Advertisement

ಬಸ್ರೂರು –ಬಳ್ಕೂರು ರಸ್ತೆಯಲ್ಲಿ ಹೊಂಡ

11:41 PM Sep 15, 2019 | Sriram |

ಬಸ್ರೂರು: ಬಸ್ರೂರು ಬಸ್‌ ನಿಲ್ದಾಣದ ಸಮೀಪ ಸಿಂಡಿಕೇಟ್‌ ಬ್ಯಾಂಕ್‌ ಎದುರಿಗೆ ಸಾಗುವ ರಸ್ತೆಯ ಆರಂಭದಲ್ಲಿಯೇ ಹೊಂಡ ಉಂಟಾಗಿದೆ.

Advertisement

ಈ ಡಾಮಾರು ರಸ್ತೆಯಲ್ಲಿ ಸಾಗಿದ ಅನಂತರ ಸುಮಾರು 500 ಮೀ. ಉದ್ದದ ರಸ್ತೆಗೆ ಡಾಮರು ಹಾಕಲಾಗಿದೆ. 200 ಮೀ. ಕಾಂಕ್ರೀಟ್‌ ರಸ್ತೆ ಮುಗಿಯುತ್ತಲೇ ಮತ್ತೆ ಎರಡು ವರ್ಷ ಹಿಂದೆ ಹಾಕಿದ ತೇಪೆ ಎಲ್ಲ ಕಿತ್ತು ಹೋಗಿ ಡಾಮರು ರಸ್ತೆ ಉದ್ದಕ್ಕೂ ಹೊಂಡಗಳು ಉಂಟಾಗಿವೆ. ಈ ರಸ್ತೆ ಮುಂದೆ ಗುಲ್ವಾಡಿ ವೆಂಟೆಡ್‌ ಡ್ಯಾಂ ಪಕ್ಕದಲ್ಲೇ ಸಾಗಿ ಕಂಡೂÉರು ಹಳೆ ಕಳುವಿನಬಾಗಿಲ ತನಕ ಸಾಗುತ್ತದೆ. ಇಲ್ಲಿಯೂ ಹೊಂಡಗಳು ಉಂಟಾಗಿವೆ.

ಮಳೆಗಾಲ ಮುಗಿದ ಬಳಿಕ ಕಾಮಗಾರಿ
ಬಸ್ರೂರು -ಬಳ್ಕೂರು ರಸ್ತೆ ಜಿ.ಪಂ. ರಸ್ತೆಯಾಗಿದ್ದು ಈ ರಸ್ತೆ ಹೊಸದಾಗಿ ರಚಿಸಲು ಶಾಸಕರ ಅನುದಾನ 35 ಲ.ರೂ. ಮಂಜೂರಾಗಿದೆ ಎಂದು ತಿಳಿದು ಬಂದಿದೆ. ಮಳೆಗಾಲ ಮುಗಿದ ಅನಂತರ ರಸ್ತೆ ಕಾಮಗಾರಿ ನಡೆಯಬಹುದು.
-ಅಕ್ಷತ ಶೇರೆಗಾರ್‌,
ಅಧ್ಯಕ್ಷರು, ಗ್ರಾ.ಪಂ. ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next