Advertisement
ಕೊಂಕಣಿ ಭಾಷಿಕರಾಗಿಶೈಕ್ಷಣಿಕ, ಆರೋಗ್ಯ, ವೈದ್ಯಕೀಯ, ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೈದ ವ್ಯಕ್ತಿ ಮಾತ್ರವಲ್ಲದೇ ಕೊಂಕಣಿ ಭಾಷಿಕರಿಂದ ಸ್ಥಾಪಿಸಲಾದ ಶಿಕ್ಷಣಸಂಸ್ಥೆ, ಕೊಂಕಣಿ ಭಾಷಿಕರ ಆಡಳಿತ ವಿರುವ ಸಂಸ್ಥೆಗಳು, ಸಮಾಜ ಸೇವೆ, ಆರೋಗ್ಯ, ವಿಜ್ಞಾನ, ಪತ್ರಿಕಾರಂಗ, ಕಲೆ, ವಾಣಿಜ್ಯೋದ್ಯಮ, ಕ್ರೀಡೆಯ ಸಾಧಕರು ಪ್ರಶಸ್ತಿಗೆ ಅರ್ಹರಾಗಿರು ತ್ತಾರೆ. 2030 ಇಸವಿಯ ವೇಳೆಗೆ ಕೊಂಕಣಿ ಸಮಾಜವನ್ನು ಒಂದು ಬಲಿಷ್ಠ ಸಮಾಜವಾಗಿ ಪರಿವರ್ತಿಸಬೇಕೆಂದು ಕನಸು ಕಂಡ ಟಿ. ವಿ. ಮೋಹನದಾಸ ಪೈ ಅವರು ಈ ಪ್ರಶಸ್ತಿಗಳನ್ನು ಪ್ರಾಯೋಜಿಸಿರುತ್ತಾರೆ.2 ಪ್ರಶಸ್ತಿಗಳು ತಲಾ 1 ಲಕ್ಷ ರೂ.ಗಳನ್ನು ಹೊಂದಿರುತ್ತವೆ. ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ತಲಾ ಒಂದು ಪ್ರಶಸ್ತಿಯನ್ನು ಪ್ರಮಾಣಪತ್ರ ದೊಂದಿಗೆ ಪ್ರದಾನ ಮಾಡ ಲಾಗುತ್ತದೆ.
ನಾಮ ನಿರ್ದೇಶನ ಗೊಂಡ ವರು ಕೊಂಕಣಿ ಮಾತೃ ಭಾಷೆ ಯಾಗಿರುವ ಏಕ ವ್ಯಕ್ತಿ ಯಾಗಿರಬಹುದು ಅಥವಾ ಒಂದು ಕೊಂಕಣಿ ಭಾಷಿಕ ರನ್ನೊಳ ಗೊಂಡ ಸಂಸ್ಥೆಯಾಗಿ ರಲೂಬಹುದು ಮತ್ತು 25 ವರ್ಷಕ್ಕೆ ಮೇಲ್ಪಟ್ಟಿರಬೇಕು. ನಾಮ ನಿರ್ದೇಶಿತ ಸಂಸ್ಥೆಗಳು ಕೊಂಕಣಿ ಮಾತೃ ಭಾಷಿ ಕರ ಆಡಳಿತಕ್ಕೊಳ ಪಟ್ಟಿರ ಬೇಕು ಮತ್ತು ಅವುಗಳ ಸ್ಥಾಪಕರು ಕೊಂಕಣಿ ಭಾಷಿಕ ರಾಗಿರಬೇಕು. ನಾಮನಿರ್ದೇಶನದ ಸಂದರ್ಭ ಸಂಸ್ಥೆಯುಕನಿಷ್ಠ 10 ವರ್ಷದಿಂದ ಅಸ್ತಿತ್ವದಲ್ಲಿ ಇರ ಬೇಕಾ ಗು ತ್ತದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು ಸ್ವತಃ ತಮ್ಮ ಬಗ್ಗೆ ನಾಮ ನಿರ್ದೇಶನ ಮಾಡಬಹುದಾಗಿದೆ. ಅರ್ಜಿಗಳನ್ನು www.vishwa konkani.org ಅಂತರ್ಜಾಲದಿಂದ ಪಡೆದು ಭರ್ತಿ ಮಾಡಿ “ಅಧ್ಯಕ್ಷರು, ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಆಯ್ಕೆ ಸಮಿತಿ, ವಿಶ್ವ ಕೊಂಕಣಿ ಕೇಂದ್ರ, ಲೋಬೊ ಪ್ರಭು ನಗರ ಕೊಂಕಣಿ ಗಾಂವ್, ಶಕ್ತಿನಗರ, ಮಂಗಳೂರು – ಈ ವಿಳಾಸಕ್ಕೆ ಸೆ. 10ರ ಒಳಗೆ ಕಳುಹಿಸಿ ಕೊಡಬೇಕು ಎಂದು ಪ್ರಕಟನೆ ತಿಳಿಸಿದೆ.