Advertisement

ಕೆಆರ್‌ಐಡಿಎಲ್‌ ಭ್ರಷ್ಟಾಚಾರಕ್ಕೆ ಬಿಬಿಎಂಪಿ, ಸರ್ಕಾರ ಬೆಂಬಲ: ಆರೋಪ

11:29 AM Oct 13, 2021 | Team Udayavani |

ಬೆಂಗಳೂರು: ಕಾಮಗಾರಿಗಳಲ್ಲಿ ಯಾವುದೇ ಪರಿಣಿತಿ ಇಲ್ಲದ ಮತ್ತು ಇತರೆ ಗುತ್ತಿಗೆದಾರರಿಗೆ ಉಪ ಗುತ್ತಿಗೆ ನೀಡುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ರಾಜ್ಯ ಸರ್ಕಾರವು ಕಾಯ್ದೆ ದುರ್ಬಳಕೆ ಮಾಡಿ ಅನಗತ್ಯ ವಿನಾಯ್ತಿ ನೀಡುತ್ತಿದೆ ಎಂದು ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್‌ಪಿ) ಆರೋಪಿಸಿದೆ.

Advertisement

ರಸ್ತೆ, ಚರಂಡಿ, ಕ್ಯಾಮೆರಾ, ಬೀದಿ ದೀಪ ಅಳವಿಡಕೆ ಸೇರಿದಂತೆ ಹಲವು ನಗರಾಭಿವೃದ್ಧಿ ಯೋಜನೆಗಳನ್ನು ಕೆಆರ್‌ ಐಡಿಎಲ್‌ ನಿರ್ವಹಿಸುತ್ತದೆ. ಕೆಟಿಪಿಪಿ ಕಾಯ್ದೆಯಡಿ ಸಾರ್ವಜನಿಕ ಟೆಂಡರ್‌ ನೀಡುವಾಗ ನಾಲ್ಕು ವಿನಾಯ್ತಿಗಳನ್ನು ನೀಡಬಹುದಾಗಿದೆ.

ಉದಾಹರಣೆಗೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಏಕಮಾತ್ರ ಹಕ್ಕು ಹೊಂದಿರುವ ಸಂಸ್ಥೆ ಕಾರ್ಯಗಳು, ಟೆಂಡರ್‌ಗಳಲ್ಲಿ ಹಲವು ವಿನಾಯ್ತಿ ಕೊಡಲಾಗುತ್ತದೆ. ಈ ಕಾಯ್ದೆ ಯನ್ನು ಬಳಸಿಕೊಂಡು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಹಲವು ಗುತ್ತಿಗೆಗಳನ್ನು ಕೆಆರ್‌ಐಡಿಎಲ್‌ಗೆ ನೀಡಿದೆ. ಈ ಹಿನ್ನೆಲೆ ಕಳೆದ ಐದು ವರ್ಷಗಳಲ್ಲಿ (2015-20) 198 ವಾರ್ಡ್‌ಗಳಲ್ಲಿ ಅನುಮೋದನೆ ಮಾಡಿರುವ ವಿವಿಧ ಯೋಜನೆಗಳನ್ನು ವಿಶ್ಲೇಷಣೆ ಮಾಡಲಾಗಿದೆ.

ಈ ಅವಧಿಯಲ್ಲಿ 10 ಸಾವಿರ ಕೋಟಿ ರೂ. ಒಟ್ಟು 28314 ಯೋಜನೆಗಳು ಜಾರಿಯಾಗಿವೆ. ಈ ಯೋಜನೆಗಳಲ್ಲಿ ಶೇ.50 ರಷ್ಟು 4721 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಯಾವುದೇ ಟೆಂಡರ್‌ ಪ್ರಕ್ರಿಯೆ ಇಲ್ಲದೆ ಕೆಆರ್‌ಐಡಿ‌ಲ್‌ಗೆ ನೀಡಲಾಗಿದೆ. ಇನ್ನು ಪ್ರತಿ ಯೋಜನೆಗೂ ಇಂತಿಷ್ಟು ಕಮಿಷನ್‌ ನೀಡಲಾಗುತ್ತದೆ. ಈ ಮೂಲಕ ಭ್ರಷ್ಟಾ ಚಾರಕ್ಕೆ ದಾರಿ ಮಾಡಿಕೊಟ್ಟಿಗೆ ಎಂದು ಎಂದು ಬೆಂಗಳೂರು ನವನಿರ್ಮಾಣ ಪಕ್ಷದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next