Advertisement

ಸಾಕು ನಾಯಿ ಪ್ರವೇಶಕ್ಕೆ ಬಿಬಿಎಂಪಿ ಷರತ್ತು

01:33 PM Aug 12, 2021 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಿರುವ ಕೆರೆ ಬಳಿ ಸಾಕು ನಾಯಿಗಳ ಪ್ರವೇಶಕ್ಕೆ ಹಲವು ಷರತ್ತುಗಳೊಂದಿಗೆ ಹೊಸ ನಿಯಮ ಜಾರಿ ಮಾಡಿ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.

Advertisement

ನಾಯಿಗಳ ಮಲ ಮೂತ್ರ ವಿಸರ್ಜನೆ, ಬೊಗಳುವಿಕೆ, ದಾಳಿ ಮಾಡಿ ಕಚ್ಚಿರುವ ಅನೇಕ ಘಟನೆಗಳು ನಡೆದಿವೆ.ಈಕುರಿತು ಅನೇಕ ಜಗಳ ನಡೆದ ಘಟನೆಗೆ ಪರಿಹಾರ ಸಿಗದೆ ಸಮಸ್ಯೆಯಾಗಿತ್ತು. ಈ ಸಮಸ್ಯೆಗಳಿಗೆ ಪರಿಹಾರವಾಗಿ ಬಿಬಿಎಂಪಿ ಹೊಸ ನಿಯಮಾವಳಿಯನ್ನು ಜಾರಿ ಮಾಡಿದೆ.

ಹೊಸ ನಿಯಮದಂತೆ ಸಾರ್ವಜನಿಕರ ಪ್ರವೇಶ ಅವಧಿಯಲ್ಲಿ ಸಾಕು ನಾಯಿಗಳಿಗೆ ಅವಕಾಶವಿರುವುದಿಲ್ಲ. ಕೆರೆಗಳಆವರಣದಲ್ಲಿ ವಾಕಿಂಗ್‌
ಮಾಡಿಸುವ ಸಾಕು ನಾಯಿಗಳಿಗೆ ಕೊರಳಿಗೆ ಕಡ್ಡಾಯವಾಗಿ ಸರಪಳಿ ಹಾಕಿರಬೇಕು. ಬಾಯಿಗೆ ಕುಕ್ಕೆ ಕಡ್ಡಾಯವಾಗಿರಬೇಕು. ನಾಯಿಗಳಿಗೆ ರೇಬಿಸ್‌ ಲಸಿಕೆ ಕಡ್ಡಾಯ ಹಾಕಿಸಿ, ಅಧಿಕಾರಿಗಳು ಕೇಳಿದಾಗ ಲಸಿಕೆ ಕುರಿತು ದಾಖಲಾತಿ ತೋರಿಸಬೇಕು. ಅಲ್ಲದೆ, ನಾಯಿಗಳು ಮಲಮೂತ್ರ ವಿಸರ್ಜನೆ ಮಾಡದಂತೆ ಮಾಲೀಕರು ಎಚ್ಚರ ವಹಿಸಬೇಕು. ಮಲಮೂತ್ರ ವಿಸರ್ಜಿಸಿದರೆ ಅದನ್ನುಮಾಲೀಕರೇ ಸ್ವಚ್ಛಗೊಳಿಸಬೇಕು.

ಸ್ವಚ್ಛ ಮಾಡದೆ ನಿರ್ಲಕ್ಷ್ಯ ವಹಿಸಿದರೆ 500 ರೂ. ದಂಡ ವಿಧಿಸಲಾಗುತ್ತದೆ ಇನ್ನು ಸಾಕು ನಾಯಿಗಳಿಗೆ ಕೆರೆಗಳ ಅಂಗಳದಲ್ಲಿ ಆಹಾರ ನೀಡುವುದಕ್ಕೆ ನಿಷೇಧ ಮಾಡಲಾಗಿದೆ.

ಇದನ್ನೂ ಓದಿ:ಪಕ್ಷದ ಟ್ವೀಟರ್ ಖಾತೆ ಬ್ಲಾಕ್: ಮೋದಿ ಸರ್ಕಾರದ ಒತ್ತಡದಲ್ಲಿ ಟ್ವೀಟರ್ ಇದೆ : ಕಾಂಗ್ರೆಸ್ ಆರೋಪ

Advertisement

ದೊಡ್ಡ ತಳಿ ನಾಯಿಗಳಿಗೆ ನಿರ್ಬಂಧ: ಉಗ್ರ ಸ್ವಭಾವ/ದೊಡ್ಡ ತಳಿಯ ನಾಯಿಗಳಾದ ರಾಟ್‌ ವೀಲರ್‌, ಜರ್ಮನ್ ಶೆಫರ್ಡ್, ಪಿಟ್ ಬುಲ್ ಡಾಬರ್‌ ಮ್ಯಾನ್‌,ಗ್ರೇಟ್‌ ಡೇನ್‌ ಸೇರಿದಂತೆ ಅಪಾಯಕಾರಿ ನಾಯಿಗಳನ್ನು ಕೆರೆ ಆವರಣದಲ್ಲಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಪ್ರದೇಶದ ವೇಳೆ ಸಾಕು ನಾಯಿಗಳಿಗೆ ಅವಕಾಶವಿರುವುದಿಲ್ಲ. ಪ್ರವೇಶದ ಸಮಯದಲ್ಲಿ ಸಾಕು ನಾಯಿಯಿಂದ ಯಾವುದೇ ರೀತಿಯ ಸಮಸ್ಯೆಯಾದಂತೆ ಮಾಲೀಕರು ಎಚ್ಚರ ವಹಿಸಿಬೇಕು.

Advertisement

Udayavani is now on Telegram. Click here to join our channel and stay updated with the latest news.

Next