ಇದು ಪ್ರೀತಿಯ ತಿಂಗಳು. ವ್ಯಾಲೆಂಟೈನ್ಸ್ ದಿನ ಮುಗಿದರೂ ಪ್ರೀತಿಯ ವಾತಾವಾರಣ ಇನ್ನೂ ಮುಗಿದಿಲ್ಲ. ತಮ್ಮ ಪ್ರೀತಿಪಾತ್ರರೊಡನೆ ಈ ಸಂತಸವನ್ನು ಆಚರಿಸಲು ಒಂದು ಕಾರಣವನ್ನು “ಕ್ಯಾರೆಟ್‌ಲೆನ್’ ಒದಗಿಸುತ್ತಿದೆ. “ಕ್ಯಾರೆಟ್‌ಲೆನ್’ ಡಿಸೈನರ್ ಆಭರಣ ತಯಾರಕ ಸಂಸೆÏಯಾಗಿದ್ದು, ಭಾರತದ ಪ್ರಖ್ಯಾತ ಬ್ರ್ಯಾಂಡ್ ತನಿಷ್ ಸಹಭಾಗಿತ್ವದಲ್ಲಿ ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವಜ್ರದ ಆಭರಣಗಳು ಕ್ಯಾರೆಟ್‌ಲೆàನ್‌ನ ವಿಶೇಷತೆ. ಭಾರತದಲ್ಲಿ ಉತ್ಕೃಷ್ಟ ಗುಣಮಟ್ಟದ ವಜ್ರದ ಆಭರಣವನ್ನು, ವಿನ್ಯಾಸದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ತಯಾರು ಮಾಡುವುದು ತಮ್ಮ ಧ್ಯೇಯ ಎಂಬುದು ಸಂಸ್ಥೆಯ ವಾಗ್ಧಾನ. ಹೆಸರಾಂತ ಆಭರಣ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿ ಈ ಆಭರಣಗಳನ್ನು ಖರೀದಿಸಬಹುದಾಗಿದೆ. ಕ್ಯಾರೆಟ್‌ಲೆನ್ ವಜ್ರದ ಆಭರಣಗಳ ಖರೀದಿದಾರರಿಗೆ ಸಹಾಯವಾಗುವಂತೆ ಹೆಲ್ಪ್ಲೈನ್ ಕೂಡಾ ತೆರೆದಿದ್ದು, ಅವರು ತಮ್ಮ ಗೊಂದಲಗಳನ್ನು ಕರೆ ಮಾಡುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಸಂಪರ್ಕ ಸಂಖ್ಯೆ- 18001020103
ಉಡುಗೊರೆಗಾಗಿ ವಾಲ್ಡ್‌ಮನ್ ಪೆನ್ನುಗಳು
ಪುರುಷರು ಮಾತ್ರವೆ ಉಡುಗೊರೆ ಕೊಡಬೇಕೆಂದಿಲ್ಲ, ಮಹಿಳೆಯರೂ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಕೊಡಬಹುದು. ಅದಕ್ಕೆ ಇಲ್ಲಿದೆ ಒಂದು ಉಪಾಯ. ಲಿವ್‌ಟೆಕ್‌ಇಂಡಿಯಾ, ಭಾರತದಲ್ಲಿ ವಾಲ್ಡ್‌ಮನ್ ಪೆನ್‌ಗಳನ್ನು ಬಿಡುಗಡೆಗೊಳಿಸಿದೆ. ಜರ್ಮನಿಯ ಐಶಾರಾಮಿ ಬರವಣಿಗೆ ಸಾಧನಗಳ ಈ ಸಂಗ್ರಹವು ಬರವಣಿಗೆಯಲ್ಲಿ ಪಫೆìಕ್ಷನ್ ಬೇಕೆನ್ನುವ ಪುರುಷ ಮತ್ತು ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸಗೊಂಡಿದೆ. ಈ ಸರಣಿಯಲ್ಲಿರುವ ಬ್ರಿಯೊ ಮತ್ತು ಪಾಕೆಟ್ ಎನ್ನು ಹೆಸರಿನ ಪೆನ್‌ಗಳು ಸ್ಟೈಲ್‌ನ ಟಚ್ ಬಯಸುವ ಮಹಿಳೆಯರಿಗೆಂದೇ ವಿಶೇಷವಾಗಿ ರೂಪಿಸಲ್ಪಟ್ಟಿವೆ. ಈ ಪೆನ್‌ಗಳ ತಯಾರಿಕೆಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕಾರ್ಟೆಡ್ಜ್/ಕನ್ವರ್ಟರ್ ಫಿಲ್ಲಿಂಗ್ ಸಿಸ್ಟಮ್ ತಂತ್ರಜ್ಞಾನವನ್ನು ಬಳಸಲಾಗಿದೆ. ನುರಿತ ಕುಶಲಕಕರ್ಮಿಗಳು ಕೈಗಳಿಂದಲೇ ರೂಪಿಸಿರುವ ಮತ್ತು ಅವರ ವಿಶೇಷವಾದ ಕ್ಲಾಸಿಕ್ ಸೊಬಗಿನಿಂದ ತಯಾರಾಗಿರುವ ಈ ಸ್ಟೆರ್ಲಿಂಗ್ ಸಿಲ್ವರ್ ಪೆನ್‌ಗಳ ಶ್ರೇಣಿಯು ಎಲ್ಲರಿಗೂ ಇಷ್ಟವಾಗುತ್ತವೆ ಎನ್ನುವುದು ಕಂಪನಿಯ ವಿಶ್ವಾಸ.