯಿದೆ ಎಂದು ಪ್ರತಿಷ್ಠಾನ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next