Advertisement
ಹನ್ನೊಂದು ಮಂದಿ ವೋಟಿಂಗ್ ನಲ್ಲಿ ಆಯ್ಕೆಯಾಗಿ ನೇರವಾಗಿ ಮನೆಯನ್ನು ಪ್ರವೇಶಿಸಿದ್ದಾರೆ. ಆ ಪೈಕಿ ಸ್ನೇಕ್ ಶ್ಯಾಮ್, ಪತ್ರಕರ್ತ ಗೌರೀಶ್ ಅಕ್ಕಿ, ‘ಪುಟ್ಟಗೌರಿ ಮದುವೆ’, ‘ನಾಗಿಣಿ- 2’ ಧಾರಾವಾಹಿಗಳ ನಟಿ ನಮ್ರತಾ ಗೌಡ, ‘ನಮ್ಮನೆ ಯುವರಾಣಿ’ ಧಾರವಾಹಿ ನಟ ಸ್ನೇಹಿತ್ ಗೌಡ, ಕನ್ನಡ ರ‍್ಯಾಪರ್ ಊರ್ಮಿಳಾ ಇಶಾನಿ, ಕಿರುತೆರೆಯ ‘ಶಿವ’ ಖ್ಯಾತಿಯ ನಟ ವಿನಯ್ ಗೌಡ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು(ತುಕಾಲಿ ಸಂತು), ಮಿಸ್ ಟ್ರ್ಯಾನ್ಸ್ ಕ್ವೀನ್ ಇಂಡಿಯಾ 2019, ಭಾರತದ ಮೊದಲ ಟ್ರ್ಯಾನ್ಸ್ ಜಂಡರ್ ಟ್ಯಾಟೂ ಆರ್ಟಿಸ್ಟ್, ಉದ್ಯಮಿ ನೀತು ವನಜಾಕ್ಷಿ, ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಅನುಭವಿ ನಟಿ ಸಿರಿ, ‘ನನ್ನಮ್ಮ ಸೂಪರ್ ಸ್ಟಾರ್’ ಸ್ಪರ್ಧಿ, ‘ಲಕ್ಷಣ’ ಧಾರಾವಾಹಿ ನಟಿ ಭಾಗ್ಯಶ್ರೀ 81% ಮತಗಳನ್ನು ಪಡೆದು ನೇರ ಪ್ರವೇಶ ಪಡೆದರು. ನೈಜೀರಿಯನ್ ಕನ್ನಡಿಗ ಮೈಕಲ್ ಬಿಗ್ ಬಾಸ್ ಮನೆಯ ಕೇಂದ್ರ ಬಿಂದುವಾಗಿದ್ದಾರೆ.
Related Articles
Advertisement
ದಿ. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್, 53% ವೋಟ್ಸ್ ಪಡೆದು ಹೋಲ್ಡ್ ನಲ್ಲಿದ್ದಾರೆ. 777 ಚಾರ್ಲಿ ಸಿನಿಮಾ ನಟಿ ಸಂಗೀತಾ ಶೃಂಗೇರಿ ಹೋಲ್ಡ್ ನಲ್ಲಿದ್ದಾರೆ.ನಟ ಕಾರ್ತಿಕ್ ಮಹೇಶ್, ರೈತ, ಕೃಷಿಕ ವರ್ತೂರು ಸಂತೋಷ್ ಲೈವ್ ಆಡಿಯೆನ್ಸ್ ಕಡೆಯಿಂದ 78% ವೋಟ್ಸ್ ಪಡೆದು ಹೋಲ್ಡ್ ನಲ್ಲಿದ್ದಾರೆ. ಆರು ಮಂದಿಗೆ ಸಾಮರ್ಥ್ಯ ತೋರಲು ಒಂದು ವಾರದ ಅವಕಾಶ ನೀಡಿ ನಿರೂಪಕ ಕಿಚ್ಚ ಸುದೀಪ್ ಮನೆಯೊಳಗೆ ಪ್ರವೇಶ ನೀಡಿದ್ದಾರೆ. ಮುಂದಿನ ಶನಿವಾರ ಆರು ಮಂದಿಯಲ್ಲಿ ಯಾರೆಲ್ಲ ಮನೆಯಿಂದ ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇಬ್ಬರಿಗೆ ನಿರಾಸೆಸಾಮಾಜಿಕ ತಾಣದ ಜನಪ್ರಿಯತೆ ಹೊಂದಿರುವ ಸುರಸುಂದರ ಅವಿನಾಶ್ 27% ವೋಟ್ ಪಡೆದು ಔಟಾಗಿದ್ದಾರೆ. ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ 38% ಲೈವ್ ವೋಟ್ ಪಡೆದು ಔಟಾಗಿದ್ದಾರೆ.