Advertisement

Varahi ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು: ಭಾಸ್ಕರ್ ಜೋಯ್ಸ್

03:45 PM Jul 12, 2024 | Team Udayavani |

ತೀರ್ಥಹಳ್ಳಿ: ವಾರಾಹಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು. ಹೆದ್ದಾರಿಗಳು ಮೇಲ್ದರ್ಜೆಗೆ ಏರಿಸುತ್ತಿರುವ ಸಂದರ್ಭದಲ್ಲಿ ನಮ್ಮ ಭಾಗದ ರಸ್ತೆಗಳನ್ನು ಸರಿಪಡಿಸಿ ಅನುಕೂಲ ಮಾಡಿಕೊಡಬೇಕು ಎಂದು ವಾರಾಹಿ ಸಂತ್ರಸ್ತರಾದ ಯಡೂರು ಭಾಸ್ಕರ್ ಜೋಯ್ಸ್ ತಿಳಿಸಿದರು.

Advertisement

ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೇಗರವಳ್ಳಿ ಹನಸ ಸಮೀಪ ಇರುವ ಕೊಪ್ಪರಗುಂಡಿ ಎಂಬ ಜಾಗಕ್ಕೆ ತೂಗು ಸೇತುವೆ ಮಾಡಬೇಕು ಇದರಿಂದ ಅ ಭಾಗದ ಜನರಿಗೆ ಅನುಕೂಲವಾಗುತ್ತದೆ.ಈಗ ಹಿನ್ನಿರು ದಾಟಬೇಕು ಎಂದರೆ ದೋಣಿಯನ್ನು ಉಪಯೋಗ ಮಾಡಬೇಕು.ಈ ಹಿಂದೆ ದೋಣಿ ಸೌಕರ್ಯ ಇದ್ದು ಈಗ ದೋಣಿ ಸೌಕರ್ಯ ಕೂಡ ಇಲ್ಲ ಊರಿನಲ್ಲಿ ಯಾರಿಗಾದರೂ ಆರೋಗ್ಯ ಸರಿ ಇಲ್ಲದಿದ್ದರೆ ಹಿನ್ನೀರಿನ ಮುಳುಗಡೆ ಯಿಂದ ತುಂಬಾ ಸಮಸ್ಯೆಯಾಗುತ್ತದೆ.ಇಲ್ಲಿನ ಹಲವು ಸಮಸ್ಯೆಗಳಿಗೆ ವಾರಾಹಿ ಪ್ರದೇಶ ಮುಳುಗಡೆ ಆಗಿರುವುದೇ ಕಾರಣ. ಯಡೂರು ಗ್ರಾಮಪಂಚಾಯಿತಿಯಿಂದ ಸುಳುಗೋಡು ಗ್ರಾಮಪಂಚಾಯಿತಿಗೆ ಜನರು ಹೋಗಬೇಕು ಎಂದರೆ ಸುಮಾರು 60 ಕಿಮೀ ಸುತ್ತು ಹಾಕಿ ಬರಬೇಕು. ಇಲ್ಲಿ ಯಾವುದೇ ಬಸ್ ಗಳ ಸಂಚಾರ ಇಲ್ಲ. ಗ್ರಾಮೀಣ ಸಾರಿಗೆ ನೀಡಬೇಕು ಎಂದು ಈ ಹಿಂದೆ ಮನವಿ ಕೊಟ್ಟು ಕೇಳಿದ್ದೇವು ಆದರೆ ಇಲ್ಲಿಯವರೆಗೆ ಸಾರಿಗೆ ಸೌಕರ್ಯ ನೀಡಿಲ್ಲ ಎಂದರು.

ಈ ಸಂದರ್ಭದಲ್ಲಿ ಮೂರ್ತಿ ಗೌಡರು, ಹಾಲಿಗೆ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: FIR: ಆಂಧ್ರ ಮಾಜಿ ಸಿಎಂ ಜಗನ್ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್… ಏನಿದು ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next