ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 11ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ.
ರಜತ್ ಅವರನ್ನು ಪಂಜರದೊಳಗೆ ಹಾಕಿ ಅದನ್ನು ಧನರಾಜ್ ಅವರು ಅನುಮತಿ ಪಡೆದು ಬಳಸುವಂತಹ ಶಿಕ್ಷೆಯನ್ನು ನೀಡಲಾಗಿದೆ.
ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಚೈತ್ರಾ ಹಾಗೂ ಐಶ್ವರ್ಯಾ ಅವರನ್ನು ರಹಸ್ಯ ಕೋಣೆಗೆ ಕಳುಹಿಸಿ ಆ ಬಳಿಕ ಇಬ್ಬರನ್ನು ಮನೆಯೊಳಗೆ ಕರೆಸಲಾಗಿತ್ತು.
ಈ ವಾರ ಎಲಿಮಿನೇಷನ್ ವಿಚಾರದಲ್ಲಿ ಯಾವುದೇ ಟ್ವಿಸ್ಟ್ ನೀಡದೆ ಒಬ್ಬರನ್ನು ಆಚೆ ಕಳುಹಿಸಲಾಗಿದೆ.
Advertisement
ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಧನರಾಜ್ – ರಜತ್ ನಡುವೆ ನಡೆದ ಮಾತಿನ ಚಕಮಕಿ ಬಗ್ಗೆ ಮಾತನಾಡಿದ್ದಾರೆ. ರಜತ್ ಅವರಿಗೆ ನಾಲಗೆ ಮೇಲೆ ಹಿಡಿತವಿರಲಿ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
Related Articles
Advertisement
ಈ ವಾರ ತ್ರಿವಿಕ್ರಮ್, ಧನರಾಜ್, ಭವ್ಯ, ಚೈತ್ರಾ, ಧನರಾಜ್, ಶಿಶಿರ್, ರಜತ್, ಹನುಮಂತು ಅವರು ನಾಮಿನೇಟ್ ಆಗಿದ್ದರು.
ಒಬ್ಬರಲ್ಲ ಇಬ್ಬರು ಔಟ್..
ಕಳೆದ ವಾರ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ನಡೆದಿದೆ. ಇಬ್ಬರು ಪ್ರಬಲ ಸ್ಪರ್ಧಿಗಳು ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಮೂಲಗಳ ಪ್ರಕಾರ ಶಿಶಿರ್ ಅವರಿಗೆ ಕಡಿಮೆ ವೋಟ್ ಗಳು ಬಂದ ಕಾರಣ ಅವರು ಈ ವಾರ ಆಚೆ ಹೋಗಿದ್ದಾರೆ. ಇನ್ನೊಂದು ಕಡೆ ಗೋಲ್ಡ್ ಸುರೇಶ್ ಅವರಿಗೆ ಮನೆಗೆ ಹೋಗಲೇ ಬೇಕಾದ ಅನಿವಾರ್ಯತೆ ಎದುರಾದ ಕಾರಣ ಅವರು ಅರ್ಧದಲ್ಲೇ ಶೋನಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಶಿಶಿರ್ ಅವರು ಆರಂಭಿಕ ಎರಡು ವಾರಗಳಲ್ಲಿ ದೊಡ್ಮನೆಯಲ್ಲಿ ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿದ್ದರು. ಆದರೆ ಅದಾದ ಬಳಿಕ ಮನೆಯಲ್ಲಿ ಇದ್ದಾರೋ ಇಲ್ಲವೋ ಎಂಬುದನ್ನು ಎನ್ನುವಷ್ಟರ ಮಟ್ಟಿಗೆ ಸೈಲೆಂಟ್ ಆಗಿದ್ದರು. ಶಿಶಿರ್ ಟಾಪ್ 5 ಅಲ್ಲಿ ಬರುತ್ತಾರೆ ಎಂದು ವೀಕ್ಷಕರ ವಲಯದಲ್ಲಿ ಮಾತು ಕೇಳಿ ಬಂದಿತ್ತು.
ಶೋಭಾ ಅವರ ಬಳಿಕ ಸುರೇಶ್ ಅವರು ದೊಡ್ಮನೆಯಿಂದ ಅರ್ಧದಲ್ಲೇ ಆಚೆ ಹೋದ ಸ್ಪರ್ಧಿಯಾಗಿದ್ದಾರೆ.
ಡಬಲ್ ಎಲಿಮಿನೇಷನ್ ನಿಂದ ಬಿಗ್ ಬಾಸ್ ವೀಕ್ಷಕರು ಶಾಕ್ ಆಗಿದ್ದಾರೆ.