Advertisement
‘ಅಳಿವು ಉಳಿವು’ ಟಾಸ್ಕ್ ನ ನಾಲ್ಕು ಸುತ್ತುಗಳಲ್ಲಿ ನರಕವಾಸಿಗಳ ಮೇಲುಗೈ ಸಾಧಿಸಿದ್ದು, ನರಕ ನಿವಾಸಿಗಳು ನಿಂತುಕೊಂಡು ಇರಬೇಕೆನ್ನುವ ನಿಯಮವನ್ನು ಉಲ್ಲಂಘಿಸಿದ ಜಗದೀಶ್ ಅವರಿಗೆ ಕ್ಯಾಪ್ಟನ್ ಹಂಸಾ ತರಾಟೆ ತೆಗೆದುಕೊಂಡರು. ಆದರೆ ಕ್ಯಾಪ್ಟನ್ ಅವರಿಗೆಯೇ ಜಗದೀಶ್ ಅವರು ಮೊದಲು ನೀವು ರೂಲ್ಸ್ ಫಾಲೋ ಮಾಡಿ ನಂತ್ರ ನಮಗೆ ಹೇಳಿ ಎಂದು ಮರು ಉತ್ತರ ನೀಡಿದರು.
ಶಿಶಿರ್ ಅವರಿಗೆ ಸಿಕ್ಕ ವಿಶೇಷ ಅಧಿಕಾರದಿಂದ ಶಿಶಿರ್ ತಮ್ಮನ್ನು ಸೇರಿಸಿ ಮೋಕ್ಷಿತಾ ಅವರನ್ನು ನಾಮಿನೇಷನ್ ನಿಂದ ಉಳಿಸಿದ್ದಾರೆ. ತಿವಿಕ್ರಮ್ ಅವರಿಗೆ ನೀಡಿದ ವಿಶೇಷ ಅಧಿಕಾರವನ್ನು ಬಳಸಿ ತಮ್ಮನ್ನು ಉಳಿಸಿಕೊಂಡು, ಅವರು ಉಗ್ರಂ ಮಂಜು ಅವರನ್ನು ನಾಮಿನೇಷನ್ ನಿಂದ ಪಾರು ಮಾಡಿದ್ದಾರೆ.
Related Articles
Advertisement
ಕಣ್ಣಿಲ್ವಾ ನಿನಗೆ ನೋಡೋಕೆ. ಊಟ ಮಾಡೋಕೆ ಇದ್ರೆ ಅವರ ಮನೆಗೆ ಹೋಗಿ ಖುಣ ತೀರಿಸಿ. ಆಟದಲ್ಲಿ ಅಲ್ಲ ಎಂದು ಜಗದೀಶ್ ಕೂಗಾಡಿದ್ದಾರೆ. ಇನ್ನು ಚೈತ್ರಾ ಕ್ಯಾಪ್ಟನ್ ಹಂಸಾ ಮೇಲೆ ಗರಂ ಆಗಿದ್ದು ಯಾವ್ ಸೀಮೆ ಕ್ಯಾಪ್ಟನ್ ನೀವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಇನ್ಮುಂದೆ ನಾವು ಯಾವ್ ಗೇಮ್ ಆಡಲ್ಲ. ಮೋಸ, ಅನ್ಯಾಯವೆಂದು ಸುರೇಶ್ ಹೇಳಿದ್ದಾರೆ.
ಈ ಟಾಸ್ಕ್ ನಲ್ಲಿ ಸ್ವರ್ಗ ನಿವಾಸಿಗಳ ಗೆದ್ದುಕೊಂಡಿದ್ದಾರೆ. ಈ ನಡುವೆ ನಾನು ಯಾವ್ ತಂಡಕ್ಕೂ ಬೆಂಬಲ ನೀಡುತ್ತಿಲ್ಲವೆಂದು ಹಂಸಾ ಅವರು ಕಣ್ಣೀರಿಟ್ಟಿದ್ದಾರೆ.
ನನಗೆ ತುಂಬಾ ಖುಷಿ ಆಗ್ತಾ ಇದೆ. ನಾನು ಇಲ್ಲಿಂದ ಹೋಗಲ್ಲ. ಮೊದಲ ವಾರ ಹೋಗಬೇಕಂಥ ಇದ್ದೆ. ಎರಡನೇ ವಾರ ಹಾಗೆ ಅನ್ನಿಸ್ತಾ ಇಲ್ಲ. ನನ್ನನ್ನು ವಾಪಸ್ ಕರೆಸಿದ ಬಿಗ್ ಬಾಸ್ ನಿರ್ಧಾರ ಸರಿಯಾಗಿತ್ತು. ಇಲ್ಲಿ ಪ್ರತಿ ಸೆಕೆಂಡ್ ಎಂಜಾಯ್ ಮಾಡ್ತಾ ಇದ್ದೇನೆ. ಪ್ರತಿ ದಿನ ಎಂಜಾಯ್ ಮಾಡ್ತಾ ಇದ್ದೇನೆ ಎಂದು ಜಗದೀಶ್ ಕ್ಯಾಮರಾ ಮುಂದೆ ಹೇಳಿದ್ದಾರೆ.
ನರಕ ನಿವಾಸಿಯ ತಂಡದ ಕ್ಯಾಪ್ಟನ್ ಆಗಿ ಮೋಕ್ಷಿತಾ ಅವರು ಆಯ್ಕೆ ಆಗಿದ್ದು, ಸ್ವರ್ಗ ನಿವಾಸಿಗಳ ಕ್ಯಾಪ್ಟನ್ ಆಗಿ ಗೌತಮಿ ಆಯ್ಕೆ ಆಗಿದ್ದಾರೆ.