ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ವಾರದ ಟಾಸ್ಕ್ ನಡುವೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಈ ವಾರದ ಟಾಸ್ಕ್‌ಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ರಜತ್ ಹಾಗೂ ತ್ರವಿಕ್ರಮ್ ಅವರನ್ನು ಆಯಾ ತಂಡದ ನಾಯಕರನ್ನಾಗಿ ಮಾಡಲಾಗಿದೆ. ನಿನ್ನೆ ನಡೆದ ಟಾಸ್ಕ್‌ನಲ್ಲಿ ತ್ರಿವಿಕ್ರಮ್ ಅವರ ತಂಡ ಗೆದ್ದಿದೆ. ಗೆದ್ದ ತಂಡ ಸೋತ ತಂಡದ ಸದಸ್ಯರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಪಡೆಯಲಿದೆ.
ಇಂದಿನ ಟಾಸ್ಕ್‌ನಲ್ಲೂ ರಜತ್ ನೇತೃತ್ವದ ತಂಡ ಸೋತಿದ್ದು, ಎದುರಾಳಿ ತಂಡದವರು ನಾಮಿನೇಟ್ ಮಾಡಿದ್ದಾರೆ. ತ್ರಿವಿಕ್ರಮ್ ಅವರ ತಂಡ ಚರ್ಚಿಸಿ ಒಬ್ಬರನ್ನು ನಾಮಿನೇಟ್ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ರಜತ್ ಅವರನ್ನು ನಾಮಿನೇಟ್ ಮಾಡಿದ್ದಾರೆ.
ರಜತ್ ಅವರು ಎಲ್ಲರನ್ನು ವೈಯಕ್ತಿಕವಾಗಿ ಆಡಿ ಎಂದು ಪ್ರಚೋದಿಸುತ್ತಾರೆ. ಅವರನ್ನೇ ಶ್ರೇಷ್ಠವೆಂದುಕೊಂಡಿದ್ದಾರೆ ಎನ್ನುವ ಕಾರಣವನ್ನು ನೀಡಿ ತ್ರಿವಿಕ್ರಮ್ ರಜತ್ ಅವರನ್ನು ನಾಮಿನೇಟ್ ಮಾಡಿದ್ದಾರೆ.
ನಾಮಿನೇಷನ್‌ಗೆ ಕೊಟ್ಟ ಕಾರಣವನ್ನು ಕೇಳಿ ರಜತ್ ಗರಂ ಆಗಿಯೇ ರಿಯಾಕ್ಟ್ ಮಾಡಿದ್ದಾರೆ. ವೈಯಕ್ತಿಕವಾಗಿ ಆಡಿ ಯಾಕೆ ತಾಕತ್ತಿಲ್ವಾ? ನಾನು ಸುಪ್ರೀರಿಯರ್, ನಾನು ಕರಾಬು, ನಾನೇ ಮಸ್ತ್. ನಾಮಿನೇಷನ್ ಮಾಡಿದರೆ ಚೇಂಜ್ ಆಗ್ತೇನಾ ನಾನು? ನಾಳೆಯಿಂದ ಬೇರೆಯವರನ್ನು ಹೀರೋ ಅಂತೀನಾ? ನಾನೇ ಹೀರೋ ಎಂದು ಚಿಟಿಕೆ ಹೊಡೆದು ಸವಾಲು ಎಸೆದಂತೆ ಹೇಳಿದ್ದಾರೆ.
ಎರಡು ತಂಡಗಳಿಗೂ ʼಚೆಂಡು ಸಾಗಲಿ ಮುಂದೆ ಹೋಗಲಿʼ ಎಂಬ ಟಾಸ್ಕ್ ನೀಡಿದ್ದು, ಉಸ್ತುವಾರಿ ಮಾಡಿದ ಚೈತ್ರಾ ಅವರು ಫಾಲ್ ಎಂದಿದ್ದಾರೆ. ಆಟದ ನಡುವೆ ಮಧ್ಯದಲ್ಲಿ ಮಾತನಾಡಿದ ರಜತ್ ಅವರಿಗೆ ಇನ್ನು ಒಂದು ಅಕ್ಷರ ಮಾತನಾಡಿದ್ರೆ ಫಾಲ್ ಕೊಡ್ತೇನೆ ಎಂದಿದ್ದಾರೆ. ಇದಕ್ಕೆ ಚೈತ್ರಾ ರಜತ್ ಏನು ಮಾತನಾಡುತ್ತಿದ್ದೀಯಾ. ಆಟ ಆಡಬೇಡ ಬಿಡು ಎಂದು ಆಟದ ಸಾಮ್ರಾಗಿ ಎಲ್ಲವನ್ನು ಸಿಟ್ಟಿನಲ್ಲಿ ಬಿಸಾಕಿದ್ದಾರೆ. ಗೆಲ್ಲೋಕೆ ಅಂತೂ ನಿನಗೆ ಯೋಗತ್ಯ ಇಲ್ಲವೆಂದಿದ್ದಾರೆ.
ಚೈತ್ರಾ ಹೋಗಲೋ. ತಾಯ್ತಾ ಕಟಿಸುತ್ತೇನೆ ಅಂದವರು ಎಲ್ಲ ಕಟ್ಟಿಸ್ಕೊಂಡು ಹೋಗ್ತಾರೆ ಎಂದು ಚೈತ್ರಾ ಹೇಳಿದ್ದಾರೆ. ಇನ್ನೊಂದೆಡೆ ಮಂಜು ಟಿವಿಯಲ್ಲಿ ಗೇಮ್ ನೋಡ್ಕೊಂಡು ಬಂದವರದ್ದು ಎಲ್ಲ ಇದೇ ಕಥೆ ಎಂದಿದ್ದಾರೆ. ಇದನ್ನು ಕೇಳಿ ರಜತ್ ನೀನೇನು ಸಾಚಾ ತರಾ ಮಾತನಾಡುತ್ತಾ ಇದ್ದೀಯಾ. ಸಾಚಾ ಅನ್ನುವವರನ್ನು ನಾನು ನೋಡ್ಕೊಂಡೇ ಬಂದಿರೋದು ಎಂದಿದ್ದಾರೆ.
ಏನೋ ಮಾಡುತ್ತೀಯಾ, ಮುಟ್ಟುತ್ತೀಯಾ, ಮುಟ್ಟಲೋ, ತಾಕತ್ತಿದ್ರೆ ಮುಟ್ಟೋ ಎಂದು ಮಾತಿಗೆ ಮಾತು ಬೆಳೆಸಿ ಹೊಡೆಯಲು ಹೋದಂತೆ ಹೋಗಿದ್ದಾರೆ.