Advertisement

Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ

04:05 PM Mar 11, 2024 | Team Udayavani |

ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ ಮತ್ತು ವ್ಯಾಪಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ -ವಹಿವಾಟಿನ ಮೇಲಿನ ನಿರ್ಬಂಧ ವನ್ನು ತಡರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

Advertisement

ಬೆಂಗಳೂರು, ಮಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ- ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಮಹಾನಗರ ಪಾಲಿಕೆಗಳಲ್ಲಿ ಇನ್ನು ಮುಂದೆ ನೈಟ್‌ಲೈಫ್ ರಂಗೇರಲಿದೆ. ಜೊತೆಗೆ ಇತರ ಅಂಗಡಿ-ಮುಂಗಟ್ಟುಗಳೂ ತೆರೆಯಲಿವೆ. ಇದುವರೆಗೆ ಇದ್ದ ರಾತ್ರಿ ವೇಳೆಯ ವ್ಯಾಪಾರ ಅವಧಿ ನಿರ್ಬಂಧವನ್ನು ಈ ಮೂಲಕ ವಿಸ್ತರಣೆ ಮಾಡಲಾಗಿದ್ದು, ವ್ಯಾಪಾರಿಗಳು ಫುಲ್ ಖುಷ್‌ ಆಗಿದ್ದಾರೆ.

ಪ್ರಮುಖವಾಗಿ ಬೆಂಗಳೂರಿನಲ್ಲಿ ತಡರಾತ್ರಿವರೆಗೂ ವ್ಯಾಪಾರಕ್ಕೆ ಅನುಮತಿ ನೀಡುವಂತೆ ವ್ಯಾಪಾರಿ ಗಳಿಂದ, ಬಾರ್‌ ಆ್ಯಂಡ್‌ ರೆಸ್ಟೋ ರೆಂಟ್‌, ಪಬ್‌, ಹೋಟೆಲ್‌ಗ‌ಳಿಂದ ಹೆಚ್ಚಿನ ಒತ್ತಾಯ ಕೇಳಿ ಬರುತ್ತಿತ್ತು. ಆದರೆ, ಅಪರಾಧ ಚಟುವಟಿಕೆಗಳು ಹೆಚ್ಚಾಗುವ ಭೀತಿಯಿಂದ ಸರ್ಕಾರವು ಇಕ್ಕೆ ಅನುಮತಿ ಕೊಟ್ಟಿರಲಿಲ್ಲ. ಆದರೆ, ಇನ್ನು ಮುಂದೆ ತಡರಾತ್ರಿ ಒಂದು ಗಂಟೆಯವರೆಗೂ ಎಲ್ಲ ಬಗೆಯ ವಾಣಿಜ್ಯ ಮಳಿಗೆಗಳು ನಿರ್ಭೀತಿ ಯಿಂದ ವ್ಯಾಪಾರ ನಡೆಸಬಹುದಾಗಿದೆ.

ವ್ಯಾಪಾರ ಹೆಚ್ಚುವ ನಿರೀಕ್ಷೆ: ತಡರಾತ್ರಿ 1 ಗಂಟೆ ಯ ವರೆಗೆ ವಹಿವಾಟು ನಡೆಸಲು ಅನು ಮತಿ ಸಿಕ್ಕಿರುವ 11 ನಗರಗಳಲ್ಲೂ ಇನ್ನು ಮುಂದೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಪಬ್‌ಗಳಲ್ಲಿ ಜನ ಸಂದಣಿ ಹೆಚ್ಚಾಗುವ ಸಾಧ್ಯತೆಗಳಿವೆ. ಇದು ವರೆಗೆ ರಾತ್ರಿ 11.30ಕ್ಕೆ ಶೆಟರ್‌ ಎಳೆಯುತ್ತಿದ್ದ ಅಂಗಡಿಗಳೆಲ್ಲ ಇನ್ನು ತಡರಾತ್ರಿವರೆಗೂ ತೆರೆದಿರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next