Advertisement

BATC: ಪಿ.ವಿ. ಸಿಂಧು ಮರಳಿ ಕಣಕ್ಕೆ

11:46 PM Feb 12, 2024 | Team Udayavani |

ಶಾ ಆಲಂ (ಮಲೇಷ್ಯಾ): ಕಳೆದ ಅಕ್ಟೋಬರ್‌ನಿಂದ ಸ್ಪರ್ಧಾತ್ಮಕ ಕೂಟಗಳಿಂದ ದೂರ ಉಳಿದಿದ್ದ ಪಿ.ವಿ. ಸಿಂಧು “ಬ್ಯಾಡ್ಮಿಂಟನ್‌ ಏಷ್ಯಾ ಟೀಮ್‌ ಚಾಂಪಿಯನ್‌ಶಿಪ್‌’ (ಬಿಎಟಿಸಿ) ಮೂಲಕ ಮರಳಿ ಅಂಕಣಕ್ಕೆ ಇಳಿಯಲಿದ್ದಾರೆ. ಈ ಪಂದ್ಯಾವಳಿ ಮಂಗಳವಾರ ಮಲೇಷ್ಯಾದ ಶಾ ಆಲಂನಲ್ಲಿ ಆರಂಭವಾಗಲಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಕೂಟವಾಗಿದ್ದು, ಅಮೂಲ್ಯ ಅರ್ಹತಾ ಅಂಕಗಳನ್ನು ಗಳಿಸಬಹುದಾಗಿದೆ.

Advertisement

ಆದರೆ ಈ ಪಂದ್ಯಾವಳಿಯಲ್ಲಿ ಭಾರತದ ಪುರುಷರ ತಂಡವೇ ಪ್ರಧಾನ ಆಕರ್ಷಣೆ ಆಗಿರಲಿದೆ. ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌, ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ – ಚಿರಾಗ್‌ ಶೆಟ್ಟಿ ಉತ್ತಮ ಪ್ರದರ್ಶನ ನೀಡುವ ಕಾತರದಲ್ಲಿದ್ದಾರೆ.
ವನಿತಾ ತಂಡ “ಡಬ್ಲ್ಯು’ ವಿಭಾಗದಲ್ಲಿದೆ. ಇಲ್ಲಿನ ಇನ್ನೊಂದು ತಂಡ ಚೀನ. ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌, ಅಶ್ವಿ‌ನಿ ಪೊನ್ನಪ್ಪ-ತನಿಷಾ ಕ್ರಾಸ್ಟೊ ವನಿತಾ ಡಬಲ್ಸ್‌ ಕಣದಲ್ಲಿದ್ದಾರೆ.

ಫ್ರೆಂಚ್‌ ಓಪನ್‌ ವೇಳೆ ಎದುರಾದ ಮಂಡಿನೋವಿ ನಿಂದಾಗಿ ಸಿಂಧು ಸುದೀರ್ಘ‌ ವಿಶ್ರಾಂತಿಯಲ್ಲಿದ್ದರು. ಇವರ ಫಿಟ್‌ನೆಸ್‌ ಹಾಗೂ ಫಾರ್ಮ್ ಭಾರತದ ಪಾಲಿಗೆ ನಿರ್ಣಾಯಕವಾಗಲಿದೆ.

ಬುಧವಾರ ಭಾರತ ಸ್ಪರ್ಧೆ
ಭಾರತ ಬುಧವಾರ ತನ್ನ ಸ್ಪರ್ಧೆಗಳನ್ನು ಆರಂಭಿಸಲಿದೆ. ಪುರುಷರ ತಂಡ ಹಾಂಕಾಂಗ್‌ ವಿರುದ್ಧ, ವನಿತಾ ತಂಡ ಚೀನದ ವಿರುದ್ಧ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next