Advertisement

ಇಂದಿನಿಂದ ಸುನಿ ಬಜಾರ್‌; ಧನ್‌ವೀರ್‌-ಅದಿತಿ ಜೋಡಿ

04:35 PM Jan 15, 2018 | Sharanya Alva |

“ಚಮಕ್‌’ ನಂತರ “ಬಜಾರ್‌’ ಎಂಬ ಹೊಸ ಚಿತ್ರವನ್ನು ಸುನಿ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರ ಇಂದು ಸಂಕ್ರಾಂತಿ ಹಬ್ಬದಂದು ಪ್ರಾರಂಭವಾಗಲಿದೆ. ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಸಮಾರಂಭ ನಡೆಯಲಿದ್ದು, ಪುನೀತ್‌ ರಾಜಕುಮಾರ್‌ ಚಿತ್ರದ ಟೀಸರ್‌ ಬಿಡುಗಡೆ ಮಾಡಲಿದ್ದಾರೆ. 

Advertisement

“ಬಜಾರ್‌’ ಚಿತ್ರದ ಮೂಲಕ ಧನ್‌ವೀರ್‌ ಎಂಬ ಹೊಸ ನಟನನ್ನು ಸುನಿ ಕನ್ನಡಕ್ಕೆ ಪರಿಚಯಿಸುತ್ತಿದ್ದು, ಧನ್‌ವೀರ್‌ ಎದುರು ನಾಯಕಿಯಾಗಿ “ಧೈರ್ಯಂ’ನ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. 

ಈಗಾಗಲೇ ಧನ್‌ವೀರ್‌ ಮತ್ತು ಅದಿತಿ ಅವರ ಫೋಟೋಸೆಶನ್‌ ಮುಗಿದಿದೆ. ಈ ಚಿತ್ರದಲ್ಲಿ ಅವರಿಬ್ಬರ ಜೊತೆಗೆ ಪಾರಿವಾಳವೊಂದು ಸಹ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಪಾರಿವಾಳ ಬೆಟ್ಟಿಂಗ್‌ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. “ಬಜಾರ್‌’ ಚಿತ್ರವನ್ನು ಭಾರತಿ ಫಿಲಂ
ಪ್ರೊಡಕ್ಷನ್ಸ್‌ನಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದು, ಎಂ.ಎಲ್‌. ಪ್ರಸನ್ನ ಅವರ ಕಥೆಗೆ ಸುನಿ ಚಿತ್ರಕಥೆ ರಚಿಸಿದ್ದಾರೆ. ಸುನಿ ಮತ್ತು “ಮೃಗಶಿರ’ ಶ್ರೀಕಾಂತ್‌ ಸಂಭಾಷಣೆ ಬರೆದಿದ್ದಾರೆ. 

ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಇನ್ನು ನಟ ಶಿವಧ್ವಜ್‌, ಚಿತ್ರದ ಪ್ರೊಡಕ್ಷನ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next