Advertisement

ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್‌ ಇಂಡಿಯಾ ಇಸ್ಪೋರ್ಟ್ಸ್‌ 2022 ವೇಳಾಪಟ್ಟಿ ಪ್ರಕಟ

05:35 PM Feb 19, 2022 | Team Udayavani |

ಬೆಂಗಳೂರು: ದಕ್ಷಿಣ ಕೊರಿಯಾದ ವಿಡಿಯೋ ಗೇಮ್‌ ಕಂಪನಿಯಾದ ಕ್ರಾಫ್ಟನ್‌, ಐಎನ್‌ಸಿ ಮತ್ತು ಬ್ಯಾಟಲ್‌ ಗ್ರೌಂಡ್ಸ್‌ ಮೊಬೈಲ್‌ ಇಂಡಿಯಾ (ಬಿಜಿಎಂಐ) ತಯಾರಕರು ತನ್ನ ಇಸ್ಪೋರ್ಟ್ಸ್‌ 2022 ಭಾರತದ ರೋಡ್‌ಮ್ಯಾಪ್‌ ಬಿಡುಗಡೆಗೊಳಿಸಿದೆ.

Advertisement

ಬಿಜಿಎಂಐನ ರೋಡ್‌ಮ್ಯಾಪ್‌, 2022ರಲ್ಲಿ ನಾಲ್ಕು ಆಕರ್ಷಕ ಪಂದ್ಯಾವಳಿಗಳು, 4 ಕೋಟಿ ರೂ.ಗಳ ನಗದು ಪುರಸ್ಕಾರ, ಮೆಗಾ ಪ್ರಶಸ್ತಿಗಳು ಮತ್ತು ಕ್ರೀಡಾ ಗೇಮರ್‌ಗಳಿಗೆ ತಮ್ಮ ಗುರುತು ಮೂಡಿಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅವಕಾಶಗಳನ್ನು ಕಲ್ಪಿಸಲಿದೆ.

ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್‌ ಓಪನ್‌ ಚಾಲೆಂಜ್‌ (ಬಿಎಂಒಸಿ)ಯೊಂದಿಗೆ ಆರಂಭಿಸಿ, ಕ್ರಾಫ್ಟಾನ್‌ ಐಎನ್‌ಸಿ, 2022ರಲ್ಲಿ ಬಿಜಿಎಂಐಗಾಗಿ ನಾಲ್ಕು ಇಸ್ಪೋರ್ಟ್ಸ್‌ ಟೂರ್ನಮೆಂಟ್‌ಗಳನ್ನು ಹಮ್ಮಿಕೊಳ್ಳಲಿದೆ. ಈಗಾಗಲೇ ಬಿಜಿಎಂಐ 6 ಲಕ್ಷಕ್ಕೂ ಹೆಚ್ಚು ನೋಂದಣಿ, 200 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಹೊಂದಿದೆ.

ಕಳೆದ ವರ್ಷ ಅದರ ಅತ್ಯುತ್ತಮ ಪ್ರದರ್ಶನದ ನಂತರ, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಈಗ ತನ್ನ ವ್ಯಾಪ್ತಿ ವಿಸ್ತರಿಸಲು ಮುಂದಾಗಿದೆ.

2022 ರಲ್ಲಿ, BGMI ನಾಲ್ಕು ಪ್ರಮುಖ ಪಂದ್ಯಾವಳಿಗಳು

  • ಬಿಎಂಒಸಿ – ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಓಪನ್ ಚಾಲೆಂಜ್
  • ಬಿಎಂಪಿಎಸ್‌ – ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಪ್ರೊ ಸೀರೀಸ್ ಸೀಸನ್ 1
  • ಬಿಎಂಐಎಸ್‌ – ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಸೀರೀಸ್
  • BMPS – ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಪ್ರೊ ಸೀರೀಸ್ ಸೀಸನ್ 2
Advertisement

2022 ರ ಮಾರ್ಗಸೂಚಿಯ ಕುರಿತು ಪ್ರತಿಕ್ರಿಯಿಸಿದ, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಕ್ರಾಫ್ಟನ್‌, ಐಎನ್‌ಸಿಯ ಮುಖ್ಯಸ್ಥ ಮಿನು ಲೀ, ” ಭಾರತದಲ್ಲಿ ಇಸ್ಪೋರ್ಟ್ಸ್ ಅಭಿವೃದ್ಧಿಗೆ ಕ್ರಾಫ್ಟನ್‌ ಬದ್ಧವಾಗಿದೆ, 2022 ರಲ್ಲಿ, ನಾವು ಹಲವು ವಲಯಗಳಲ್ಲಿ ಆಟಗಾರರಿಗೆ ವೇದಿಕೆಯನ್ನು ಒದಗಿಸಲಿದ್ದೇವೆ. ಭಾರತದಲ್ಲಿ ಹೆಚ್ಚು ಹೆಚ್ಚು ಪ್ರತಿಭೆಗಳನ್ನು ಹೊರತರುವುದು ನಮ್ಮ ಗುರಿ. ಮತ್ತು ದೇಶದಲ್ಲಿ ಬೆಳೆಯುತ್ತಿರುವ ಇಸ್ಪೋರ್ಟ್ಸ್ ವ್ಯವಸ್ಥೆಯಡಿ ಪಂದ್ಯಾವಳಿಗಳನ್ನು ಆಯೋಜಿಸಲು ನಾವು ಎದುರು ನೋಡುತ್ತಿದ್ದೇವೆ.  ಆಟಗಾರರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಬಳಸಿಕೊಳ್ಳಲು ಜಾಗತಿಕ ವೇದಿಕೆಯನ್ನು ನಾವು ಒದಗಿಸಲಿದ್ದೇವೆ” ಎಂದರು.

2022ರಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಓಪನ್ ಚಾಲೆಂಜ್ (BMOC) ಗಾಗಿ ನೋಂದಣಿಗಳು ಫೆಬ್ರವರಿ 2022 ರ ಕೊನೆಯಲ್ಲಿ ಪ್ರಾರಂಭವಾಗುತ್ತವೆ ಮತ್ತು ಮಾರ್ಚ್ ಅಂತ್ಯದಲ್ಲಿ ಪಂದ್ಯದ ಅರ್ಹತಾ ಪಂದ್ಯಗಳು ನಡೆಯುತ್ತವೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಪ್ರೊ ಸೀರೀಸ್ ಸೀಸನ್ 1 ಮತ್ತು ಸೀಸನ್ 2 ಗಾಗಿ  2 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಇದು ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಸರಣಿಯಲ್ಲೂ ಮುಂದುವರಿಯುತ್ತದೆ. 2 ಕೋಟಿ ಮೊತ್ತದ ಬಹುಮಾನದ ಭಾರತದಲ್ಲಿ ಇಸ್ಪೋರ್ಟ್ಸ್ ಈವೆಂಟ್‌ಗಾಗಿ ಅತಿದೊಡ್ಡ ಬಹುಮಾನವಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next