Advertisement
ಗುಣಶೇಖರ್ ಅವರು 9241.05 ಕೋಟಿ ವೆಚ್ಚದ ಅಯವ್ಯಯವನ್ನು ಮಂಡಿಸಿದ್ದು, ಬಜೆಟ್ ಮುಖ್ಯಾಂಶ ಇಲ್ಲಿದೆ.
ಬೆಂಗಳೂರಿನ ಕಸ ನಿರ್ವಹಣೆಗೆ 751 ಕೋಟಿ ಮೀಸಲು
198 ವಾರ್ಡ್ ಗಳಲ್ಲಿಯೂ ಚಿಂದಿ ಆಯುವವರ ನೇಮಕಕ್ಕೆ ಚಿಂತನೆ
ಎಲ್ಲಾ ವಾರ್ಡ್ ಗಳಲ್ಲಿ ಕಾಂಪೋಸ್ಟ್ ಸಂತೆ ನಡೆಸಲು ನಿರ್ಧಾರ
ಪಠ್ಯ ಪುಸ್ತಕ ವಿತರಣೆ ವಿಳಂಬ ತಪ್ಪಿಸಲು ಪ್ರತಿ 3 ವರ್ಷಕ್ಕೊಮ್ಮೆ ಟೆಂಡರ್
ಪ್ರತಿ ಮನೆಗೆ 2 ಕಸದ ಬುಟ್ಟಿ, 1 ಚೀಲ ವಿತರಿಸಲು 5 ಕೋಟಿ ಮೀಸಲು
ಪ್ರತಿ ವಾರ್ಡ್ ಗೆ 50 ಬೈಸಿಕಲ್ ವಿತರಿಸಲು 4 ಕೋಟಿ ಮೀಸಲು
ಚರಂಡಿಗಳ ಅಭಿವೃದ್ಧಿಗೆ 300 ಕೋಟಿ ಮೀಸಲು
ರಸ್ತೆ ಬದಿ ಗಿಡ ರಕ್ಷಣೆಗೆ 4 ಕೋಟಿ
ಸಂಚಾರಿ ಆರೋಗ್ಯ ಘಟಕಕ್ಕಾಗಿ 3 ಕೋಟಿ
ಹಿರಿಯ ನಾಗರಿಕರಿಗಾಗಿ ಜನರಲ್ ಒಪಿಡಿ, ಡೇ ಕೇರ್
ಇ ಗಣಕೀಕೃತ ಖಾತಾ ನೋಂದಣಿ ವ್ಯವಸ್ಥೆ ಜಾರಿಗೆ
ಎಸ್ಸಿ, ಎಸ್ಟಿಗಳಿಗೆ ನಮ್ಮ ಸ್ವಂತ ಮನೆ ಯೋಜನೆ, ನಗರದ 3 ಕಡೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ
20 ವಿಧಾನಸಭಾ ಕ್ಷೇತ್ರಗಳಲ್ಲಿ ಡಯಾಲಿಸ್ ಕೇಂದ್ರ
ಬಡವರಿಗಾಗಿ ಆಂಜಿಯೋ ಪ್ಲಾಸ್ಟ್ ಸ್ಟಂಟ್ ವಿತರಣೆ
ಮಹಿಳಾ ಕಾರ್ಪೋರೇಟರ್ ಗಳ ವಾರ್ಡ್ ಗೆ ತಲಾ 20 ಲಕ್ಷ
ಕಂಡ, ಕಂಡಲ್ಲಿ ಕಸ ಸುರಿಯೋದನ್ನು ತಪ್ಪಿಸಲು ಮಾರ್ಷಲ್ ಗಳ ನೇಮಕ
Related Articles
Advertisement
ಶಿವಾಜಿನಗರ, ಸರ್ವಜ್ಞನಗರ, ಜಯನಗರ ಸೇರಿ ನಾಲ್ಕು ಕಡೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ
ಶಿಕ್ಷಣ ಇಲಾಖೆಗೆ 89.36 ಕೋಟಿ ಮೀಸಲು, ಬೆಂಗಳೂರು ನಗರದ ಕೆರೆ ನಿರ್ವಹಣೆಗೆ 5 ಕೋಟಿ ರೂ. ಮೀಸಲು.
ಸ್ಮಾರ್ಟ್ ಸಿಟಿ ಮೊಬೈಲ್ ಅಪ್ಲಿಕೇಷನ್ ಅನುಷ್ಠಾನಕ್ಕೆ ಕ್ರಮ, ಬಿಬಿಎಂಪಿಯಲ್ಲಿ ಪೌರವಾಹಿನಿ ತಂಡ ರಚಿಸಲು ಕ್ರಮ.