ಬೆಂಗಳೂರು: ಬಿಗ್ ಬಾಸ್ ( Bigg Boss Kannada-11) ಮನೆಯಲ್ಲಿ ವಾರದ ನಾಮಿನೇಷನ್ ಪ್ರಕ್ರಿಯ ನಡೆದ ಬಳಿಕ ಈಗ ಕ್ಯಾಪ್ಟನ್ಸಿ ಓಟಕ್ಕಾಗಿ ಜಿದ್ದಾಜಿದ್ದಿ ಶುರುವಾಗಿದೆ.
ಕ್ಯಾಪ್ಟನ್ಸಿ ಓಟದಲ್ಲಿರುವ ಸದಸ್ಯರು ಮನೆಯ ಇತರೆ ಸದಸ್ಯರನ್ನು ಮನವೊಲಿಸಿ ಅವರ ಪರವಾಗಿ ಆಡುವಂತಹ ಆಯ್ಕೆಯನ್ನು ನೀಡಲಾಗಿದೆ.
ಶಿಶಿರ್ ಅವರು ತಮ್ಮ ಪರವಾಗಿ ಭವ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಜತ್ ಅವರು ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹನುಮಂತು ಅವರ ಪರ ಮಂಜು ಅವರು ಆಡಲಿದ್ದಾರೆ.
ಆದರೆ ಮೋಕ್ಷಿತಾ ಅವರು ನಾನು ಗೌತಮಿ ಹತ್ರ ಅಂತೂ ಏನೇ ಆಗಲಿ ಆಡಿ ಎಂದು ಕೇಳಲ್ಲ. ಅವರಿಂದ ನಾನು ಕ್ಯಾಪ್ಟನ್ ಆಗಬೇಕೆಂದಿದ್ದಾರೆ ನಾನು ಆಡೋದೆ ಇಲ್ಲ. ನನ್ನ ಸ್ವಾಭಿಮಾನದ ಮುಂದೆ ನನಗೆ ಯಾವುದು ದೊಡ್ಡದಲ್ಲ. ನನ್ನನ್ನು ಕಳಿಸೋದಾದ್ರೆ ನಾಳೆನೇ ಕಳಿಸಲಿ ನಾನು ಹೋಗ್ತೀನಿ ಎಂದು ಹಟ ಹಿಡಿದು ಕೂತಿದ್ದಾರೆ.
ಮೋಕ್ಷಿತಾ ಅವರ ಈ ನಿರ್ಧಾರಕ್ಕೆ ಬಿಗ್ ಬಾಸ್ ಪ್ರತಿಕ್ರಿಯಿಸಿದ್ದು, ದೊಡ್ಡ ದೊಡ್ಡ ನಿರ್ಧಾರಗಳ ಜತೆ ಅದಕ್ಕೆ ತಕ್ಕೆ ಬೆಲೆನೂ ಕಟ್ಟಬೇಕಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಇನ್ನೊಂದು ಕಡೆ ಟಾಸ್ಕ್‌ವೊಂದನ್ನು ನೀಡಿ ಅದರಲ್ಲಿ ಗೆದ್ದ ಸದಸ್ಯರು ಒಬ್ಬರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಹಾಕುವ ಅಧಿಕಾರವನ್ನು ನೀಡಲಾಗಿದೆ. ಇದರಲ್ಲಿ ರಜತ್ ಅವರು ಚೈತ್ರಾ ಅವರನ್ನು ಹೊರಗಿಟ್ಟಿದ್ದಾರೆ.
ರಜತ್ ನಿರ್ಧಾರಕ್ಕೆ ಚೈತ್ರಾ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ನಿಮ್ಮ ನಿರ್ಧಾರ ಅಲ್ಲ ಅಂತ ಗೊತ್ತಿದೆ. ಭುಜ ಬಲ ಇರೋನು ಮಾತ್ರ ಇಲ್ಲಿ ಇರಬೇಕಾಗಿಲ್ಲ. ನಿಮಗೆ ನನ್ನ ಭಯಯಿದೆ ಅಲ್ವಾ ಅದೇ ಖುಷಿ ನನಗೆ ಎಂದಿದ್ದಾರೆ.
ರಜತ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಯಾವಾಗ ನೋಡಿದ್ರು ಈ ಅಮ್ಮನದು ಗೋಳು. ಇವರನ್ನು ಆಚೆನೇ ಹಾಕೋಕೆ ಇಲ್ವಾ. ಚೈತ್ರಾ ಸೂಪರ್. ನನಗೆ ನಿಮ್ಮನ್ನು ನೋಡಿದ್ರೆ ನಗು ಬರುತ್ತದೆ. ಅವಳಿಗೆ ದಿನ ದಿನ ಹುಚ್ಚ ಜಾಸ್ತಿ ಆಗುತ್ತಿದೆ ಎಂದು ರಜತ್ ಹೇಳಿದ್ದಾರೆ. ಇದಕ್ಕೆ ತ್ರಿವಿಕ್ರಮ್ ಹೌದು ಹೌದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.