Advertisement

ಬಟ್ಟರ್ಗಾ ಮೌಲಾಲಿ ಜಾತ್ರೆ 16ರಿಂದ

04:15 PM Apr 14, 2017 | |

ಆಳಂದ: ತಾಲೂಕಿನ ಬಟ್ಟರ್ಗಾ ಗ್ರಾಮದ ಹಜರತ ಸೈಯ್ಯದ್‌ ಹುಸೇನ್‌ ಶಾಹವಲಿ ಉರ್ಫ್‌ ಮೌಲಾಅಲಿ ಅವರ ಜಾತ್ರಾ ಮಹೋತ್ಸವ ಏ.16ರಿಂದ ಮೂರುದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯಲಿದೆ. ಜಾತ್ರಾ ಮಹೋತ್ಸವ ಪ್ರಯುಕ್ತ ಈಗಾಗಲೇ ದರ್ಗಾದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. 

Advertisement

ಏ. 16ರಂದು ರಾತ್ರಿ 10:00ಕ್ಕೆ ಧಂಗಾಪುರದ ಮಾಜಿ ಶಾಸಕ ದಿ| ಶರಣಬಸಪ್ಪ ಮಾಲಿಪಾಟೀಲ ಅವರ ಮನೆಯಿಂದ ಗಂಧದ ಮೆರವಣಿಗೆ ಬಟ್ಟರಗಾದ ಸಾಹೇಬರ ಮನೆಗೆ ತಲಪಿ ಅಲ್ಲಿಂದ ಬೆಳಗಿನ ಜಾವ 4:30ಕ್ಕೆ ಸೈಯ್ಯದ್‌ ಖಥಬಿ ಹುಸೇನ್‌ ಊರ್ಫ್‌ ಸೈಯ್ಯದ್‌ ಭಾಷಾ ಸಾಹೇಬ ಸಜ್ಯಾದ ನಶೀನ್‌ ಅವರಿಂದ ಗಂಧ ಅರ್ಪಿಸಲಾಗುತ್ತಿದೆ.

ಏ. 17ರಂದು ರಾತ್ರಿ ದೀಪೋತ್ಸವ  ಕಾರ್ಯಕ್ರಮ. ಏ. 18ರಂದು ಕುಸ್ತಿ ನಂತರ ಗೀ ಗೀ ಪದಗಳು. ಖವಾಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next