Advertisement

ಬಿಬಿಎಂಪಿ ಬಜೆಟ್‌ಗೆ ಅನುಮೋದನೆ ಕಗ್ಗಂಟು

12:03 PM May 18, 2018 | Team Udayavani |

ಬೆಂಗಳೂರು: ಬಿಬಿಎಂಪಿಯಲ್ಲಿ 2018-19ನೇ ಸಾಲಿನ ಬಜೆಟ್‌ ಮಂಡನೆಯಾಗಿ ಎರಡೂವರೆ ತಿಂಗಳು ಕಳದಿದ್ದು, ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರ ಬಜೆಟ್‌ಗೆ ಅನುಮೋದನೆ ನೀಡಿರಲಿಲ್ಲ. 

Advertisement

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಲವಾರು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಆಡಳಿತ ನಗರದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರನ್ನು ಮುಖ್ಯವಾಗಿರಿಸಿಕೊಂಡು ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದು, ಸರ್ಕಾರದಿಂದ ಅನುಮೋದನೆ ನಡೆದರೂ, ಯೋಜನೆಗಳು ಜಾರಿಯಾಗುತ್ತೇಯೇ ಎಂಬ ಪ್ರಶ್ನೆಗಳು ಮೂಡತೊಡಗಿವೆ. 

ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಲು ಇನ್ನು ಹಲವು ದಿನಗಳು ಬೇಕಾಗಿದೆ. ಜತೆಗೆ ಅಧಿಕಾರ ಪಡೆಯಲಿರುವ ಸರ್ಕಾರ ಪಾಲಿಕೆ ಮಂಡಿಸಿರುವ ಬಜೆಟ್‌ನ ಗಾತ್ರ ಕಡಿತಗೊಳಿಸದೇ ಅನುಮೋದನೆ ನೀಡುವುದೇ ಎಂಬ ಸಂದೇಹಗಳ ಆಡಳಿತ ಪಕ್ಷವನ್ನು ಕಾಡತೊಡಗಿವೆ.

ಆ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಅನುಮೋದನೆ ಪಡೆಯಲು ಇನ್ನೂ ಎರಡು ತಿಂಗಳು ಬೇಕಾಗುವುದರಿಂದ ಬಜೆಟ್‌ ಅನುಷ್ಠಾನವಾಗುವುದು ತೀರಾ ಕಡಿಮೆ ಎಂದು ಪಾಲಿಕೆ ಸದಸ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್‌ ಕಳೆದ ಫೆ.28ರಂದು 9,325.53 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದರು. ನಂತರ ಒಂದು ವಾರದ ಸುದೀರ್ಘ‌ ಚರ್ಚೆಯ ಬಳಿಕ 883 ಕೋಟಿ ರೂ. ಹೆಚ್ಚುವರಿ ಆದಾಯ ಹಾಗೂ ವೆಚ್ಚದ ಪರಿಷ್ಕರಣೆಯೊಂದಿಗೆ 2018-19ನೇ ಸಾಲಿನ ಆಯವ್ಯಯದ ಮೊತ್ತವು 10,208 ಕೋಟಿ ರೂ.ಗೆ ಹೆಚ್ಚಿಸಿ ಮಾ.12ರಂದು ಕೌನ್ಸಿಲ್‌ ಸಭೆಯ ಅನುಮೋದನೆ ಪಡೆದಿದ್ದಾರೆ. 

Advertisement

ಆದರೆ, ಪರಿಷ್ಕೃತ ಬಜೆಟ್‌ಗೆ ಅನುಮೋದನೆ ಸಿಕ್ಕಿದ ನಂತರವೂ ಶೀಘ್ರ ಬಜೆಟ್‌ನ್ನು ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯುವ ಪ್ರಯತ್ನಕ್ಕೆ ಆಡಳಿತ ಪಕ್ಷವಾಗಲಿ, ಮೇಯರ್‌ ಆಗಲಿ ಪ್ರಯತ್ನಿಸಿಲ್ಲ. ಇದರ ನಡುವೆಯೇ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬಜೆಟ್‌ಗೆ ಸರ್ಕಾರದಿಂದ ಅನುಮೋದನೆ ದೊರೆಯಲಿಲ್ಲ. 

ಲೇಖಾನುದಾನಕ್ಕೆ ಸಮಸ್ಯೆಯಿಲ್ಲ: ಬಜೆಟ್‌ಗೆ ಅನುಮೋದನೆ ದೊರೆಯದಿದ್ದರೂ ಪಾಲಿಕೆಯ ದಿನ ನಿತ್ಯ ಕಾರ್ಯಗಳಿಗೆ ಯಾವುದೇ ಅಡ್ಡಿಯಿಲ್ಲ. ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ವೇತನ ಹಾಗೂ ಇತರೆ ಕೆಲಸಗಳಿಗೆ ಅನುದಾನ ಬಳಸಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next