Advertisement
ಬೇಡಿಕೆ ಸರಮಾಲೆಇಲ್ಲಿ ಅಂಡರ್‌ಪಾಸ್ ಬೇಡ ಫ್ಲೈ ಓವರ್ ಬೇಕೆಂಬ ತೀವ್ರ ಬೇಡಿಕೆ ಇದೆ. ಜತೆಗೆ ಈಗ ಮಾಡಲುದ್ದೇಶಿಸಿದ ಅಂಡರ್‌ಪಾಸ್‌ನ ವಿಸ್ತಾರವಾದರೂ ಹೆಚ್ಚು ಮಾಡಿ ಎಂಬ ಬೇಡಿಕೆಯೂ ಇದೆ. ಶಾಸ್ತ್ರಿ ಸರ್ಕಲ್‌ನಲ್ಲಿ ಕಳೆದ 6 ವರ್ಷಗಳಿಂದ ಮಾಡುತ್ತಿರುವ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಿದ ನಂತರ ಬಸ್ರೂರುಮೂರುಕೈ ಅಂಡರ್‌ಪಾಸ್ ಕಾಮಗಾರಿ ಆರಂಭಿಸಿ ಅದಕ್ಕೂ ಮುನ್ನ ಸಂಚಾರ ಬದಲಾವಣೆ ಮಾಡುವುದು ಬೇಡ ಎಂಬ ಬೇಡಿಕೆ ಕೂಡಾ ಇದೆ. ಆದರೆ ಇದಾವುದಕ್ಕೂ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ನವಯುಗ ಸಂಸ್ಥೆ ಸ್ಪಂದಿಸಲಿಲ್ಲ. ಜಿಲ್ಲಾಡಳಿತ ಸ್ಪಂದಿಸುವ ಭರವಸೆ ನೀಡಿದರೂ ಈಡೇರಲಿಲ್ಲ.
ಫ್ಲೈಓವರ್ ಕಾಮಗಾರಿಯಂತೆ ಅಂಡರ್ ಪಾಸ್ ಕಾಮಗಾರಿ ನಿಧಾನಗತಿಯಲ್ಲಿ ನಡೆ ಯುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿ ಸಿದ್ದರು. ಈಗ ಅದು ಕೂಡಾ ನಿಜವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ. ಫ್ಲೈಓವರ್ ಕಾಮಗಾರಿಯನ್ನು ಐದಾರು ಜನ ಮಾಡುತ್ತಿರುವಂತೆ ಅಂಡರ್‌ಪಾಸ್ ಕಾಮಗಾರಿ ಕೂಡಾ ಐದಾರು ಜನರಿಂದ ನಡೆಯುತ್ತಿದೆ. ಕಾಂಕ್ರಿಟ್ ತಳ ಹಾಕಲಾಗಿದ್ದು ಒಂದಷ್ಟು ಕಬ್ಬಿಣದ ಸರಳು ತಂದು ರಾಶಿ ಹಾಕಲಾಗಿದೆ. ಮೊದಲೆರಡು ದಿನ ಕಾಮಗಾರಿಯಲ್ಲಿ ನಡೆದ ವೇಗ ನಂತರದ ದಿನಗಳಲ್ಲಿ ಕಾಣಲೇ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಸಹಾಯಕ ಕಮಿಷನರ್ ಅವರು ಎ.1ರ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಬಿಟ್ಟುಕೊಡುವಂತೆ ಆದೇಶ ಮಾಡಿದ್ದಾರೆ. ಆದರೆ ಕಂಪನಿ ಅಧಿಕಾರಿಗಳು ಮೇ 15ರ ಒಳಗೆ ಅಂಡರ್‌ಪಾಸ್ ಕಾಮಗಾರಿ ಮುಗಿಯಲಿದೆ ಎಂದು ಹೇಳಿದ್ದಾರೆ. ಸಂಚಾರ ಗೊಂದಲ
ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಎಲ್ಲ ವಾಹನಗಳೂ ಸರ್ವಿಸ್ ರಸ್ತೆ ಮೂಲಕ ಹೋಗುತ್ತಿದೆ. ಇದು ಇನ್ನಷ್ಟು ಸಂಚಾರ ಗೊಂದಲಕ್ಕೆ ಕಾರಣವಾಗಿದೆ. ಬಸ್ರೂ ರುಮೂರುಕೈ ಮೂಲಕ ಶಿವಮೊಗ್ಗ ಹೆದ್ದಾರಿ ಕೂಡುತ್ತಿದ್ದು ಉಡುಪಿ ಕಡೆಯಿಂದ ಬರುವವರು ಬಸ್ರೂರು ಮೂರುಕೈ ಬಳಿ ಬಸ್‌ನಿಂದ ಇಳಿವಂತಿಲ್ಲ. ಸರ್ವಿಸ್ ರಸ್ತೆ ಇಕ್ಕಟ್ಟಾದ ಕಾರಣ ಬಸ್ ನಿಲ್ಲಿಸಲು ಸ್ಥಳಾವಕಾಶ ಇಲ್ಲದೇ ಇಳಿಯುವ ಸರದಿಗಾಗಿ ಬೊಬ್ಬರ್ಯನಕಟ್ಟೆವರೆಗೆ ಹೋಗಬೇಕಾಗಿದೆ. ಮಹಿಳೆಯರು, ಮಕ್ಕಳಿಗೆ ಈಗಲೇ ಇದು ತೊಂದರೆಯಾಗುತ್ತಿದೆ. ಸರ್ವಿಸ್ ರಸ್ತೆಗಳಲ್ಲಿ ಒಳರಸ್ತೆಗಳು, ಸರಕಾರಿ ಕಚೇರಿಗಳು, ಮೆಸ್ಕಾಂ, ಎಲ್ ಐಸಿ, ಡಿವೈಎಸ್‌ಪಿ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ ಇರುವ ಕಾರಣ ಸಂಚಾರದಲ್ಲಿ ಸಮಸ್ಯೆಯಾಗುತ್ತಿದೆ.