ಬಸ್ರೂರು: ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಜೀರ್ಣೋದ್ಧಾರ ಪುನಃ ಪ್ರತಿಷ್ಠಾ ರಜತ ಮಹೋತ್ಸವ 2024 ಮತ್ತು ಸಹಸ್ರಾಧಿಕ ಅಷ್ಟೋತ್ತರ ಶತ (1008) ಸುವರ್ಣ ಸಹಿತ ರಜತ ಕಲಶಾಭಿಷೇಕ ಸಮರ್ಪಣ ಮಹಾಸೇವಾ ಕಾರ್ಯಕ್ರಮ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ, ಆಶೀರ್ವಾದ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಡಿ.16ರಿಂದ 18ರವರೆಗೆ ನಡೆಯಲಿದೆ.
ಡಿ.16ರಂದು ಬೆಳಗ್ಗೆ ಶ್ರೀ ದೇವತಾ ಪ್ರಾರ್ಥನೆ, ಮಹಾ ಸಂಕಲ್ಪದೊಂದಿಗೆ ಧಾರ್ಮಿಕ ಅನುಷ್ಠಾನಗಳು ಪ್ರಾರಂಭಗೊಳ್ಳಲಿದ್ದು, ಧ್ವಜಾರೋಹಣ, ಅಂಕುರಾರೋಹಣ, ಕಲಶ ಪ್ರತಿಷ್ಠಾಪನ, ಪ್ರಧಾನ ಹವನ, ಲಘು ಪೂರ್ಣಾಹುತಿ, ಪಂಚಾಶತ್ ಕಲಶಾಭಿಷೇಕ, ಮಂಗಳಾರತಿ, ಸಂಜೆ ಶಾಂತಿ ಪಾಠ, ವಸಂತ ಪೂಜೆ ನಡೆಯಲಿದೆ.
ಡಿ.17ರಂದು ಬೆಳಗ್ಗೆ ಸಾನ್ನಿಧ್ಯ ಹವನ, ಮೂಲಮಂತ್ರಾದಿ ಹವನ, ಲಘು ಪೂರ್ಣಾಹುತಿ, ಮಹಾ ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಮಹಾಮಂಗಳಾರತಿ, ಸಂಜೆ ವಸಂತ ಪೂಜೆ, ರಾತ್ರಿ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಡಿ.18ರಂದು ಬ್ರಾಹ್ಮೀ ಮುಹೂರ್ತದಿಂದ ಸಾನ್ನಿಧ್ಯ ಹವನ, ವಿಶೇಷ ಹವನ, ಪ್ರಾಯಶ್ಚಿತ್ತ ಹೋಮ, 9 ಗಂಟೆಗೆ ಮಹಾ ಪ್ರಾರ್ಥನೆ, ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಗಮನ, ಶ್ರೀದೇವರ ಭೇಟಿ, 10 ಗಂಟೆಯಿಂದ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತಹಸ್ತಗಳಿಂದ ಶ್ರೀ ದೇವಿಗೆ ಸಹಸ್ರಾಧಿಕ ಅಷ್ಟೋತ್ತರ ಶತ (1008) ಸುವರ್ಣ ಸಹಿತ ರಜತ ಕಲಶಾಭಿಷೇಕ, ಉಭಯ ದೇವರಿಗೆ ಸುವರ್ಣ ಹಾರ ಸಮರ್ಪಣೆ, ಪ್ರಸನ್ನ ಪೂಜೆ, ಅಷ್ಟ ಮಂಗಲ ನಿರೀಕ್ಷಣೆ, ಪಟ್ಟಕಾಣಿಕೆ ಅರ್ಪಣೆ, ಸಭಾ ವೇದಿಕೆಯಲ್ಲಿ ಶ್ರೀ ಗುರು ಅಗ್ರ ಪೂಜಾ, ವಿಶೇಷ ಸೇವಾದಾರರಿಗೆ ಪ್ರಸಾದ, ಶ್ರೀಗಳಿಂದ ಅನುಗ್ರಹ ಆಶೀರ್ವಚನ ನಡೆಯಲಿದೆ.
ಬಳಿಕ ಮಹಾ ಪೂರ್ಣಾಹುತಿ, ಧ್ವಜಾವರೋಹಣ, ಮಹಾ ಮಂಗಳಾರತಿ, ಸೇವಾ ಪ್ರಸಾದ ವಿತರಣೆ, ಸಂಜೆ 7 ಗಂಟೆಗೆ ರಜತ ಪಲ್ಲಕಿ ಉತ್ಸವ, ವಸಂತ ಪೂಜೆ, ರಾತ್ರಿ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ನಡೆಯಲಿದೆ. ಮಧ್ಯಾಹ್ನ. ಡಿ.16ರಿಂದ 18ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಳದ ಧರ್ಮದರ್ಶಿ ಮಂಡಳಿ ತಿಳಿಸಿದೆ.